Amruthamati.Movie Audio Rel.

Saturday, February 01, 2020

573

ಅಮೃತಮತಿಧ್ವನಿಸಾಂದ್ರಿಕೆಜನಾರ್ಪಣೆ

ಹಿರಿಯ ಸಾಹಿತಿ ಬರಗೂರುರಾಮಚಂದ್ರಪ್ಪ ನಿರ್ದೇಶನ ಮಾಡಿರುವ ‘ಅಮೃತಮತಿ’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಗೊಂಡಿತ್ತು. ಶೀರ್ಷಿಕೆ ಹೆಸರಿನಲ್ಲಿ ಹರಿಪ್ರಿಯಾ ನಟನೆಮಾಡಿದ್ದು, ಗ್ರಾಂಥಿಕಕನ್ನಡ ಭಾಷೆಯ ಸಂಭಾಷಣೆಯನ್ನುಒಂದು ದಿನದಲ್ಲಿಡಬ್ದಿಂಗ್  ಮುಗಿಸಿದ್ದಾರೆ. ಐತಿಹಾಸಿಕ ಕತೆಯಲ್ಲಿಕಿಶೋರ್‌ಯಶೋಧರನಾಗಿ ಕಾಣಿಸಿಕೊಂಡಿದ್ದಾರೆ. ೧೩ನೇ ಶತಮಾನದಜನ್ನಕವಿ ರಚಿಸಿದ ‘ಯಶೋಧರಚರಿತೆ’ ಕಾವ್ಯವನ್ನು ಆಧರಿಸಿದೆ.ಯುವರಾಜಯಶೋಧರನ ಪತ್ನಿಅಮೃತಮತಿಯುಒಂದು ದಿನ ಕುದುರೆ ಲಾಯದಉಸ್ತುವಾರಿ ಅಷ್ಟಾವಂಕನ ಹಾಡಿಗೆ ಮೋಹಿತಳಾಗುತ್ತಾಳೆ.ಅದುಯಶೋಧರನಿಗೆಗೊತ್ತಾಗಿಅವರಿಬ್ಬರನ್ನುಕೊಲ್ಲಲುಯತ್ನಿಸುತ್ತಾನೆ. ಆದರೆಅದು ಸಾಧ್ಯವಾಗುವುದಿಲ್ಲ. ಕೊನೆಗೆ  ಆಕೆಯೇಗಂಡ ಹಾಗೂ ಅತ್ತೆ ಮಾವಂದಿರ ಸಾವಿಗೆ ಕಾರಣಳಾಗುತ್ತಾಳೆ. ಆನಂತರ ಜನ್ಮಾಂತರಗಳಲ್ಲಿ ಮರುಹುಟ್ಟುಪಡೆಯುತ್ತಾರೆನ್ನುವುದು ಮೂಲ ಕತೆಯ ಸಾರಾಂಶವಾಗಿದೆ. ಹೀಗೆ ಎರಡು ವಿಭಿನ್ನ ನೆಲೆಗಳ ಮುಖಾಮುಖಿ ಮತ್ತು ವೈರುದ್ಯಗಳನ್ನು  ತೋರಿಸುವ ಪ್ರಯತ್ನ ಮಾಡಲಾಗಿದೆ. ಕಾದಂಬರಿಯಲ್ಲಿಆನೆಲಾಯವೆಂದು ಹೇಳಿದೆ.ಚಿತ್ರದಲ್ಲಿಕುದರೆಲಾಯಅಂತತೋರಿಸಲಾಗಿದೆ. 

ಕುದರೆಕಾಮದ ಸಂಕೇತ.ನಾಯಕಿಗೆಅರಮನೆ ಸರೆಮನೆಯಾಗಿರುವುದರಿಂದ ಹೊರಮನೆಗೆ ಹೋಗುತ್ತಾಳೆ.ಅರಮನೆ ಭೋಗಆದರೆ, ಕುದರೆಲಾಯ ಸುಖ ಆಗುತ್ತದೆ.ಇವರೆಡರ ಸಂಬಂದ ವ್ಯತ್ಯಾಸಗಳನ್ನು ಹೇಳುತ್ತಾ ಹೋಗುತ್ತದೆ.

ಅಮೃತಮತಿ ಮತ್ತುಅರಮನೆ ವ್ಯವಸ್ಥೆಯ ನಡುವಿನ ಮುಖ್ಯಕಥನದಲ್ಲಿದ್ದ ಕೆಲವು ಅಂಶಗಳಿಗೆ ಉತ್ತರ ಹುಡುಕುತ್ತಾ ಮರು ವ್ಯಾಖ್ಯಾನದ ಹೊಸ ರೂಪ ನೀಡಲಾಗಿರುವುದಾಗಿ ನಿರ್ದೇಶಕರು ಹೇಳಿಕೊಂಡಿದ್ದಾರೆ.ತಾರಗಣದಲ್ಲಿ ಸುಂದರರಾಜ್, ಪ್ರಮೀಳಾಜೋಷಾಯ್, ಸುಪ್ರಿಯಾರಾವ್, ಅಂಬರೀಷ್‌ಸಾರಂಗಿ, ವತ್ಸಲಾಮೋಹನ್ ಮುಂತಾದವರು ನಟಿಸಿದ್ದಾರೆ. ಐದು ಹಾಡುಗಳ  ಶಮಿತಾಮಲ್ನಾಡ್ ಸಂಗೀತದಲ್ಲಿಕನ್ನಡ ಕೋಗಿಲೆ ಖ್ಯಾತಿಯ ಖಾಸಿಂ ಒಂದುಗೀತೆ ಹಾಡಿದ್ದಾರೆ.ಸುರೇಶ್‌ಅರಸ್ ಸಂಕಲನ, ನಾಗರಾಜಅದವಾನಿ ಛಾಯಾಗ್ರಹಣವಿದೆ. ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣನವರು ‘ಇಂಚರ ಪುಟ್ಟಣ್ಣ ಪ್ರೊಡಕ್ಷನ್’ ಸಂಸ್ಥೆಯಿಂದ ಚೊಚ್ಚಲಬಾರಿ ನಿರ್ಮಾಣ ಮಾಡಿದ್ದಾರೆ. ಶನಿವಾರದಂದುಜರುಗಿದಧ್ವನಿಸಾಂದ್ರಿಕೆಜನಾರ್ಪಣೆಕಾರ್ಯಕ್ರಮದಲ್ಲಿ ೨೦೧೮ರ ಶ್ರೇಷ್ಟನಟ ಪ್ರಶಸ್ತಿಗೆ ಭಾಜನರಾಗಿರುವರಾಘವೇಂದ್ರರಾಜ್‌ಕುಮಾರ್‌ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದರಾಘಣ್ಣಅಪ್ಪಾಜಿಗೆದಾದಫಾಲ್ಕೇ ಪ್ರಶಸ್ತಿ ಬಂದ ಸಮಯದಲ್ಲಿ ರಾಷ್ಟ್ರಪತಿಗಳು ಗೌರವಿಸಿದಾಗ ಅವರುಕಣ್ಣು ಮುಚ್ಚಿಕೊಂಡಿದ್ದರು. ನಂತರಇದರ ಬಗ್ಗೆ ವಿವರಣೆ ಕೇಳಿದಾಗ ಕವಿರತ್ನ ಕಾಳಿದಾಸದಲ್ಲಿ ಕಾಳಿದಾಸನು ವಿದ್ಯಾದಾನ ಮಾಡಿದದೇವಿ ಪಾದಕಮಲಗಳಿಗೆ  ಅರ್ಪಿಸುತ್ತಾನೆ. ಅದರಂತೆತಾನು ಸಹ ಎಲ್ಲವನ್ನುಆಕೆಯ ಪಾದಕ್ಕೆಅರ್ಪಿಸಲುಕಣ್ಣು ಮುಚ್ಚಿಕೊಂಡಿದ್ದೇನೆಂದು ಹೇಳಿದ್ದರು. ಇಂದು ಹಿರಿಯರು ಆರ್ಶಿವಾದ ಮಾಡಿರುವುದರಿಂದಜವಬ್ದಾರಿ ಹೆಚ್ಚಾಗಿದೆಎಂದರು.

                              

 

 

Copyright@2018 Chitralahari | All Rights Reserved. Photo Journalist K.S. Mokshendra,