Kar.Film Camaramens Assn.Press Meet.

Saturday, February 01, 2020

40

ಚಲನಚಿತ್ರಛಾಯಾಗ್ರಾಹಕರಕುಟುಂಬದ  ಸಮಾರಂಭ

ಅಂದು ಹಿರಿಯ ಛಾಯಾಗ್ರಾಹಕರುಗಳಾದ ಡಿ.ವಿ.ರಾಜರಾಂ, ಆರ್.ಸಿ.ಮಾಪಾಕ್ಷಿ, ಎಸ್.ರಾಮಚಂದ್ರ ಮತ್ತು ಬಿ.ಸಿ.ಗೌರಿಶಂಕರ್ ಹುಟ್ಟು ಹಾಕಿದ್ದ ‘ಕರ್ನಾಟಕ ಚಲನಚಿತ್ರಛಾಯಾಗ್ರಾಹಕರ ಸಂಘ’ ಇಂದು ೩೫ನೇ ವರ್ಷಕ್ಕೆಹೆಜ್ಜೆಇಟ್ಟಿದೆ. ಪ್ರಾರಂಭದಲ್ಲಿ ೩೫ಎಂಎಂ ಕ್ಯಾಮಾರದಲ್ಲಿ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿತ್ತು. ಕಾಕತಾಳೀಯವೆನ್ನುವಂತೆ ಸಂಘವು ಸಹ ಇದೇ ಸಂಖ್ಯೆಗೆಕಾಲಿಟ್ಟಿರುವುದರಿಂದ ‘ಸಿನಿ ೩೫’ ಎಂಬ ಕಾರ್ಯಕ್ರಮವನ್ನುಏರ್ಪಾಟು ಮಾಡಲುಯೋಜನೆ ಹಾಕಿಕೊಂಡಿದೆ. ಇದರಲ್ಲೂ ಹಲವು ವಿಶೇಷತೆಗಳನ್ನು ಹಮ್ಮಿಕೊಂಡಿದ್ದಾರೆ.ಇಷ್ಟು ವರ್ಷತೆರೆ ಹಿಂದೆದುಡಿದ ಲೈಟ್ ಬಾಯ್, ಸಹಾಯಕರು, ಗೇಟ್‌ಕೀಪರ್, ಪೋಸ್ಟರ್‌ಅಂಟಿಸುವವರು, ಆಪರೇಟರ್ ಹೀಗೆ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ ಸಾಧಕರುಗಳನ್ನು ಗುರುತಿಸಿ ಒಟ್ಟಾರೆ ೧೦೮ ಜನರನ್ನುಒಂದೇ ವೇದಿಕೆಯಲ್ಲಿ ಸನ್ಮಾನಿಸಲಾಗುವುದು.ಜೊತೆಗೆಎಲ್ಲರಕುಟುಂಬದವರನ್ನುಆಹ್ವಾನಿಸಲಾಗಿದೆ.

ಇದರಲ್ಲಿಎಲ್ಲಾ ವಿಭಾಗದ ಅಧ್ಯಕ್ಷರುಗಳು ಮತ್ತುಚೆನ್ನೈ, ಹೈದರಾಬಾದ್, ಮುಂಬೈ ಹಾಗೂ ಕೋಲ್ಕತ್ತಾದ ಸಂಘದಸಭಾಧ್ಯಕ್ಷರುಗಳು ಪಾಲ್ಗೋಳ್ಳಲಿದ್ದಾರೆ.ಪ್ರಚಾರದ ಸಲುವಾಗಿ ಕಳೆದವಾರ ೧೦೦ ಕ್ಯಾಮಾರಗಳು, ಕ್ಯಾಮಾರಮೆನ್‌ಗಳು ಸೇರಿ ಸೆರೆಹಿಡಿದ ಹಾಡಿನಲ್ಲಿಉಪೇಂದ್ರ, ಧನಂಜಯ್, ವಿನೋಧ್‌ಪ್ರಭಾಕರ್ ಸೇರಿದಂತೆಕಲಾವಿದರುಕಾಣಿಸಿಕೊಂಡಿದ್ದಾರೆ.ಅಧ್ಯಕ್ಷಜೆ.ಜಿ.ಕೃಷ್ಣ, ಉಪಾಧ್ಯಕ್ಷ ಎ.ವಿ.ಕೃಷ್ಣಕುಮಾರ್, ಪದಾಧಿಕಾರಿಗಳ ಸಾರಥ್ಯದಲ್ಲಿ ೯ರ ಭಾನುವಾರದಂದುಚೌಡಯ್ಯ ಮೆಮೋರಿಯಲ್ ಹಾಲ್‌ದಲ್ಲಿ  ಬೆಳಿಗ್ಗೆ ೧೧ ರಿಂದರಾತ್ರಿ೮ರ ವರೆಗೆಅದ್ದೂರಿಯಾಗಿಕಾರ್ಯಕ್ರಮವುನಡೆಯಲಿದೆ. ಶಿವರಾಜ್‌ಕುಮಾರ್, ದರ್ಶನ್, ಸುದೀಪ್, ಪುನೀತ್‌ರಾಜ್‌ಕುಮಾರ್, ಯಶ್ ಸೇರಿದಂತೆ ಬಹುತೇಕಚಿತ್ರರಂಗದವರು ಸಹಕಾರ ನೀಡುವಜೊತೆಗೆಹಾಜರಾಗುತ್ತಿರುವುದು ಮತ್ತೋಂದು ಹಿರಿಮೆಯಾಗಿದೆ.

 

 

Copyright@2018 Chitralahari | All Rights Reserved. Photo Journalist K.S. Mokshendra,