Soorappa Babu.Film Prod.Press Meet.

Monday, March 09, 2020

804

ಕೋಟಿಗೊಬ್ಬ-  ಟೀಸರ್ಡಿಲೀಟ್ಆಗಿದ್ದಕ್ಕೆ  ಸೂರಪ್ಪಬಾಬು  ಸ್ಪಷ್ಟೀಕರಣ

ಸುದೀಪ್ ನಟಿಸಿರುವ ‘ಕೋಟಿಗೊಬ್ಬ-೩’ ಚಿತ್ರದಟೀಸರ್‌ಯೂಟ್ಯೂಬ್‌ದಲ್ಲಿಡಿಲೀಟ್ ಮಾಡಿಸಲಾಗಿದೆ.ಎರಡು ಮಿಲಿಯುನ್ ವೀಕ್ಷಣೆದಾಟಿದ ಸಿನಿಮಾದತುಣುಕುಗಳು ಯೂಟ್ಯೂಬ್‌ದಲ್ಲಿ ನಾಪತ್ತೆಆಗಿರುವುದಕ್ಕೆ ನಿರ್ಮಾಪಕ ಸೂರಪ್ಪಬಾಬು ಸ್ಪಷ್ಟನೆ ನೀಡಲು ಮಾದ್ಯಮದವರನ್ನು ಭೇಟಿ ಮಾಡಿದ್ದರು.ಪೋಲೆಂಡ್‌ದಲ್ಲಿಚಿತ್ರೀಕರಣ ನಡೆಸಲು ಸ್ಥಳಗಳನ್ನು ತೋರಿಸಿ, ಇಡೀಚಿತ್ರತಂಡಅಲ್ಲಿ ಉಳಿದುಕೊಳ್ಳಲು ಮುಂಬೈ ಮೂಲದ ಸೋದರರಾದ ಸಂಜಯ್‌ಪೌಲ್, ಅಜಯ್‌ಪೌಲ್ ವ್ಯವಸ್ಥೆ ಮಾಡಿದ್ದರು.ಮುಂದೆನಿರ್ಮಾಪಕರುತಮಗೆ ಹಣ ನೀಡದೆ ಮೋಸ ಮಾಡಿದ್ದಾರೆಎಂದುದೂರು ನೀಡಿದ ಬೆನ್ನಲ್ಲೇಆನಂದ್‌ಆಡಿಯೋಯುಟ್ಯೂಬ್‌ದಲ್ಲಿಟೀಸರ್‌ಎರಡು ದಿನಗಳ ಹಿಂದೆತೆಗೆದುಹಾಕಲಾಗಿತ್ತು.ಇದು ನಮ್ಮ ಸಿನಿಮಾದ ಬ್ಯುಸಿನೆಸ್ ಹಾಳು ಮಾಡುವಉದ್ದೇಶವಾಗಿದೆ.ಸದ್ಯದಲ್ಲೆಎಲ್ಲವು ಸರಿಯಾಗಲಿದ್ದು, ಟೀಸರ್‌ನ್ನುಎರಡು ದಿನಗಳಲ್ಲಿ ಅಪ್‌ಲೋಡ್ ಮಾಡುವುದಾಗಿಆನಂದ್‌ಆಡಿಯೋದವರು ಭರವಸೆ ನೀಡಿದ್ದಾರೆ.

ಆದರೆ ವಾಹಿನಿಗಳು ಸತ್ಯಾಸತ್ಯತೆ ತಿಳಿಯದೆ ತಮಗೆ ಬಂದಂತೆ ಮಾಹಿತಿಯನ್ನು ಪ್ರಸಾರ ಮಾಡುತ್ತಿರುವುದು ಬೇಸರ ತರಿಸಿದೆ.ನಿಮಗೇನಾದರೂ ಸಂಶಯವಿದ್ದರೆ ನೇರವಾಗಿ ನನ್ನನ್ನು ಸಂಪರ್ಕಿಸಬಹುದು.ಇಲ್ಲಸಲ್ಲದ  ಊಹಾಪೋಹಗಳಿಂದ ಸುಳ್ಳು ಸುದ್ದಿಯನ್ನು ಹೇಳಿದರೆ ಚಿತ್ರಕ್ಕೆ ಹೊಡೆತ ಬೀಳುತ್ತದೆ. ದಯವಿಟ್ಟುಇದನ್ನುಇಲ್ಲಿಗೆ ನಿಲ್ಲಿಸಿಬಿಡಿ. ಅರ್ಜುನ್‌ಜನ್ಯಾಆರೋಗ್ಯ ಸರಿಇಲ್ಲದಕಾರಣ ಹಿನ್ನಲೆಸಂಗೀತತಡವಾಗಿದೆ. ಸುದೀಪ್‌ಡಬ್ಬಿಂಗ್ ಮಾಡಲುಕಾತುರರಾಗಿದ್ದಾರೆ.ಎಲ್ಲವುಅಂದುಕೊಂಡಂತೆಆದರೆ ಮುಂದಿನ ತಿಂಗಳು ತೆರೆಗೆ ಬರುವ ಸಾದ್ಯತೆಇದೆ.ಇದರ ಮಧ್ಯೆ ಕೋಟಿಗೊಬ್ದ-೪ ಕತೆಗೆ ಸಿದ್ದತೆಗಳು ನಡೆಯುತ್ತಿದೆಎಂದರು.

 

Copyright@2018 Chitralahari | All Rights Reserved. Photo Journalist K.S. Mokshendra,