Tribhasha.Chitra Ke Rajani.Film News

Wednesday, July 15, 2020

207

ತ್ರಿಭಾμ ಚಿತ್ರಕ್ಕೆ ರಜನಿ ನಾಯಕಿ

ಎಚ್.ಕೆ.ಆರ್. ಪ್ರೊಡಕ್ಷನ್ ಲಾಂಛನದಲ್ಲಿ ಗಣೇಶ್ ಅವರು ನಿರ್ಮಾಣ ಮಾಡುತ್ತಿರುವ ಹೊಸ ಚಿತ್ರದ ಹೆಸರು ಪ್ರೊಡಕ್ಷನ್ ನಂಬರ್ ೧. ಮೂಲತಃ ಶಿವಮೊಗ್ಗದವರಾದ ಗಣೇಶ್ ಅವರು ಮೊದಲಿಂದಲೂ ಚಿತ್ರನಿರ್ಮಾಣದ ಬಗ್ಗೆ ತುಂಬಾ ಆಸಕ್ತಿ ಇಟ್ಟುಕೊಂಡಿದ್ದರು.

ಸ್ವಂತ ನಿರ್ಮಾಣ ಸಂಸ್ಥೆ ಸ್ಥಾಪಿಸಿ ಅದರ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು ತಮ್ಮ ಮಗಳಾದ ರಜನಿ ಅವರನ್ನು ಚಿತ್ರದಲ್ಲಿ ನಾಯಕಿಯನ್ನಾಗಿ ಪರಿಚಯಿಸುತ್ತಿದ್ದಾರೆ.

ರಜನಿ ಅವರು ಅಭಿನಯ ತರಬೇತಿ ಕೇಂದ್ರಗಳಲ್ಲಿ ಚಲನಚಿತ್ರಕ್ಕೆ ಸಂಬಂಧಿಸಿದಂತೆ ಎಲ್ಲಾ ತರಬೇತಿಗಳನ್ನು ಪಡೆದಿರುತ್ತಾರೆ. ತಂದೆ ಮಗಳು ಇಬ್ಬರೂ ಸೇರಿ ಕನ್ನಡ, ತಮಿಳು, ಮರಾಠಿ ಸೇರಿದಂತೆ ಮೂರು ಭಾμಯಲ್ಲಿ ಏಕಕಾಲಕ್ಕೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕಥೆಗೆ ಸಂಬಂಧಪಟ್ಟಂತೆ ಹಲವಾರು ನಿರ್ದೇಶಕರ ಬಳಿ ಹಲವಾರು ಕಥೆಗಳನ್ನು ಅನ್ವೇμಣೆ ಮಾಡಿ ಕುಟುಂಬಸಮೇತ ನೋಡುವಂತ ಚಿತ್ರಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕತೆಗೆ ತಕ್ಕಂತೆ ಪ್ರತಿಭಾವಂತ ನಿರ್ದೇಶಕರನ್ನು ಸಹ ಆಯ್ಕೆ ಮಾಡಿಕೊಂಡಿದ್ದಾರೆ.

ಈ ಹಿಂದೆ ಇμರ್ಥ, ಗಾಯತ್ರಿ ಹಾಗೂ ವೀರಾಧಿವೀರ ರಾಜಾಧಿರಾಜ ಸೇರಿದಂತೆ ಹಲವಾರು ಚಿತ್ರಗಳನ್ನು ಕನ್ನಡ ಹಾಗೂ ತಮಿಳಿನಲ್ಲೂ ನಿರ್ದೇಶನ ಮಾಡಿ ಅನುಭವ ಹೊಂದಿರುವ ಸತ್ಯಸಾಮ್ರಾಟ್ ಅವರು ಈ ಚಿತ್ರದ ನಿರ್ದೇಶಕರಾಗಿದ್ದಾರೆ. ಇನ್ನು ಚಿತ್ರದ ನಾಯಕಿಯ ಪಾತ್ರವನ್ನು ರಜನಿ ಅವರು ನಿರ್ವಹಿಸುತ್ತಿದ್ದು, ನಾಯಕನ ಪಾತ್ರಕ್ಕೆ ಕನ್ನಡ ಚಿತ್ರರಂಗದ ಕೆಲ ನಾಯಕನಟರ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಕಲಾವಿದರು ಹಾಗೂ ತಾಂತ್ರಿಕ ವರ್ಗ ಎಲ್ಲವನ್ನೂ ಫೈನಲ್ ಮಾಡಿಕೊಂಡು ಮುಂದಿನ ತಿಂಗಳು ಚಿತ್ರೀಕರಣ ಪ್ರಾರಂಭ ಮಾಡುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ. ಇದಕ್ಕಾಗಿ ಸಿದ್ಧತೆಯೂ ನಡೆಯುತ್ತಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,