K R S.Film Pooja

Thursday, January 30, 2020

601

ಅಂಬರೀಷ್  ವ್ಯಕ್ತಿತ್ವದಕೆ.ಆರ್.ಎಸ್

ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್‌ಕುರಿತಂತೆ  ಚಿತ್ರಗಳು ಬಂದಿದೆ, ಬರುತ್ತಲೇಇದೆ. ಅದರಂತೆರೆಬಲ್ ಸ್ಟಾರ್‌ಅಂಬರೀಷ್ ವ್ಯಕ್ತಿತ್ವ ಸಾರುವ ‘ಕೆ.ಆರ್.ಎಸ್’ ಸಿನಿಮಾವೊಂದು ಸೆಟ್ಟೇರಿದೆ. ಈ ಹಿಂದೆ ‘ಮೈ ನೇಮ್‌ಈಸ್ ಮಂಡ್ಯದಗಂಡು’ ಹೆಸರನ್ನುಇಡಲಾಗಿ, ಅದಕ್ಕೆ ಅಭಿಮಾನಿಗಳು ವಿರೋಧಿಸಿದ್ದರಿಂದ  ಶೀರ್ಷಿಕೆಯನ್ನು ತಂಡವು ಬದಲಾಯಿಸಿ ಕೊಂಡಿದೆ. ಇದಕ್ಕೆಅರ್ಥವನ್ನು ಮುಂದಿನ ದಿನದಲ್ಲಿ ತಿಳಿಸುತ್ತಾರಂತೆ.ಪ್ರಸಕ್ತಯುವ ಪೀಳಿಗೆಯು ಸಮಾಜಕ್ಕೆ ಏನು ಮಾಡಬಹುದು, ಹೇಳಬಹುದು.ಕಾಲೇಜು ಸಮಾರೋಪಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಈ ರೀತಿಆಗಬೇಕೆಂದು ವ್ಯಕ್ತಪಡಿಸುತ್ತಾರೆ.ಕಥಾನಾಯಕತಾನುದೇಶದಜನರಿಗೆಅನ್ನ ನೀಡುವರೈತನಾಗಿ, ಕಷ್ಟಕ್ಕೆ ಸ್ಪಂದಿಸಬೇಕು.ಜಾತಿಗಿಂತ ಪ್ರೀತಿ ಮುಖ್ಯವೆಂದು ಹೇಳುತ್ತಾನೆ. ಅಂಬರೀಷ್‌ರೆಬಲ್ ಆಗಿ ನೇರಗುಣದವರಾಗಿದ್ದರು. ಹಾಗಯೇ ಅಂಬಿ ಹೆಸರಿನಲ್ಲಿಅವರ ವಿಚಾರಧಾರೆಗಳಂತೆ  ನಾಯಕನ ಗುಣಗಳು ಇರುವುದನ್ನುತೋರಿಸುವ ಪ್ರಯತ್ನ ಮಾಡಲಾಗಿದೆ.

ಮಂಡ್ಯಾ ಸ್ಟಾರ್‌ದಲ್ಲಿ ನಟಿಸಿದ್ದ ಸಿ.ಬಿ.ಲೋಕೇಶ್ ನಾಯಕನಾಗಿ  ಗೆಳೆಯ ಸತೀಶ್‌ಜೊತೆಗೆ ಸೇರಿಕೊಂಡು ಮೊದಲಬಾರಿ ನಿರ್ಮಾಣ ಮಾಡುತ್ತಿರವುದು ಹೊಸ ಅನುಭವ. ಹಳ್ಳಿ ಹುಡುಗಿಯಾಗಿಧರಣಿ ನಾಯಕಿ.  ಇವರೊಂದಿಗೆ ಶರತ್‌ಲೋಹಿತಾಶ್ವ, ಚರಣ್‌ರಾಜ್, ಪದ್ಮಜರಾವ್, ಉಗ್ರಂಮಂಜು, ರಮಿಕೊಡಗಳ್ಳಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜುಬಸಯ್ಯ, ಬನೀರ್‌ತಾಳಿಕೋಟೆ ಮುಂತಾದವರ ನಟನೆಇದೆ.ಸಂಪೂರ್ಣಚಿತ್ರೀಕರಣ ಮಂಡ್ಯಾ ಸುತ್ತಮುತ್ತ ನಡೆಸಲುಯೋಜನೆರೂಪಿಸಲಾಗಿದೆ.ನಿರ್ದೇಶನ ಕೆ.ಪ್ರಶಾಂತ್,  ಕತೆ-ಸಂಭಾಷಣೆ-ಸಾಹಿತ್ಯರವಿಶೆಟ್ಟಿ, ಗುಲ್ಟುಗೆ ಸಂಗೀತ ನೀಡಿದ್ದ ಬಕೇಶ್ ನಾಲ್ಕು ಹಾಡುಗಳಿಗೆ ರಾಗ ಸಂಯೋಜಿಸುತ್ತಿದ್ದಾರೆ.  ಈ ಪೈಕಿ ಒಂದುಗೀತೆಗೆಡಾ.ನಾಗೇಂದ್ರಪ್ರಸಾದ್ ಲೇಖನಿ ಕೆಲಸ ಮಾಡುತ್ತಿದೆ. ಛಾಯಾಗ್ರಹಣಅಣಜಿನಾಗರಾಜ್, ಸಂಕಲನ ತುಳಸಿರಾಮ್‌ರಾಜ್, ನೃತ್ಯ ಮೋಹನ್, ಸಾಹಸ ವಿನೋಧ್-ರಾಮ್‌ದೇವ್ ನಿರ್ವಹಿಸುತ್ತಿದ್ದಾರೆ.  ನಾಯಕನ ಹುಟ್ಟುಹಬ್ಬದಂದುಕನ್ವರ್‌ಲಾಲ್‌ಸಮಾಧಿಎದುರು  ಮಹೂರ್ತ ನಡೆಯಿತು. ‘ಹೇ ನಿಮ್ ಬಾಸ್‌ಅಂತೋರ್‌ಗೆಲ್ಲ, ಬಾಸೆ ನಂ ಬಾಸು ಕಣೋ, ಬರಿ ಬಾಸ್‌ಅಲ್ಲ, ರೆಬಲ್ ಬಾಸು’ ಎಂದುಡೈಲಾಗ್‌ಹೇಳುವ ದೃಶ್ಯಕ್ಕೆದರ್ಶನ್‌ಕ್ಲಾಪ್ ಮಾಡಿದರೆ, ಅಭಿಷೇಕ್‌ಅಂಬರೀಷ್‌ಕ್ಯಾಮಾರ ಚಾಲು ಮಾಡಿ ಶುಭ ಹಾರೈಸಿದರು.ಇದೇ ಸಂದರ್ಭದಲ್ಲಿಅನಾಥಾಶ್ರಮಕ್ಕೆಆಹಾರ ಪದಾರ್ಥಗಳು, ಹಾಸಿಗೆಗಳನ್ನು ನೀಡಲಾಯಿತು.ಎಂ.ಆರ್.ಟಾಕೀಸ್ ಮುಖಾಂತರಚಿತ್ರವು ಸಿದ್ದಗೊಳ್ಳುತ್ತಿದೆ.

 

 

Copyright@2018 Chitralahari | All Rights Reserved. Photo Journalist K.S. Mokshendra,