Trikona.Film Press Meet.

Saturday, January 04, 2020

615

ತ್ರಿಕೋನಅಂದರೆ ತಾಳ್ಮೆ,ಅಹಂ ಮತ್ತು ಶಕ್ತಿ

         ‘ಬರ್ಫಿ’ ಎನ್ನುವಸುಂದರ ಪ್ರೇಮಕತೆಯನ್ನು ನೀಡಿದ್ದ  ನಿರ್ದೇಶಕ ಪಿ.ರಾಜಶೇಖರ್ ಈ ಬಾರಿ ‘ತ್ರಿಕೋನ’ ಚಿತ್ರಕ್ಕೆ ವಿನೂತನಕತೆ ,ಚಿತ್ರಕತೆ ಬರದುಅದನ್ನು ಬೇರೆಯವರಿಂದ ನಿರ್ದೇಶನ ಮಾಡಿಸಿದ್ದಾರೆ. ಎರಡು ಪಾತ್ರಗಳ ಕುರಿತಂತೆ ೧೪೩ ಸಿನಿಮಾಕ್ಕೆಆಕ್ಷನ್‌ಕಟ್ ಹೇಳಿರುವ ಚಂದ್ರಕಾಂತ್‌ಅವರಿಗೆಸಾಹಿತ್ಯ, ನಿರ್ದೇಶನ ಮಾಡುವಜವಬ್ದಾರಿಯನ್ನು ವಹಿಸಿದ್ದಾರೆ. ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಸಿದ್ದಗೊಳ್ಳುತ್ತಿದ್ದು, ಆಯಾ ಭಾಷೆಗೆತಕ್ಕಂತೆಚಿತ್ರಕತೆ ಸಿದ್ದಪಡಿಸಿರುವುದು ವಿಶೇಷ. ಒಂದೇಕತೆ, ಪ್ರಾರಂಭ, ಅಂತ್ಯಇರಲಿದ್ದು, ತೋರಿಸುವ ಪರಿ ಮೂರುರೀತಿಯಾಗಿರುತ್ತದೆ.ಇದಕ್ಕಾಗಿ ಮೂರು ಸಂಗೀತ ನಿರ್ದೇಶಕರುಅಲ್ಲಿನ ನೇಟಿವಿಟಿಗೆತಕ್ಕಂತೆ ಶಬ್ದ ಒದಗಿಸಿದ್ದಾರೆ.ಎಲ್ಲರಜೀವನದಲ್ಲಿ ನಡೆದಿರುವ, ನಡೆಯುತ್ತಿರುವ, ನಡೆಯುವಂತೆಇರುವ ಘಟನೆಗಳು ಇರಲಿದೆ. ೨೫ ವಯಸ್ಸಿನ, ನಲವತ್ತರ ಆಸುಪಾಸಿನ, ಹಿರಿಯ ನಾಗರೀಕ ಹೀಗೆ ಮೂರು ವಯೋಮಾನದವರ ಸನ್ನಿವೇಶಗಳು ದೃಶ್ಯಗಳ ಮೂಲಕ ನೋಡಿಸಿಕೊಂಡು ಹೋಗುತ್ತದೆ.

ಅಹಂ, ಶಕ್ತಿ ಮತ್ತು ತಾಳ್ಮೆ ಒಂದಕ್ಕೊಂದು ಪೈಪೋಟಿಗೆ ಬಿದ್ದಾಗಯಾವರೀತಿಇರುತ್ತದೆ.ಮನುಷ್ಯನ ವಯೋಮಾನದಲ್ಲಿಇವೆಲ್ಲವು ಬಂದು ಹೋಗುತ್ತದೆ.ಮನುಷ್ಯನಿಗೆ ಅಹಂ ಬರುತ್ತದೆ.ಕಾಲಕ್ರಮೇಣ ಪರಿಸ್ಥಿತಿಗೆ ಸಿಕ್ಕಿಹಾಕಿಕೊಂಡು ಅದುಕಡಿಮೆಯಾಗುತ್ತಾಕರಗುತ್ತದೆ. ಶಕ್ತಿಯುಅದೇ ಸಾಲಿಗೆ ಸೇರಿಕೊಂಡು ನಿತ್ರಾಣಗೊಳ್ಳುತ್ತದೆ.ಆದರೆತಾಳ್ಮೆ ಎನ್ನುವುದುಯಾರಿಗೂ ಅಷ್ಟು ಸುಲಭವಾಗಿ ಬರೋಲ್ಲ. ಬಂದರೂ ಹೋಗೋಲ್ಲ. ಅವನ ಏಳಿಗೆಯನ್ನು ಒಂದು ಹಂತದಲ್ಲಿತಲುಪಿಸುವುದಕ್ಕೆಆತನ ಯಶಸ್ಸಿನೊಂದಿಗೆ  ಬರುತ್ತಾ ಮುಂದೆಅಳಿವಿನ ಜೊತೆಜೊತೆಗೆಇರುತ್ತೆ. ಅಂತಿಮವಾಗಿಸಹಿಷ್ನುತೆಜೀವನದಲ್ಲಿ ಎಷ್ಟು ಮುಖ್ಯಎಂಬುದನ್ನುಹೇಳುವ ಪ್ರಯತ್ನವೇಚಿತ್ರದತಿರುಳಾಗಿದೆ. ನಾಲ್ಕು ಹಂತದಲ್ಲಿ ೫೦ ದಿನಗಳ ಕಾಲ  ಬೆಂಗಳೂರು, ಸುಬ್ರಮಣ್ಯ, ಕಡಬ, ಪುತ್ತೂರು, ಮಂಗಳೂರು, ಸಕಲೇಶಪುರದಲ್ಲಿಚಿತ್ರೀಕರಣ ನಡೆಸಲಾಗಿದೆ.

ಸ್ಟಂಟ್‌ಮ್ಯಾನ್, ಪೋಷಕ ಕಲಾವಿದ, ಕ್ರೀಡಾಪಟು,ಕರಾಟೆ, ಜಾಹಿರಾತುದಲ್ಲಿ ಕಾಣಿಸಿಕೊಂಡಿರುವ ರಾಜ್‌ವೀರ್‌ಅಸ್ಮಿತೆಯುಳ್ಳ ಉದ್ಯಮಿಯಾಗಿತರುಣ.೪೦ರ ವಯಸ್ಸಿನ ಜೋಡಿಗಳಾಗಿಅಚ್ಯುತರಾವ್-ಸುಧಾರಾಣಿ, ಹಿರಿಯ ದಂಪತಿಗಳಾಗಿ ಸುರೇಶ್‌ಹೆಬ್ಳಿಕರ್-ಲಕ್ಷೀ, ನಗಿಸಲು ಸಾಧುಕೋಕಿಲ ಮುಂತಾದವರು ನಟಿಸಿದ್ದಾರೆ.ದೇಹ ಪ್ರದರ್ಶನದಲ್ಲಿಎರಡು ಬಾರಿ ಮಿ.ಕರ್ನಾಟಕ, ಒಮ್ಮೆ ಮಿ.ಇಂಡಿಯಾ  ಪ್ರಶಸ್ತಿ ಪಡೆದಿರುವ ಬಳ್ಳಾರಿಯ ಮಾರುತೇಶ್ ಮೂವರನ್ನು ಪರೀಕ್ಷೆಗೆ ಒಳಪಡಿಸುವ ನಕರಾತ್ಮಕ ಪಾತ್ರದಲ್ಲಿ ಅಭಿನಯಿಸಿರುವುದು ಹೊಸ ಅನುಭವ. ಎರಡು ಹಾಡುಗಳಿಗೆ ಸಂಗೀತ ಕಕಕಕಕ, ಛಾಯಾಗ್ರಹಣ ಕಕಕಕಕಕಕ, ಸಂಕಲನ ಕಕಕಕಕಕಕಅವರದಾಗಿದೆ. ೨೦೧೭ರಲ್ಲಿ ಶುರುವಾದಚಿತ್ರದ ಮೊದಲ ಪ್ರತಿ ಹೂರಬಂದಿದ್ದು ಸದ್ಯದಲ್ಲೆ ಸೆನ್ಸಾರ್ ಅಂಗಳಕ್ಕೆ ಹೋಗಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,