Ramachari 2.o.Film First Look Rel.

Wednesday, March 11, 2020

229

ಚಂದನವನಕ್ಕೆ  ಮತ್ತೋಬ್ಬರಾಮಾಚಾರಿ

ನಾಗರಹಾವುಚಿತ್ರದಲ್ಲಿಡಾ.ವಿಷ್ಣುವರ್ಧನ್‌ರಾಮಾಚಾರಿಯಾಗಿಖ್ಯಾತಿಗೊಂಡಿದ್ದರು. ನಂತರರವಿಚಂದ್ರನ್, ಯಶ್‌ಇದೇ ಹೆಸರಿನೊಂದಿಗೆ ನಟಿಸಿ ಹೆಸರು ಮಾಡಿದ್ದರು.ಈಗ ಇದರ ಸಾಲಿಗೆ ‘ರಾಮಾಚಾರಿ ೨.೦’ ಚಿತ್ರವು ಸೇರ್ಪಡೆಯಾಗಿದೆ.ರಜನಿಕಾಂತ್ ನಟಿಸಿರುವ ೨.೦, ಯಶಸ್ಸು ಗಳಿಸಿದ್ದರಿಂದ ಇದನ್ನು ಹೆಸರಿನೊಂದಿಗೆ ಸೇರಿಸಲಾಗಿದೆ. ಕತೆ ಹೊಸ ಜಾನರ್‌ದಲ್ಲಿರುವುದರಿಂದಇಂತಹುದೆಅಂಥ ಹೇಳಲು ಬರುವುದಿಲ್ಲವಂತೆ.‘ಮೀಸೆ ಚಿಗುರಿದಾಗ’ ಚಿತ್ರದ ನಂತರಇಂಜನಿಯಿರಿಂಗ್ ಮುಗಿಸಿ, ವಿದೇಶದಲ್ಲಿಉನ್ನತ ವ್ಯಾಸಾಂಗ ಮಾಡಿ, ಸದ್ಯ ವಿಜ್ಘಾನಿಯಾಗಿರುವಕನ್ನಡಿಗತೇಜ್‌ಕಾಲಿವುಡ್‌ದಲ್ಲಿ ಗುರುತಿಸಿಕೊಂಡಿದ್ದರು.ನಂತರ ‘ರಿವೈಂಡ್’ ಕನ್ನಡಸಿನಿಮಾಕ್ಕೆ ನಟನೆ, ನಿರ್ದೇಶನ ಮಾಡಿದ್ದು, ಅದು ಸದ್ಯದಲ್ಲೆತೆರೆಗೆ ಬರುವ ಸಾದ್ಯತೆಇದೆ.ಎರಡನೆಅನುಭವಎನ್ನುವಂತೆಕತೆ,ನಿರ್ದೆಶನಜೊತೆಗೆ ನಾಯಕನಾಗಿಅಭಿನಯಿಸುತ್ತಿದ್ದಾರೆ. ಮೂಲ ಸಿನಿಮಾದರಾಮಾಚಾರಿ ಹೋಲಿಕೆ ಇರುತ್ತದೆ.ಧೈರ್ಯವಂತ, ಗುರುಗಳ ಮೇಲೆ ಭಕ್ತಿ, ಸ್ವಾಭಿಮಾನಿ. ಸ್ವಲ್ಪ ಬದಲಾವಣೆಎಂದರೆ, ಈ ಕಾಲದಬುದ್ದಿವಂತ ಹಳ್ಳಿ ಹುಡುಗಅಪ್‌ಡೇಟೆಡ್‌ಆಗಿರುವುದರಿಂದ ೨.೦ ಎಂದು ಹೇಳಿಕೊಂಡಿದೆ.ಆಲ್ಬರ್ಟ್‌ಐನ್‌ಸ್ಟೈನ್‌ದಂತೆ ಸಮಸ್ಯೆಗಳನ್ನು ಹೇಗೆ ಪರಿಹರಿಸುತ್ತಾನೆಂದುಇತ್ಯಾಹ್ಮಕವಾಗಿತೋರಿಸಲಾಗುವುದು.

ಡಾ.ರಾಜ್‌ಕುಮಾರ್‌ಅವರ ಸಾಕಷ್ಟು ಚಿತ್ರಗಳಿಗೆ ಸ್ಥಿರ ಛಾಯಾಗ್ರಾಹಕರಾಗಿದ್ದ  ಪ್ರವೀಣ್‌ನಾಯಕ್, ‘ಓಂ’ಚಿತ್ರಕ್ಕೆ ಶಿವರಾಜ್‌ಕುಮಾರ್ ಫಸ್ಟ್ ಲುಕ್‌ನ್ನುಎರಡು ಲೈಟ್ಸ್‌ಗಳನ್ನು ಬಳಸಿಕೊಂಡು ಪೆಂಟೆಕ್ಸ್ ೧೦೦೦ ಕ್ಯಾಮಾರದಲ್ಲಿ ಕ್ಲಿಕ್ಕಿಸಿದ್ದರು.  ಈಗಿನ ತಂತ್ರಜ್ಘಾನದಲ್ಲಿಅದೇರೀತಿಯಲ್ಲಿ ಫೋಟೋ ಶೂಟ್ ಮಾಡಿದ್ದನ್ನು ಮಾದ್ಯಮದ ಮುಂದೆ ಅನಾವರಣಗೊಳಿಸಲಾಯಿತು.ತೇಜ್‌ಅವರ ಕೋಪ, ನೋವು ಎರಡುಕಾಣುವಂತೆ ಪೋಸ್ಟರ್‌ದಲ್ಲಿ ಕಾಣಿಸಿಕೊಂಡಿತ್ತು. ಸಂದೀಪ್‌ಮಲಾನಿ ಒಂದು ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.ಉಳಿದಂತೆ ತಾರಾಗಣ, ತಂತ್ರಜ್ಘರ ವಿವರಗಳು ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ.ಮೇಘನಾ ಕ್ರಿಯೇಶನ್ಸ್ ಮೂಲಕ ಸಿದ್ದಗೊಳ್ಳುತ್ತಿರುವ ಸಿನಿಮಾಕ್ಕೆಯುಎಸ್‌ದಲ್ಲಿರುವಟೆಕ್ಕಿ ಪ್ರಭಾಕರ್ ಸಹ ನಿರ್ಮಾಪಕರಾಗಿ ಬಂಡವಾಳ ಹೂಡುತ್ತಿದ್ದಾರೆ.ಕ್ಲಾಸ್ ಮೀಟ್ಸ್ ಮಾಸ್‌ಅಂತಅಡಿಬರಹದಲ್ಲಿರುವಸಿನಿಮಾದ ಕೆಲಸಕಾರ್ಯಗಳು ಮುಂದಿನ ದಿನಗಳಲ್ಲಿ ಶುರುವಾಗಲಿದೆ.

 

 

Copyright@2018 Chitralahari | All Rights Reserved. Photo Journalist K.S. Mokshendra,