Munduvareda Adhyaya.Movie Trailer Rel.

Wednesday, January 29, 2020

102

ಆದಿತ್ಯ ಹೊಸ ಅಧ್ಯಾಯಕ್ಕೆದರ್ಶನ್ ಸಾಥ್

ಗ್ಯಾಪ್ ನಂತರ ನಟಿಸಿರುವ ಆದಿತ್ಯಅಭಿನಯದ ‘ಮುಂದುವರೆದಅಧ್ಯಾಯ’ ಚಿತ್ರದ ತುಣುಕುಗಳಿಗೆ ದರ್ಶನ್ ಚಾಲನೆ ನೀಡಿದರು. ನಂತರ ಮಾತನಾಡುತ್ತಾ ನಾವಿಬ್ಬರು ಸೇರಿದಾಗ ಸಿನಿಮಾ ಬಗ್ಗೆ ಚರ್ಚೆ ಮಾಡುವುದಿಲ್ಲ. ಲವ್‌ನಿಂದ ಶುರುವಾಗಿಇಲ್ಲಿಯವರೆಗೂಆತ ನಡೆದುಕೊಂಡು ಬಂದದಾರಿತುಂಬಾ ವಿಭಿನ್ನವಾಗಿದೆ. ದರ್ಶನ್‌ಗೆದುಡ್ಡುಕೊಟ್ಟರೆಕಾಚಾದಲ್ಲಿಓಡುತ್ತಾನೆಂದುಆರೋಪ ಮಾಡಿದ್ದರು.ಪಾತ್ರದ ಸಲುವಾಗಿ ಏನು ಮಾಡಿದರೂತಪ್ಪಿಲ್ಲ. ಡೆಡ್ಲಿಸೋಮದಲ್ಲಿಅದಿತ್ಯರಗಡ್ ಆಗಿ ಕಾಣಿಸಿಕೊಂಡಿದ್ದರು.ಶೀರ್ಷಿಕೆಯನ್ನು ಈ ರೀತಿಯೂ ಹೇಳಬಹುದು.ಈಗಾಗಲೇ ಅಧ್ಯಾಯ ಶುರುವಾಗಿದೆ, ಇದನ್ನು ಮಂದುವರೆಸಿಕೊಂಡು ಹೋಗಬೇಕು.ಅವರಲ್ಲಿರುವ ಶ್ರದ್ದೆ, ನಡವಳಿಕೆಯನ್ನು ಎರಡು ಸಿನಿಮಾಗಳಲ್ಲಿ ನಟಿಸುವಾಗ ನೋಡಿದ್ದೇನೆ. ಸ್ಟಾರ್‌ಗಿರಿಅಂತ ನೋಡದೆಕಲಾವಿದನಾಗಿಇನ್ನುಎತ್ತರಕ್ಕೆ ಬೆಳೆಯಲಿ.ಪಾತ್ರಕ್ಕಾಗಿ ಹೇಗೆ ಹೊಂದಿಕೊಳ್ಳುತ್ತಾನೆ ಎಂಬುದನ್ನುಅವರಿಂದಕಲಿಯಬೇಕುಎನ್ನುತ್ತಾ ಹಳೆಯ ನೆನಪುಗಳನ್ನು ತೆರೆದಿಟ್ಟು ಸಭಾಂಗಣವನ್ನು ನಗೆಯ ಲೋಕಕ್ಕೆ ಕರೆದುಕೊಂಡು ಹೋದರು.

ಕತೆಯುಕುರಿತು ಹೇಳುವುದಾದರೆ ಜನರುಕಂಡಂತೆ, ನಾವೇ ಗೆಲ್ಲಿಸಿದ ರಾಜಕಾರಣಿಗಳು, ನಮ್ಮನ್ನುಕಾಯೋಆರಕ್ಷಕರು, ಸುದ್ದಿ ಮುಟ್ಟಿಸುವ ವಾಹಿನಿಗಳು, ಊಟ ಕೊಡುವ ಹೋಟೆಲ್‌ಗಳು, ಅನ್ನ ನೀಡುವರೈತ, ಮನೆ ತಲುಪಿಸೋ ಚಾಲಕ ಹೀಗೆ ಎಲ್ಲರನ್ನು ಬೈಯುತ್ತಾಇರುತ್ತೇವೆ. ಇದರಲ್ಲಿ ನಾವು ಒಬ್ಬರಾಗಿರುತ್ತೇವೆಂದುಎಂಬುದನ್ನುಚಿತ್ರವು ಹೇಳುತ್ತದೆ.  ಪ್ರಾರಂಭದಿಂದಅಂತ್ಯದವರೆಗೂಒಂದಷ್ಟು ವಿಷಯಗಳನ್ನು ಹೇಳಿ, ಕೊನೆಗೆ ಪ್ರೇಕ್ಷಕನನ್ನುಕೂರಿಸುವುದಕ್ಕೆಕುತೂಹಲದಮೂಲವಸ್ತುಗಳು,ತೆಗೆದುಕೊಂಡು ಹೋಗಲು ಒಳ್ಳೆ ಅಂಶಗಳನ್ನು ಕೊಡುತ್ತದೆ.ಕ್ರೈಂ ಕತೆಗಳ ನಡುವೆಕ್ರಾಂತಿಯಕತೆಯನ್ನು ಹೇಳಲಿದೆ.ಸ್ನೇಹಿತರು, ಪೋಲೀಸರು, ಮನೆಯಲ್ಲಿಮಾತನಾಡುವಂತದ್ದನ್ನುಚಿತ್ರಕತೆಯಲ್ಲಿತೋರಿಸಲಾಗಿದೆ.ಸರಿಯಾದ ನಿರ್ಣಯತೆಗೆದುಕೊಂಡರೆ ನಾವುಗಳು ಸರಿಯಾಗಿರುತ್ತೇವೆ. ಬದಲಾವಣೆ ಬಯಸೋದಲ್ಲ. ವೈಯಕ್ತಿಕವಾಗಿ ಮೊದಲು ನಾವು ಬದಲಾಗಬೇಕು.ಎಲ್ಲರೂ ಸೇರಿದ್ರೇ ಏನೋ ಆಗುತ್ತದೆ.ಇಂತಹುದೇ ಘಟನೆಗಳು ಪಾತ್ರಗಳ ಮೂಲಕ ನೋಡಿಸಿಕೊಂಡು ಹೋಗುತ್ತದೆ.ಬೆಂಗಳೂರು, ದೇವರಾಯನದುರ್ಗ, ಮಳವಳ್ಳಿಯ ಹೊಸ ಜಾಗಗಳಲ್ಲಿ ಕ್ಯಾಮಾರಓಡಾಡಿದೆ.

ತನಿಖಾಧಿಕಾರಿಯಾಗಿಅದಿತ್ಯ ಕಾಣಿಸಿಕೊಂಡಿದ್ದಾರೆ.  ವೈದ್ಯಳಾಗಿ ಚಂದನಾಗೌಡ, ಪತ್ರಕರ್ತೆಯಾಗಿ ಆಶಿಕಾಸೋಮಶೇಖರ್ ಉಳಿದಂತೆ ಮುಖ್ಯಮಂತ್ರಿಚಂದ್ರು, ಜೈಜಗದೀಶ್ ಮುಂತಾದವರು ನಟಿಸಿದ್ದಾರೆ.ಕೃತಿ, ಎರಡು ಹಾಡಿಗೆ ಸಾಹಿತ್ಯ ಮತ್ತು ನಿರ್ದೇಶನಬಾಲುಚಂದ್ರಶೇಖರ್, ಛಾಯಾಗ್ರಹಣ ದಿಲೀಪ್‌ಚಕ್ರವರ್ತಿ, ಸಾಹಸ ವಿನೋದ್‌ಅವರದಾಗಿದೆ.ಜಾನಿ-ನಿತಿನ್ ಸಂಗೀತದ ನಾಲ್ಕು ಹಾಡುಗಳ ಪೈಕಿ ಜಯಂತ್‌ಕಾಯ್ಕಣಿಬಾಕಿಗೀತೆಗೆ ಪದಗಳನ್ನು ಪೋಣಿಸಿದ್ದಾರೆ. ಇದಕ್ಕೂ ಮುನ್ನಚಂದನವನದ ನಿರ್ದೇಶಕ ವೈ.ವಿ.ರಾವ್‌ಅವರಿಂದಕೆಜಿಎಫ್‌ನ ಪ್ರಶಾಂತ್‌ನೀಲ್‌ವರೆಗಿನಭಾವಚಿತ್ರಗಳು ಪರದೆ ಮೇಲೆ ಬಿತ್ತರಗೊಂಡುಚಿತ್ರವನ್ನು ಇವರುಗಳಿಗೆ ಅರ್ಪಿಸಲಾಗಿದೆಯಂತೆ. ನಂತರಅದಿತ್ಯ ಕೆಲಸ ಮಾಡಿರುವ ನಿರ್ದೇಶಕರುಗಳನ್ನು ಸನ್ಮಾನಿಸಲಾಯಿತು.ರಾಜೇಂದ್ರಸಿಂಗ್‌ಬಾಬು, ವಿಜಯಲಕ್ಷೀಸಿಂಗ್,  ಡಾ.ನಾಗೇಂದ್ರಪ್ರಸಾದ್, ಸುಮನಾಕಿತ್ತೂರು, ರವಶ್ರೀವತ್ಸ ಗೌರವವನ್ನು ಒಪ್ಪಿಸಿಕೊಂಡರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಚಂದ್ರುಅವರನ್ನುದರ್ಶನ್ ಸನ್ಮಾನಿಸಿದರು.ಸಮಾನ ಮನಸ್ಕರುಗಳು ಸೇರಿಕೊಂಡುಕಣಜಎಂಟರ್‌ಪ್ರೈಸಸ್ ಮುಖಾಂತರ ನಿರ್ಮಾಣ ಮಾಡಿರುವಚಿತ್ರವು ಸದ್ಯದಲ್ಲೆ ಬಿಡುಗಡೆಯಾಗುವ ಸಾದ್ಯತೆಇದೆ.

 

Copyright@2018 Chitralahari | All Rights Reserved. Photo Journalist K.S. Mokshendra,