KFCC.75 Years Celebration.

Sunday, March 08, 2020

75

ಚಲನಚಿತ್ರ  ವಾಣಿಜ್ಯ ಮಂಡಳಿಗೆ ೭೫ ಹೆಜ್ಜೆ

೧೯೪೪ರಲ್ಲಿ ಸ್ಥಾಪನೆಗೊಂಡ ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ ೭೫ ವಸಂತಗಳನ್ನು ಕಂಡಿದೆ.ಇದರ ಪ್ರಯುಕ್ತವಾಗಿ ೭೫ನೇ ವರ್ಷದಕಾರ್ಯಕ್ರಮದ ಲಾಂಛನವನ್ನು ಗೃಹ ಸಚಿವ ಬಸವರಾಜಬೊಮ್ಮಾಯಿ ಬಿಡುಗಡೆ ಮಾಡಿದ ಸಂದರ್ಭದಲ್ಲಿರವಿಚಂದ್ರನ್, ಜಗ್ಗೇಶ್, ಹಾಲಿ ಮತ್ತು ಮಾಜಿ ಅಧ್ಯಕ್ಷರುಗಳು ಸಾಕ್ಷಿಯಾಗಿದ್ದರು.ಪ್ರಾರಂಭದಲ್ಲಿ ಮೈಕ್‌ತೆಗೆದುಕೊಂಡಜಗ್ಗೇಶ್‌ಎಲ್ಲರ ಪರಿಕಲ್ಪನೆಯಿಂದ ‘ಚಿತ್ರನಗರಿ’ ಶುರುವಾಗುತ್ತಿದೆ.ಹಿಂದೆಂದೂಯಾವ ಮುಖ್ಯ ಮಂತ್ರಿಗಳು ಮಾಡದ ಕೆಲಸವನ್ನುಇವರು ಮಾಡಿದ್ದಾರೆ.ನಮ್ಮಕಾಲದಲ್ಲಿ ವಾಣಿಜ್ಯ ಮಂಡಳಿಯನ್ನು ದೇವಸ್ಥಾನದಂತೆಕಾಣುತ್ತಿದ್ದು, ನಾವೆಲ್ಲರು ಭಕ್ತರಾಗಿ ಹೋಗುತ್ತಿದ್ದೇವು.ಇಂದುಅಂತಹ ವಾತವರಣವಿಲ್ಲ. ಮೆಲ್ಟಿಪ್ಲೆಕ್ಸ್‌ನವರುಕನ್ನಡಚಿತ್ರಕ್ಕೆ ಪ್ರೋತ್ಸಾಹಕೊಡುತ್ತಿಲ್ಲ. ಸೈಬರ್‌ಕ್ರೈಮ್‌ದಿಂದ ನಿರ್ಮಾಪಕರಿಗೆ ನಷ್ಟವಾಗುತ್ತಿದೆ.ಇದಕ್ಕೆ ಸರ್ಕಾರದಿಂದ ಸೂಕ್ರಕ್ರಮ ತೆಗೆದುಕೊಳ್ಳಬೇಕೆಂದು ಬಿನ್ನವಿಸಿಕೊಂಡರು.

ರವಿಚಂದ್ರನ್ ಮಾತನಾಡಿಇಂದುಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ. ಅವಳಿಲ್ಲದ ಸ್ಪೂರ್ತಿ ನಮಗೆ ಎಂದೂ ಪೂರ್ತಿಆಗೋಲ್ಲ. ಇಷ್ಟು ವರ್ಷಗಳಲ್ಲಿ ಸಾಕಷ್ಟು ಸಮಸ್ಯೆಗಳು ಉದ್ವವವಾಗಿದೆ.ಈಗ ಅದನ್ನು ಸರಿಪಡಿಸಿಕೊಳ್ಳುವ ಕಾಲ ಕೂಡಿಬಂದಿದೆ.ಲಾಂಛನವನ್ನುಇಂದು ಬಿಡುಗಡೆ ಮಾಡಿದರೆ ಸಾಲದು, ಅದನ್ನುಚಿತ್ರನಗರಿ ಶಂಕುಸ್ಥಾಪನೆ ಮಾಡುವ ಸಂದರ್ಭದಲ್ಲಿಇದನ್ನುಇಡಬೇಕೆಂದು ಸಲಹೆ ನೀಡಿದರು.

ವಾಣಿಜ್ಯ ಮಂಡಳಿಯಿಂದ ಎನ್‌ಓಸಿ ತರಲುತಿದ್ದುಪಡಿ ಮಾಡಬೇಕಾಗಿದೆ.ಜಿಎಸ್‌ಟಿಕಡಿಮೆ ಮಾಡಲು ಮಂಡಳಿಯ ನಿಯೋಗದೊಂದಿಗೆಕೇಂದ್ರ ಸಚಿವರನ್ನು  ಭೇಟಿ ಮಾಡಲುಯೋಜನೆ ಹಾಕಲಾಗಿದೆ. ಎಲ್ಲ ವರ್ಗದವರಿಗೆ ಹೌಸಿಂಗ್ ಯೋಜನೆಇರುವಂತೆಚಿತ್ರರಂಗದವರಿಗೂಇರುವುದುಅವಶ್ಯಕವಾಗಿದೆ.ಅಧಿವೇಶನದಲ್ಲಿ ೭೫ರ ಸಂಭ್ರಮಕ್ಕೆಐದುಕೋಟಿಅನುದಾನ ಬಿಡುಗಡೆ ಮಾಡಲುಕೋರಿಕೊಂಡಂತೆ ಸಿಎಂರವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆಂದು ನಟ,ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.

ಎಲ್ಲರಕೋರಿಕೆಯನ್ನು ಸ್ವೀಕರಿಸಿದ ಗೃಹ ಸಚಿವರು  ಮನರಂಜನೆಇಲ್ಲದೆಒಂದುಕ್ಷಣವು ಊಹಿಸಲು ಸಾಧ್ಯವಿಲ್ಲ. ಅದು ನಾಡಿನ ಸಂಸ್ಕ್ರತಿಯನ್ನು ಶ್ರೀಮಂತಗೊಳಿಸಿತ್ತಾ ಬಂದಿದೆ. ಆತ್ಮಬಲ ಮತ್ರುಆತ್ಮವಿಶ್ವಾಸಎರಡು ವಾಣಿಜ್ಯ ಮಂಡಳಿಗೆ ಇದೆ.ಕಷ್ಟಗಳು ಬರುತ್ತಲೇಇರುತ್ತದೆ ಅವುಗಳನ್ನು ಮೆಟ್ಟಿ ನಿಂತಾಗ ಮಾತ್ರ ಖುಷಿ ಕೊಡುತ್ತದೆ.ಗುಬ್ಬಿ ವೀರಣ್ಣ, ಬಿ.ಆರ್.ಪಂತಲು, ಡಾ.ರಾಜ್‌ಕುಮಾರ್ ಸೇರಿದಂತೆ ಹಲವರ ಶಕ್ತಿಯಿಂದಚಿತ್ರೋದ್ಯಮದೊಡ್ಡದಾಗಿ ಬೆಳಿದಿದೆ. ಈ ನಿಟ್ಟಿನಲ್ಲಿಚಿತ್ರನಗರಿ ಸ್ಥಾಪಿಸಿವುದು ಅಗತ್ಯವಾಗಿದೆ.ಅದಕ್ಕಾಗಿಯೇ ಈ ಸಲದ ಬಜೆಟ್‌ದಲ್ಲಿ ಮುಖ್ಯ ಮಂತ್ರಿಗಳು ೫೦೦ ಕೋಟಿ ಘೋಷಿಸಿದ್ದಾರೆ.ಅಲ್ಲದೆಆದಷ್ಟು ಬೇಗನೆ ಶಂಕುಸ್ಥಾಪನೆ ಮಾಡಲು ಆಸಕ್ತಿ ತೋರಿಸಿದ್ದಾರೆ.ಚಿತ್ರಮಂದಿರದಗುತ್ತಿಗೆಅವಧಿಯನ್ನುಐದು ವರ್ಷಕ್ಕೆತರುವ ಬಗ್ಗೆ ಆದೇಶ ನೀಡಲಾಗಿದೆ.ಕಡತವುಆರ್ಥಿಕಇಲಾಖೆಯಲ್ಲಿಇದ್ದು, ಸದ್ಯದಲ್ಲೆಅದು ಪೂರ್ಣಗೊಳ್ಳಬಹುದು.ಸೈಬರ್‌ಕ್ರೈಂ ಬಗ್ಗೆ ಕಠಿಣವಾದಕಾನೂನನ್ನುತರಲು ಅಧಿಕಾರಿಗಳೆಂದಿಗೆ ಚರ್ಚಿಸಲಾಗುವುದು.ಮಲ್ಟಿಪ್ಲೆಕ್ಸ್‌ಧೋರಣೆ ಸರ್ಕಾರದ ಗಮನಕ್ಕೆ ಬಂದಿದೆ.ಇದನ್ನುಇತ್ಯರ್ಥ ಮಾಡುವುದಾಗಿ ಭರವಸೆ ನೀಡಿದರು.

ಸಾರಾಗೋವಿಂದು, ಜಯಮಾಲ, ಮುಂತಾದವರು ಉಪಸ್ತಿತರಿದ್ದು ಕೆಲವು ಅಂಶಗಳನ್ನು ಹಂಚಿಕೊಂಡರು.

 

Copyright@2018 Chitralahari | All Rights Reserved. Photo Journalist K.S. Mokshendra,