Indian Films Makers Association.News

Monday, July 27, 2020

1104

ಚಿತ್ರರಂಗದ  ಶ್ರಮಿಕ  ವರ್ಗದವರಿಗೆ  ಐಎಫ್ಎಂಎ

       ಚಂದನವನದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕ, ನಿರ್ದೇಶಕ, ಕಲಾವಿದರು, ಕಾರ್ಮಿಕ ಒಕ್ಕೂಟ ಇವೆಲ್ಲವೂ ಚಲನಚಿತ್ರಕ್ಕೆ ಸಂಬಂದಿಸಿದಂತೆ ಹಲವು ವಿಭಾಗಗಳಲ್ಲಿ ಅದರದೇ ಆದ ಸಂಘಸಂಸ್ಥೆಗಳು ಸ್ಥಾಪಿತಗೊಂಡು, ತಮ್ಮ ಸದಸ್ಯರ ಕಷ್ಟ ನಷ್ಟಗಳಿಗೆ ಸ್ಪಂದಿಸುತ್ತಿವೆ. ಪ್ರಸಕ್ತ ಚಲನಚಿತ್ರದ ಹಲವು ವಿಭಾಗಗಳಿಗೆ ಅನುಕೂಲ ಮಾಡಿಕೊಡುವಂತ ‘ಇಂಡಿಯನ್ ಫಿಲಿಂ ಮೇಕರ‍್ಸ್ ಅಸೋಸಿಯೇಶನ್’ (ಐಎಫ್‌ಎಂಎ) ಸಂಸ್ಥೆಯು ಹುಟ್ಟಿಕೊಂಡಿದೆ. ಇದು ಈಗಾಗಲೇ ಶ್ರೀನಗರ, ತೆಲಂಗಾಣ ಕಡೆಗಳಲ್ಲಿ ಶಾಖೆಯನ್ನು ತೆರೆದು, ಈಗ ಕರ್ನಾಟಕದಲ್ಲಿ ಕಛೇರಿಯು ಉಗಮವಾಗಿದೆ. 

ನಿರ್ಮಾಪಕ ಪಿ.ಮೂರ್ತಿ ಅಧ್ಯಕ್ಷರು, ದಿಲೀಪ್‌ಕುಮಾರ್.ಹೆಚ್.ಆರ್ ಪ್ರಧಾನ ಕಾರ್ಯದರ್ಶಿಗಳು ಮತ್ತು ಶಿವಾನಂದಮುತ್ತಣ್ಣವರ್ ಇವರುಗಳ ಅಧೀನದಲ್ಲಿ ಕಾರ್ಯನಿರ್ವಹಿಸಲಿದೆ. ನಿರ್ಮಾಪಕರು, ನಿರ್ದೇಶಕರು, ಛಾಯಾಗ್ರಾಹಕರು, ಕಲಾವಿದರು, ಸಂಕಲನಕಾರ, ವರ್ಣಾಲಂಕಾರ, ಕೇಶಾಲಂಕಾರ, ವಸ್ತ್ರಾಲಂಕಾರ, ದ್ರೋಣ, ಸ್ಟಿಲ್, ಯೂನಿಟ್, ಗಾಯಕರು, ಬರಹಗಾರರು, ಕಲೆ, ಕ್ರೇನ್-ಜಿಮ್ಮಿಜಿಪ್, ನೃತ್ಯ, ವಾಹನ ಚಾಲಕರು, ಕಂಠದಾನ ಕಲಾವಿದರು,  ಗ್ರಾಫಿಕ್ ಡಿಸೈನರ್, ಪತ್ರಿಕಾ ಮಿತ್ರರು, ವಿತರಕರು, ಪ್ರಸಾರಕರು ಸೇರಿದಂತೆ ಒಟ್ಟಾರೆ ೨೭ ವಿಭಾಗಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.

        ನಿರ್ಮಾಪಕರಿಗೆ ರೂ.೫೦೦೦ ಇತರೆವರಿಗೆ  ನೊಂದಣಿ ಶುಲ್ಕ ೨೫೦೦ ಇರುತ್ತದೆ. ಇದರಲ್ಲಿ ಸದಸ್ಯತ್ವ ಪಡೆದವರಿಗೆ ಸಂಘದಿಂದ ಗುರುತಿನ ಚೀಟಿಯನ್ನು ನೀಡಲಾಗುವುದು. ಇದರಿಂದ ಭಾರತದ ಯಾವುದೇ ಚಿತ್ರರಂಗದಲ್ಲಿ ಕೆಲಸ ಮಾಡಬಹುದಾಗಿದೆ. ಸದಸ್ಯರಿಗೆ ಭವಿಷ್ಯನಿಧಿ, ಇಎಸ್‌ಐ ಸೌಲಭ್ಯ ಹಾಗೂ ಐದು ಲಕ್ಷದ ವರೆಗೆ ವಿಮೆಯನ್ನು ಮಾಡಿಸಲಾಗುತ್ತದೆ.  ಪ್ರತಿಯೊಬ್ಬರಿಗೂ ಶೂನ್ಯ ಹಣದೊಂದಿಗೆ ಬ್ಯಾಂಕ್ ಖಾತೆಯನ್ನು ತೆರೆದು, ಎಟಿಎಂ ಕಾರ್ಡ್‌ನ್ನು ನೀಡುತ್ತಾರೆ.  ಐಟಿ ರಿಟರ್ನ್ಸ್‌ನ್ನು  ಸರಿಯಾಗಿ ಮಾಡಿದವರಿಗೆ ಬ್ಯಾಂಕಿನಿಂದ ಗರಿಷ್ಟ ಒಂದು ಕೋಟಿ ಸಾಲ ಮಂಜೂರು ಮಾಡಿಸಲಾಗುವುದು. ಇದೇ ವಿಷಯಕ್ಕೆ ಸಂಬಂದಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿರುತ್ತಾರೆ. ಸದಸ್ಯರ ಕತೆ,ಚಿತ್ರಕತೆ, ಕಾದಂಬರಿಯ ಹಕ್ಕನ್ನು ಸಂಬಂದಪಟ್ಟವರಗೆ ಕಾಯ್ದಿರಿಸಿ ಹಾಗೂ ಸಂರಕ್ಷಿಸಲಾಗುವುದು. ಆಯಾ ವಿಭಾಗದಲ್ಲಿ ಹೊಸದಾಗಿ ಬರುವ ಸದಸ್ಯರಿಗೆ ತರಭೇತಿಯನ್ನು ನೀಡಿ ಪ್ರಮಾಣಪತ್ರವನ್ನು ನೀಡಲಾಗುವುದು, ಇತ್ತೀಚೆಗಷ್ಟೇ ಕೊರೊನಾದಿಂದ ನಲುಗಿದ ಚಿತ್ರರಂಗದ ಒಂದಷ್ಟು ಮಂದಿಗೆ ರೇಷನ್ ಕಿಟ್‌ಗಳನ್ನು ಸಂಸ್ಥೆಯು ವಿತರಣೆ ಮಾಡಿದ್ದಾರೆ.  ಚಿತ್ರರಂಗಕ್ಕೆ ಅಂತಲೇ ಪ್ರತ್ಯೇಕ ಬಜೆಟ್‌ನ್ನು ಮೀಸಲಿಟ್ಟು ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಮೊನ್ನೆ ನಡೆದ ಸುದ್ದಿಗೋಷ್ಟಿಯಲ್ಲಿ ಸಂಘದ ಪದಾದಿಕಾರಿಗಳು ಎಲ್ಲಾ ಮಾಹಿತಿಗಳನ್ನು ಹಂಚಿಕೊಂಡರು.

 

Copyright@2018 Chitralahari | All Rights Reserved. Photo Journalist K.S. Mokshendra,