This Property Belongs To Meenakshi.Film News.

Thursday, June 25, 2020

47

ಕಲ್ಯಾಣ್ ದೇವ್ _ ರಚಿತಾರಾಂ ಅಭಿನಯದ ’ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು ಮೀನಾಕ್ಷಿ’ ಚಿತ್ರಕ್ಕೆ ರಾಮ ನಾಯ್ಡು ಸ್ಟುಡಿಯೋದಲ್ಲಿ ಕೊನೆಯ ಹಂತದ ಚಿತ್ರೀಕರಣ..

 

ಮೆಗಾಸ್ಟಾರ್ ಚಿರಂಜೀವಿ ಅವರ ಅಳಿಯ ಕಲ್ಯಾಣ್ ದೇವ್ ಹಾಗೂ

ರಚಿತಾರಾಂ ಅಭಿನಯದ ’ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು ಮೀನಾಕ್ಷಿ’ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಲಾಕ್ ಡೌನ್ ನಂತರ ಹೈದರಾಬಾದ್ ನ ರಾಮನಾಯ್ಡು ಸ್ಟುಡಿಯೋದಲ್ಲಿ ನಡೆಯುತ್ತಿದೆ..

ರಾಜ್ಯ ಸರ್ಕಾರ ವಿಧಿಸಿರುವ ಕಟ್ಟುನಿಟ್ಟಿನ ಕ್ರಮ ಅನುಸರಿಸಿ ಚಿತ್ರೀಕರಣ ನಡೆಸುತ್ತಿರಿವುದಾಗಿ‌ ತಿಳಿಸಿರುವ ನಿರ್ಮಾಪಕರು, ಚಿತ್ರೀಕರಣದ ಜೊತೆಗೆ ಪೋಸ್ಟ್ ಪ್ರೊಡಕ್ಷನ್ ವರ್ಕ್ ಸಹ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಕಲ್ಯಾಣ್ ದೇವ್ ಹಾಗೂ ರಚಿತಾರಾಂ ಜೋಡಿ ಉತ್ತಮ ಮನೋರಂಜನೆ ನೀಡಲಿದ್ದಾರೆ..

ರಿಜ್ವಾನ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ರಿಜ್ವಾನ್ ಹಾಗೂ ಖುಷಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಶ್ರೀನಿವಾಸ್ ಜಿ ಈ ಚಿತ್ರದ ಸಹ ನಿರ್ಮಾಪಕರು.

ಪುಲಿ ವಾಸು ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಮ್ಯೂಸಿಕ್ ಮಾಂತ್ರಿಕ ಎಸ್ ಎಸ್ ತಮನ್ ಸಂಗೀತ ನೀಡುತ್ತಿದ್ದಾರೆ. ತಮನ್ ಸಂಗೀತ ನೀಡುತ್ತಿರುವ ಈ ಚಿತ್ರದ ಆಡಿಯೋ ಬಿಗ್ ಹಿಟ್ ಆಗುವುದರಲ್ಲಿ ಸಂದೇಹವಿಲ್ಲ. ಶ್ಯಾಮ್ ಕೆ ನಾಯ್ಡು ಛಾಯಾಗ್ರಹಣ, ಸ್ವಾಮಿ, ಡ್ರ್ಯಾಗನ್ ಸಾಹಸ ನಿರ್ದೇಶನ, ಮಾರ್ತಾಂಡ್ ಕೆ ವೆಂಕಟೇಶ್ ಸಂಕಲನ, ಆಟ ನಂದೀಶ್ ನೃತ್ಯ ನಿರ್ದೇಶನ ಹಗೂ ಬ್ರಹ್ಮ ಕಡಲಿ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ಕಲ್ಯಾಣ್ ದೇವ್, ರಚಿತಾ ರಾಂ, ನರೇಶ್ ವಿ.ಕೆ, ಪೊಸಾನಿ ಕೃಷ್ಣ ಮುರಳಿ, ಸಾಧುಕೋಕಿಲ, ಶಿವರಾಜ್ ಕೆ ಆರ್ ಪೇಟೆ, ಪ್ರಗತಿ, ಅಜಯ್, ಮಹೇಶ್, ಶರೀಫ್, ಸತ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Copyright@2018 Chitralahari | All Rights Reserved. Photo Journalist K.S. Mokshendra,