Hagga.Film Pooja and Press Meet.

Thursday, January 02, 2020

350

ಹೊಸ  ವರುಷ  ಹೊಸಬರ  ಹಗ್ಗ

        ಹೊಸ ಸಂವತ್ಸರದ ಎರಡನೇ ದಿನದಂದು ‘ಹಗ್ಗ’ ಚಿತ್ರದ ಮಹೂರ್ತ ನಡೆಯಿತು.  ನಿರ್ಮಾಪಕ ರಾಜ್‌ಭಾರದ್ವಾಜ್ ಅವರಿಗೆ ಕನಸಲ್ಲಿ ಒಂದು ಏಳೆ  ಹೊಳೆದಿದೆ. ತಡಮಾಡದೆ  ಅದನ್ನು   ವಿಸ್ತಾರ ಮಾಡಿ  ಚಿತ್ರಕತೆ ಸಿದ್ದಪಡಿಸಿ ಮೂರು ಹಾಡುಗಳಿಗೆ ರಾಗ ಒದಗಿಸಿದ್ದಾರೆ.  ಸಿನಿಮಾ ಕುರಿತು ಹೇಳುವುದಾದರೆ  ಕಾಲ್ಪನಿಕ  ಊರು  ನಾಗೇಕೊಪ್ಪಲುದಲ್ಲಿ  ಬಹಳ ವರ್ಷಗಳಿಂದ ನಿಗೂಡ ಸಮಸ್ಯೆಯಿಂದ  ಜನರು  ಸಾವಿಗೆ ಶರಣಾಗುತ್ತಿರುತ್ತಾರೆ.  ಈ ಸಾವಿಗೂ ಹಗ್ಗಕ್ಕೂ  ಸಂಬಂದವಿರುತ್ತದೆ.  ಇದರ ಕಾರಣ  ಯಾರಿಗೂ ತಿಳಿದಿರುವುದಿಲ್ಲ. ಕಥಾನಾಯಕ ಹಳ್ಳಿಯಿಂದ ಪಟ್ಟಣಕ್ಕೆ ಬರುತ್ತಾನೆ. ಅಲ್ಲಿ ಹುಡುಗಿಯ ಪರಿಚಯವಾಗಿ  ಪ್ರೀತಿ ಚಿಗುರುತ್ತದೆ. ನಂತರ ಯಾವುದೇ ಅಪೇಕ್ಷೆ ಇಲ್ಲದೆ ಆಕಸ್ಮಿಕವಾಗಿ ಸದರಿ ಸ್ಥಳಕ್ಕೆ ಹೋದಾಗ ಎಲ್ಲಾ ವಿಷಯವು ತಿಳಿಯುತ್ತದೆ. ಅಂತಿಮವಾಗಿ ಇಬ್ಬರು ಸೇರಿಕೊಂಡು  ಕ್ಲೇಶವನ್ನು ಹೇಗೆ ನಿವಾರಣೆ ಮಾಡುತ್ತಾರೆ ಎಂಬುದನ್ನು ಕಾಮಿಡಿ, ಸೆಸ್ಪನ್ಸ್, ಥ್ರಿಲ್ಲರ್ ಮೂಲಕ ತೋರಿಸಲಾಗುವುದು. ಚಿಕ್ಕಮಗಳೂರು ದಟ್ಟ ಕಾಡುಗಳು, ತೀರ್ಥಹಳ್ಳಿ, ಮೈಸೂರು ಮತ್ತು ಬೆಂಗಳೂರು ಸುತ್ತಮುತ್ತ ೪೫ ದಿನಗಳಲ್ಲಿ  ಚಿತ್ರೀಕರಣ ನಡೆಸಲು ಯೋಜನೆ ರೂಪಿಸಲಾಗಿದೆ.

       ಅಣ್ಣನ  ಕತೆಗೆ ತಮ್ಮ ವೇಣುಭಾರದ್ವಾಜ್  ಗೌಡರ ಮಗನಾಗಿ ನಾಯಕ ಮತ್ತು ಪಾಲುದಾರ.  ವರದಿಗಾರಳಾಗಿ ಪ್ರಿಯಾಂಕಾಆರೋರ ನಾಯಕಿ.  ಬೇರೆಯವರಿಗೆ ನೋವು ತಂದು ಅದನ್ನು ನೋಡಿ ಖುಷಿ ಪಡುತ್ತಾನೆ. ಕೊನೆಗೆ ತಾನು ಮಾಡುವುದು ಸರಿಯಲ್ಲವೆಂದು ಅರಿತು ಗುಣದಲ್ಲಿ ಬದಲಾವಣೆಯಾಗುವ ತಬಲನಾಣಿ ನಾಯಕನಿಗೆ ಮಾಮ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.  ವಂದನಾ ಸಂಪ್ರದಾಯಸ್ಥ ಹುಡುಗಿಯಾಗಿ ಫ್ಲ್ಯಾಷ್‌ಬ್ಯಾಕ್‌ದಲ್ಲಿ ಬರುತ್ತಾರೆ. ಉಳಿದಂತೆ ಸಿಂಬ, ನಿಶಾಂತ್ ಮುಂತಾದವರು ನಟಿಸುತ್ತಿದ್ದಾರೆ. ಕಿರುಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ಅವಿನಾಶ್.ಎನ್ ನಿರ್ದೇಶಕರಾಗಿ ಬಡ್ತಿ ಹೊಂದಿದ್ದಾರೆ. ಎಂ.ಟೆಕ್‌ದಲ್ಲಿ ಚಿನ್ನದ ಪದಕ ಗಳಿಸಿರುವ  ಪ್ರಸನ್ನಭೋಜಶೆಟ್ಟರ್ ಬಣ್ಣದ ಲೋಕಕ್ಕೆ ಮರುಳಾಗಿ ಟೆಕ್ಕಿ ಉದ್ಯೋಗಕ್ಕೆ ಬೆನ್ನು  ತೋರಿಸಿ, ಮುಂದೆ ಎ.ಆರ್.ರೆಹಮಾನ್ ಬಳಿ ಕೆಲಸ ಕಲಿತಿದ್ದಾರೆ. ಇದರ ಸಂವೇದನೆಯಿಂದಲೇ  ಚಿತ್ರಕ್ಕೆ ಸಂಗೀತ, ಹಿನ್ನಲೆ  ಶಬ್ದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಛಾಯಾಗ್ರಹಣ ಅವಿನಾಶ್.ಜಿ, ಸಂಕಲನ ಬಾಲ, ಸಂಭಾಷಣೆ ಮನೋಹರ್.ಎಸ್.ಪಿ, ನೃತ್ಯ ಮೋಹನ್, ಸಾಹಸ ಅಲ್ಟಿಮೇಟ್‌ಶಿವು ಅವರದಾಗಿದೆ.  ಡಾ.ನಾಗೇಂದ್ರಪ್ರಸಾದ್ ಸಾಹಿತ್ಯಕ್ಕೆ ವಿಜಯಪ್ರಕಾಶ್, ಸಂಚಿತ್‌ಹೆಗ್ಗಡೆ, ಅನುರಾಧಭಟ್ ಧ್ವನಿಯಾಗಿದ್ದಾರೆ. ಜ್ಘಾನಂ ನಿರ್ಮಾಣ ಮಾಡಿದ ಸೋದರರು ಈಗ ಎರಡನೇ ಪ್ರಯತ್ನ ಎನ್ನುವಂತೆ ವಸಂತ ಸಿನಿ ಕ್ರಿಯೆಶನ್ಸ್  ಮೂಲಕ ಬಂಡವಾಳ ಹೂಡುತ್ತಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,