*ಗುರುಪೂರ್ಣಿಮೆಯ ದಿನ 06 ಚಿತ್ರಗಳ ನಿರ್ಮಾಣಕ್ಕೆ ಮುಂದಾದ "ಅಮೃತ ಸಿನಿ ಕ್ರಾಫ್ಟ್"*. ಚಂದನವನದಲ್ಲಿ ಮತ್ತೆ ಶುಕ್ರ ದೆಸೆ ಆರಂಭವಾದಂತಾಗಿದೆ. ಖ್ಯಾತ ಉದ್ಯಮಿ ವಿಜಯ್ ಟಾಟಾ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಲು ಮುಂದಾಗಿದ್ದಾರೆ. ಬಹಳ ಅಚ್ಚುಕಟ್ಟಾಗಿ ಶರ್ಟನ್ ಹೋಟೆಲ್ ನಲ್ಲಿ ಕಾರ್ಯಕ್ರಮ ಆಯೋಜಿಸಿದ್ದು , ನಮ್ಮ ರಾಜ್ಯದ ಆರೋಗ್ಯ ಮಂತ್ರಿಗಳಾದ ದಿನೇಶ್ ಗುಂಡೂರಾವ್ ಹಾಗೂ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಆಗಮಿಸಿ , ಚಿತ್ರೋದ್ಯಮಕ್ಕೆ ಅನುಕೂಲ ವಾಗುವಂತಹ ಒಳ್ಳೆಯ ಕೆಲಸ ಮಾಡುತ್ತಿದ್ದು , ಆರು ಚಿತ್ರ ನಿರ್ಮಾಣ ಮಾಡುತ್ತಿರುವ ಇವರು ನಿರಂತರವಾಗಿ ಸಿನಿಮಾಗಳನ್ನ ಮಾಡಲಿ , ಚಿತ್ರೋದ್ಯಮಕ್ಕೆ ಸಹಕಾರಿಯಾಗಿ ನಿಲ್ಲಲಿ ಎಂದು ....
ಕೆಡಿ ಟೀಸರ್ ಬಿಡುಗಡೆ: ಅಕ್ಟೋಬರ್ ನಲ್ಲಿ ತೆರೆಗೆ ಸಂಜಯ್ ದತ್- ಶಿಲ್ಪಾ ಶೆಟ್ಟಿ ಭಾಗಿ ಈ ವರ್ಷ ದೊಡ್ಡ ಮಟ್ಟದ ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಚಿತ್ರಗಳಲ್ಲಿ ಕೆಡಿ ಮೊದಲ ಸಾಲಲ್ಲಿದೆ. ಜೋಗಿ ಪ್ರೇಮ್ ನಿರ್ದೇಶನ ಹಾಗೂ ಆಕ್ಷನ್ ಪ್ರಿನ್ಸ್ ದ್ರುವ ಸರ್ಜಾ ಅಭಿನಯದ ಪ್ಯಾನ್ ಇಂಡಿಯಾ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಲುಲು ಮಾಲ್ ನಲ್ಲಿ ನೆರವೇರಿತು. ಈಗಾಗಲೇ ಮುಂಬೈ, ಹೈದರಾಬಾದ್, ಚೆನ್ನೈ ಹಾಗೂ ಕೊಚ್ಚಿಯಲ್ಲಿ 4 ಭಾಷೆಗಳಲ್ಲಿ ಟೀಸರ್ ರಿಲೀಸ್ ಮಾಡಿದ್ದ ಚಿತ್ರತಂಡ ಇದೀಗ ಬೆಂಗಳೂರಲ್ಲಿ ಕನ್ನಡ ಟೀಸರ್ ಗೆ ಚಾಲನೆ ನೀಡಿದೆ. ಈ ಚಿತ್ರದಲ್ಲಿ ನಟಿಸಿರುವ ಬಾಲಿವುಡ್ ನಟ ಸಂಜಯ ದತ್, ಶಿಲ್ಪಾ ಶೆಟ್ಟಿ ಕೂಡ ವೇದಿಕೆಯಲ್ಲಿ ಹಾಜರಿದ್ದರು. ....
ಚಲನಚಿತ್ರವಾಗಿ ರವಿ ಬೆಳಗೆರೆ ಅವರ ವೇಶಗಳು ಜೋಗತಿಯಾಗಿ ಶ್ರೀನಗರ ಕಿಟ್ಟಿ ಹೊಸ ಅವತಾರ ಹುಟ್ಟುಹಬ್ಬಕ್ಕೆ ಟೈಟಲ್ ಟೀಸರ್ ಗಿಫ್ಟ್ ಪತ್ರಕರ್ತ ರವಿ ಬೆಳಗೆರೆ ಅವರು ಜೋಗತಿಯರ ಜೀವನದ ಆಗು ಹೋಗುಗಳ ಬಗ್ಗೆ ಬರೆದಿರುವ ವೇಶಗಳು ಎಂಬ ಸಣ್ಣ ಕಥೆಯನ್ನಾಧರಿಸಿ ಅದೇ ಹೆಸರಿನಲ್ಲಿ ಚಲನಚಿತ್ರವೊಂದು ತಯಾರಾಗುತ್ತಿದೆ. ಗ್ರೀನ್ ಟ್ರೀ ಸ್ಟುಡಿಯೋಸ್ ಅಡಿಯಲ್ಲಿ ಕಿಶನ್ ರಾವ್ ದಳವಿ ಅವರು ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಟೈಟಲ್ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ಸಾಮಾನ್ಯವಾಗಿ ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸುವುದು ವಾಡಿಕೆ. ಆದರೆ ಈ ಚಿತ್ರದಲ್ಲಿ ಕೆಲಸ ಮಾಡುವವರೆಲ್ಲರೂ ....
' *ಸೆಪ್ಟೆಂಬರ್ 10' ಲಿರಿಕಲ್ ಹಾಡಿಗೆ ಕರವೇ ನಾರಾಯಣಗೌಡ್ರು ಚಾಲನೆ " ಕರವೇ ಅಂದ್ರೆ ಬರೀ ಬೀದೀಲಿ ನಿಂತು ಹೋರಾಡುವುದಲ್ಲ. ಕನ್ನಡ ಭಾಷೆ ಉಳಿಸೋ ಎಲ್ಲ ಪ್ರಕಾರಗಳಲ್ಲೂ ಹೋರಾಡಬೇಕು" -ನಾರಾಯಣಗೌಡ್ರು ಇದು ನನ್ನ ಜೀವನಕ್ಕೂ ಹತ್ತಿರವಾದ ಸಿನಿಮಾ; ಸಾಯಿಪ್ರಕಾಶ್* ಸಾಯೋಕೆ ಮಾಡೋ ಧೈರ್ಯವನ್ನು ಬದುಕುವುದಕ್ಕೆ ಮಾಡಿ ಎಂಬ ಸಂದೇಶ ಹೊತ್ತು ಓಂ ಸಾಯಿಪ್ರಕಾಶ್ ಅವರ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ತಯಾರಾದ ಚಿತ್ರ ಸೆಪ್ಟೆಂಬರ್- 10. ಈ ಚಿತ್ರಕ್ಕಾಗಿ ಡಾ.ವಿ. ನಾಗೇಂದ್ರ ಪ್ರಸಾದ್ ಅವರು ಬರೆದು ಸಂಗೀತ ಸಂಯೋಜಿಸಿರುವ ಮೋಟೊವೇಶನಲ್ ಹಾಡಿಗೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ್ರು ಚಾಲನೆ ನೀಡಿದರು. ನಟಿ ಪ್ರಿಯಾಹಾಸನ್, ....
*ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಅದ್ದೂರಿಯಾಗಿ ಅನಾವರಣವಾಯಿತು "ಜಾಲಿಡೇಸ್" ಹುಡುಗನ "31 DAYS" ಚಿತ್ರದ ಹಾಡುಗಳು* . *ಇದು ಜನಪ್ರಿಯ ಸಂಗೀತ ನಿರ್ದೇಶಕ ವಿ.ಮನೋಹರ್ ಸಂಗೀತ ಸಂಯೋಜನೆಯ 150ನೇ ಚಿತ್ರ* "ಜಾಲಿಡೇಸ್" ಚಿತ್ರದ ಖ್ಯಾತಿಯ ನಿರಂಜನ್ ಶೆಟ್ಟಿ ನಾಯಕನಾಗಿ ನಟಿಸಿರುವ "31 DAYS" ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಶನಿವಾರ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಅದ್ದೂರಿಯಾಗಿ ನೆರವೇರಿತು. ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್, ಮಾಜಿ ಸಂಸದರಾದ ಜಯಪ್ರಕಾಶ್ ಹೆಗ್ಡೆ, ಸಂಗೀತ ನಿರ್ದೇಶಕ ಗುರುಕಿರಣ್, ನಟಿ - ನಿರ್ಮಾಪಕಿ ಗೀತಪ್ರಿಯ ಮುಂತಾದ ಗಣ್ಯರು ವಿ.ಮನೋಹರ್ ಬರೆದು, ಹಾಡಿ, ಸಂಗೀತ ಸಂಯೋಜಿಸಿರುವ ಈ ಚಿತ್ರದ ಹಾಡುಗಳನ್ನು ಅನಾವರಣ ಮಾಡಿ ಚಿತ್ರ ....
*ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿದೆ "ರಾಜನಿವಾಸ"* .. *ಕ.ರ.ವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಅವರಿಂದ ಟ್ರೇಲರ್ ಅನಾವರಣ. ನಟ ಆದಿತ್ಯ ಸೇರಿದಂತೆ ಹಲವು ಗಣ್ಯರ ಉಪಸ್ಥಿತಿ* . ಡಿ.ಪಿ.ಆಂಜನಪ್ಪ ನಿರ್ಮಿಸಿರುವ, ಲೋಕೇಶ್ ಗೌಡ ಅವರ ಸಹ ನಿರ್ಮಾಣವಿರುವ, ಮಿಥುನ್ ನಿರ್ದೇಶನದ ಹಾಗೂ ರಾಘವ್ ನಾಯಕ್, ಕೃತಿಕ ಅಭಿನಯದ ಮತ್ತು ಶ್ರೀನಗರ ಕಿಟ್ಟಿ ವಿಶೇಷಪಾತ್ರದಲ್ಲಿ ನಟಿಸಿರುವ " ರಾಜನಿವಾಸ" ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಕ.ರ.ವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣ ಗೌಡ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿದರು. ನಟ ಆದಿತ್ಯ, ನಿರ್ಮಾಪಕರಾದ ಉದಯ್ ಕೆ ಮೆಹ್ತಾ, ಸಂಜಯ್ ಗೌಡ, ವೀರಕಪುತ್ರ ಶ್ರೀನಿವಾಸ್, ....
*ಸುಮಧುರವಾಗಿದೆ "ಹಚ್ಚೆ" ಹಾಡು* . *ಅಶ್ವ ಫಿಲಂಸ್ ನಿರ್ಮಾಣದ, ಯಶೋಧರ ನಿರ್ದೇಶನದ ಈ ಚಿತ್ರಕ್ಕೆ ಅಭಿಮನ್ಯು ನಾಯಕ* ಅಶ್ವ ಫಿಲಂಸ್ ಲಾಂಛನದಲ್ಲಿ ಯಶೋಧರ ಅವರು ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸಿರುವ ಹಾಗೂ ಅಭಿಮನ್ಯು ನಾಯಕನಾಗಿ ನಟಿಸಿರುವ ಹಾಗೂ ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ "ಹಚ್ಚೆ" ಚಿತ್ರಕ್ಕಾಗಿ ಯಶೋಧರ ಅವರೆ ಬರೆದಿರುವ "ವಿಘ್ನೇಶ್ವರಾಯ" ಎಂಬ ಹಾಡು ಇತ್ತೀಚೆಗೆ ಅನಾವರಣವಾಯಿತು. ವಿವೇಕ್ ಚಕ್ರವರ್ತಿ ಸಂಗೀತ ನೀಡಿರುವ ಹಾಗೂ ಶಿವಂ ಅವರು ಹಾಡಿರುವ ಈ ಸುಮಧುರ ಹಾಡನ್ನು ಮಾಧ್ಯಮದ ಮಿತ್ರರೆಲ್ಲ ಸೇರಿ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು. ಬಿಡುಗಡೆಯಾದ ಕ್ಷಣದಿಂದಲೇ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ....
*ಗೋಲ್ಡನ್ ಸ್ಟಾರ್ ಗಣೇಶ್ ಅವರಿಂದ ಅನಾವರಣವಾಯಿತು "ನಿದ್ರಾದೇವಿ Next Door" ಚಿತ್ರದ *"ನೀ ನನ್ನ" ಎಂಬ ರೊಮ್ಯಾಂಟಿಕ್ ಸಾಂಗ್*. ಸುರಮ್ ಮೂವೀಸ್ ಲಾಂಛನದಲ್ಲಿ ಜಯರಾಮ ದೇವಸಮುದ್ರ ನಿರ್ಮಿಸಿರುವ ಹಾಗೂ ಸುರಾಗ್ ನಿರ್ದೇಶನದ ಹಾಗೂ ಪ್ರವೀರ್ & ರಿಷಿಕಾ ನಾಯಕ - ನಾಯಕಿಯಾಗಿ ನಟಿಸಿರುವ "ನಿದ್ರಾದೇವಿ next door" ಚಿತ್ರ ಶೀರ್ಷಿಕೆಯಿಂದಲೇ ಕುತೂಹಲ ಮೂಡಿಸಿರುವ ಚಿತ್ರ. ಇತ್ತೀಚೆಗೆ ಬಿಡುಗಡೆಯಾಗಿದ್ದ ಈ ಚಿತ್ರದ "ಸ್ಲೀಪ್ ಲೆಸ್ ಆಂಥೆಮ್" ಹಾಡು ಒಂದು ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿದ್ದು, ಮೆಚ್ಚುಗೆ ಪಡೆದುಕೊಂಡಿದೆ. ಈ ಹಾಡನ್ನು ದುನಿಯಾ ವಿಜಯ್ ಕುಮಾರ್ ಬಿಡುಗಡೆ ಮಾಡಿದ್ದರು. ಪ್ರಸ್ತುತ ಚಿತ್ರದ ಎರಡನೇ ಹಾಡು "ನೀ ನನ್ನ" ಎಂಬ ರೊಮ್ಯಾಂಟಿಕ್ ಸಾಂಗ್ ಇತ್ತೀಚೆಗೆ ....
*ಹುಬ್ಬಳ್ಳಿಯಲ್ಲಿ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ಅನಾವರಣವಾಯಿತು "ಎಲ್ಟು ಮುತ್ತಾ” ಚಿತ್ರದ ಹಾಡುಗಳು* . *ಇದೇ ಸಂದರ್ಭದಲ್ಲಿ ಸಂಗೀತ ಕ್ಷೇತ್ರದಲ್ಲಿ 50 ವರ್ಷ ಪೂರೈಸಿದ ಗಾಯಕಿ ಸಂಗೀತಾ ಕಟ್ಟಿ ಅವರಿಗೆ ಚಿತ್ರತಂಡದಿಂದ ಆತ್ಮೀಯ ಸನ್ಮಾನ* HIGH 5 ಸ್ಟುಡಿಯೋಸ್ ಲಾಂಛನದಲ್ಲಿ ಸತ್ಯ ಎಸ್. ಶ್ರೀನಿವಾಸನ್ ನಿರ್ಮಿಸಿರುವ, ರಾ.ಸೂರ್ಯ ನಿರ್ದೇಶನದ ಹಾಗೂ ಶೌರ್ಯ ಪ್ರತಾಪ್, ರಾ.ಸೂರ್ಯ, ಪ್ರಿಯಾಂಕ ಮಳಲಿ ಮುಂತಾದವರು ಅಭಿನಯಿಸಿರುವ ‘ಎಲ್ಟು ಮುತ್ತಾ’ ಚಿತ್ರಕ್ಕಾಗಿ ಪ್ರಸನ್ನ ಕೇಶವ ಸಂಗೀತ ಸಂಯೋಜಿಸಿರುವ ಹಾಡುಗಳ ಬಿಡುಗಡೆ ಸಮಾರಂಭ ಹಾಗೂ ಚಿತ್ರದ ಪತ್ರಿಕಾಗೋಷ್ಠಿ ಇತ್ತೀಚೆಗೆ ಹುಬ್ಬಳ್ಳಿಯ ರಾಯಲ್ ರಿಟ್ಜ್ ರೆಸಾರ್ಟ್ ನಲ್ಲಿ ಅದ್ದೂರಿಯಾಗಿ ....
*ಪ್ರಥಮ್ ಅಭಿನಯದ "ಫಸ್ಟ್ ನೈಟ್ ವಿತ್ ದೆವ್ವ" ಚಿತ್ರದಿಂದ ರೊಮ್ಯಾಂಟಿಕ್ ಹಾಡು ಬಿಡುಗಡೆ* . *ಸದ್ಯದಲ್ಲೇ ತೆರೆಗೆ ಬರಲಿದೆ ಪಿ.ವಿ.ಆರ್ ಸ್ವಾಮಿ ಛಾಯಾಗ್ರಹಣ ಹಾಗೂ ನಿರ್ದೇಶನದ ಈ ಚಿತ್ರ* . "ಬಿಗ್ ಬಾಸ್" ಮೂಲಕ ಜನಪ್ರಿಯರಾದ ನಟ ಪ್ರಥಮ್ ನಾಯಕನಾಗಿ ಅಭಿನಯಿಸಿರುವ, ಪಿ.ವಿ.ಆರ್ ಸ್ವಾಮಿ ಗೂಗಾರೆದೊಡ್ಡಿ ನಿರ್ದೇಶನದ "ಫಸ್ಟ್ ನೈಟ್ ವಿತ್ ದೆವ್ವ" ಚಿತ್ರದ "ತುಂಟ ಮನದ ಮಾಯೆ ನೀನು" ಎಂಬ ರೊಮ್ಯಾಂಟಿಕ್ ಹಾಡು ಇತ್ತೀಚೆಗೆ A2 music ಮೂಲಕ ಬಿಡುಗಡೆಯಾಯಿತು. ಕನ್ನಡದ ಮೊದಲ ಪತ್ರಿಕಾ ಪ್ರಚಾರಕರ್ತ ಡಿ.ವಿ.ಸುಧೀಂದ್ರ ನೇತೃತ್ವದ ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಸುಧೀಂದ್ರ ವೆಂಕಟೇಶ್ ಹಾಗೂ ಸುನೀಲ್ ಸುಧೀಂದ್ರ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ....
ಆಕ್ಷನ್ ಥ್ರಿಲ್ಲರ್ "ಫೀನಿಕ್ಸ್" ಟೀಸರ್ ಬಿಡುಗಡೆ 'ಫೀನಿಕ್ಸ್’ ಗ್ರೀಕ್ ಮೂಲದ ಒಂದು ಕಾಲ್ಪನಿಕ ಪಕ್ಷಿ. ಅದು ಭಸ್ಮವಾದರೂ ಮತ್ತೆ ಎದ್ದು ಬರುತ್ತೆ ಎಂದು ಹೇಳುತ್ತಾರೆ. ಅಂಥದೇ ಕಂಟೆಂಟ್ ಇಟ್ಟುಕೊಂಡು ತಯಾರಾದ ಚಿತ್ರ ಫೀನಿಕ್ಸ್. ಮೋಸ ಹೋಗುವವರಿದ್ದ ಹಾಗೆ ಮೋಸ ಮಾಡುವವರೂ ಇರುತ್ತಾರೆ, ಅದರಲ್ಲೂ ಮೋಸಗಾರರೇ ಜಾಸ್ತಿ ಎಂಬ ವಿಷಯದ ಮೇಲೆ ಫೀನಿಕ್ಸ್ ಚಿತ್ರ ತಯಾರಾಗಿದೆ. ಹೊಸೂರು ವೆಂಕಟ್ ಅವರ ಕಥೆ, ಚಿತ್ರಕಥೆ, ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದ ಆಡಿಯೋ, ಟೀಸರ್ ಬಿಡುಗಡೆ ಸಮಾರಂಭ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು. ಗೋಕುಲ್ ಕೃಷ್ಣ ಫಿಲಂಸ್ ಲಾಂಛನದಲ್ಲಿ ಹೊಸೂರಿನ ಶ್ರೀನಿವಾಸ್ ಸಿ. ಅವರು ಈ ಚಿತ್ರವನ್ನು ....
*ಕೋಮಲ್ ಹೊಸಚಿತ್ರಕ್ಕೆ ಟೈಟಲ್ ಫಿಕ್ಸ್* *ಮತ್ತೊಂದು ಕಾಮಿಡಿ ಕಮಾಲ್ ಮಾಡಲು ಕೋಮಲ್ ರೆಡಿ* *’ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಮುಂದೆ ಕೋಮಲ್* ನಟ ಕೋಮಲ್ ಕುಮಾರ್ ಸದ್ದಿಲ್ಲದೆ ಹೊಸಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದ್ದಾರೆ. ಹೌದು, ಕೋಮಲ್ ಕುಮಾರ್ ನಾಯಕನಾಗಿ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಎಂದು ಹೆಸರಿಡಲಾಗಿದ್ದು, ಇದೀಗ ಈ ಸಿನಿಮಾದ ಟೈಟಲ್ ಪೋಸ್ಟರ್ ಪ್ರೋಮೋ ಮತ್ತು ಫಸ್ಟ್ ಲುಕ್ ಬಿಡುಗಡೆಯಾಗಿದೆ. ಈ ಹಿಂದೆ ‘ಕತ್ತಲೆ ಕೋಣೆ’, ‘ಇನಾಂದಾರ್’, ‘ಗುಂಮ್ಟಿ’ ಚಿತ್ರಗಳನ್ನು ನಿರ್ದೇಶಿಸಿದ್ದ ಯುವ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ‘ಸಂಗೀತ ಬಾರ್ ಅಂಡ್ ....
*ಭಾರತದ ಹಿರಿಮೆ ಸಾರುವ ಓ ಮೈ ಇಂಡಿಯಾ* ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ *ಓ ಮೈ ಇಂಡಿಯಾ* ಚಿತ್ರದ ಹಾಡು ಮತ್ತು ಟ್ರೇಲರ್ ಬಿಡುಗಡೆ ಸಮಾರಂಭವು ಶ್ರೀ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಹಿರಿಯ ನಟ ಎಂ.ಎಸ್.ಉಮೇಶ್, ಸಮಾಜ ಸೇವಕ ಮಹೇಂದ್ರಮುನ್ನೋತ್ ಮತ್ತು ನಿರ್ಮಾಪಕ ಡಾ.ಲಯನ್.ಎಸ್.ವೆಂಕಟೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು. ಸಾನ್ವಿಶ್ರೀಯಾ ಪ್ರೊಡಕ್ಷನ್ಸ್ ಅಡಿಯಲ್ಲಿ ಹಾಸನದ *ರಮ್ಯಾಲೋಕೇಶ್ ನಿರ್ಮಾಣ* ಮಾಡಿದ್ದಾರೆ. ಹಿರಿಯ ಪತ್ರಕರ್ತ *ಜಿ.ಎನ್.ಕೃಷ್ಣಮೂರ್ತಿ ಸಿನಿಮಾಕ್ಕೆ ಕಥೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಆಕ್ಷನ್ ಕಟ್* ಹೇಳಿದ್ದಾರೆ. *ರತನ್ದೇವ್ ನಾಯಕ*. ....
*ಡಬ್ಬಿಂಗ್ ಮುಗಿಸಿದ ’ದಿ ರೈಸ್ ಆಫ್ ಅಶೋಕ’..ಶೀಘ್ರದಲ್ಲೇ ತೆರೆಗೆ ಅಭಿನಯ ಚತುರ ಸತೀಶ್ ಹೊಸ ಸಿನಿಮಾ* *ಸತೀಶ್ ನೀನಾಸಂ ನಟನೆಯ ದಿ ರೈಸ್ ಆಫ್ ಅಶೋಕ ಡಬ್ಬಿಂಗ್ ಮುಕ್ತಾಯ* ಅಭಿನಯ ಚತುರ ಸತೀಶ್ ನೀನಾಸಂ ಹೊಸ ಅವತಾರವೆತ್ತಿರುವ ಬಹು ನಿರೀಕ್ಷಿತ ಸಿನಿಮಾ ದಿ ರೈಸ್ ಆಫ್ ಅಶೋಕ. ಈಗಾಗಲೇ ಒಂದಷ್ಟು ಪೋಸ್ಟರ್ ಮೂಲಕ ಕುತೂಹಲ ಹೆಚ್ಚಿಸಿರುವ ಈ ಚಿತ್ರವೀಗ ಡಬ್ಬಿಂಗ್ ಮುಗಿಸಿದೆ. ಬೆಂಗಳೂರಿನ ಆಕಾಶ್ ಸ್ಟುಡಿಯೋದಲ್ಲಿ ಚಿತ್ರದ ನಾಯಕ ಸತೀಶ್ ಹಾಗೂ ನಾಯಕಿ ಸಪ್ತಮಿ ಗೌಡ ತಮ್ಮ ಪಾತ್ರಗಳಿಗೆ ಮಾತು ಪೊಣಿಸಿದ್ದಾರೆ. ಡಬ್ಬಿಂಗ್ ಪೂರ್ಣಗೊಂಡ ಬಳಿಕ ಮಾಧ್ಯಮದವರೊಂದಿಗೆ ನಟ ಸತೀಶ್ ನೀನಾಸಂ ಮಾತನಾಡಿ, ದಿ ರೈಸ್ ಆಫ್ ಅಶೋಕ ಸಿನಿಮಾದ ....
"ಅಂದೊಂದಿತ್ತು ಕಾಲ" ಚಿತ್ರದ ಎರಡನೇ ಹಾಡು ’ಅರೇರೇ ಯಾರೋ ಇವಳು..’ ಬಿಡುಗಡೆ ಮಾಡಿದ ಶಾಲಾ ವಿದ್ಯಾರ್ಥಿಗಳು. ಈಗಾಗಲೇ ಸಿನಿಪ್ರಿಯರ ಮನಸ್ಸನ್ನ ಗೆದ್ದಿರುವಂತಹ "ಅಂದೊಂದಿತ್ತು ಕಾಲ" ಚಿತ್ರದ ’ಮುಂಗಾರು ಮಳೆಯಲ್ಲಿ ...’ ಎಂಬ ಹಾಡು ಸೂಪರ್ ಹಿಟ್ ಆಗಿದ್ದು , ಯೂಟ್ಯೂಬ್ ನಲ್ಲಿ 36.4 ಮಿಲಿಯನ್ ವೀವ್ಸ್ ಆಗಿದೆ. ಹಾಗೆಯೇ ಈ ಸಾಂಗ್ ನ ರೀಲ್ಸ್ ಬಹಳಷ್ಟು ಅಭಿಮಾನಿಗಳು ಮಾಡಿ ಅಪ್ಲೋಡ್ ಕೂಡ ಮಾಡಿದ್ದಾರೆ. ಇದು ಇಡೀ ಚಿತ್ರತಂಡದ ಸಂಭ್ರಮವನ್ನು ಹೆಚ್ಚು ಮಾಡಿದ್ದು, ಚಿತ್ರ ಯಶಸ್ವಿ ಆಗುವ ನಿರೀಕ್ಷೆಯಲ್ಲಿದ್ದಾರೆ. ಈಗ ತಮ್ಮ ಚಿತ್ರದ ಎರಡನೇ ಹಾಡನ್ನು ರಿಲೀಸ್ ಮಾಡುವುದರ ಜೊತೆಗೆ ಪತ್ರಿಕಾಗೋಷ್ಠಿಯನ್ನು ಆಯೋಜನೆ ಮಾಡಿತ್ತು ಚಿತ್ರತಂಡ. ವೇದಿಕೆಯ ....
*ಜುಲೈ 4 ರಂದು ರಾಜೀವ್ ರೆಡ್ಡಿ ಅಭಿನಯದ "ಕ್ಯಾಪಿಟಲ್ ಸಿಟಿ" ಚಿತ್ರ ಬಿಡುಗಡೆ.* . *ಆರ್ ಅನಂತರಾಜು ನಿರ್ದೇಶನದ ಈ ಚಿತ್ರದ ಪ್ರಮುಖಪಾತ್ರದಲ್ಲಿ ಖ್ಯಾತ ನಟ ರವಿಶಂಕರ್* "ಇನಿಫಿನಿಟಿ ಕ್ರಿಯೇಷನ್ಸ್" ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗಿರುವ, "ಅಪ್ಪು ಪಪ್ಪು", " ಮಸ್ತ್ ಮಜಾ ಮಾಡಿ", "ನಂದ" ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಆರ್ ಅನಂತರಾಜು ನಿರ್ದೇಶನದ ಹಾಗೂ "ಜಿಂದಗಿ" ಚಿತ್ರದ ನಂತರ ರಾಜೀವ್ ರೆಡ್ಡಿ ನಾಯಕನಾಗಿ ನಟಿಸಿರುವ "ಕ್ಯಾಪಿಟಲ್ ಸಿಟಿ" ಚಿತ್ರ ಇದೇ ಜುಲೈ 4 ರಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು. ....
*"ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ* 2015ರ ಜುಲೈ 3 ರಂದು ತೆರೆಕಂಡು, ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಎಚ್.ಕೆ. ಪ್ರಕಾಶ್ ನಿರ್ಮಾಣದ, ಅನೂಪ್ ಭಂಡಾರಿ ನಿರ್ದೇಶನದ ಬ್ಲಾಕ್ಬಸ್ಟರ್ ಚಲನಚಿತ್ರ ’ರಂಗಿತರಂಗ’, ಈಗ ಹತ್ತು ವರ್ಷಗಳ ನಂತರ ಮತ್ತೆ ತೆರೆಗೆ ಬರಲು ಸಜ್ಜಾಗಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ, ಚಿತ್ರತಂಡದ ಸದಸ್ಯರು ತಮ್ಮ ಅನುಭವಗಳನ್ನು ಹಂಚಿಕೊಂಡು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. *ನಿರ್ಮಾಪಕ ಎಚ್.ಕೆ. ಪ್ರಕಾಶ್: "ಹತ್ತು ವರ್ಷಗಳ ನಂತರವೂ ’ರಂಗಿತರಂಗ’ ಪ್ರಕಾಶ್ ಎಂದೇ ಗುರುತಿಸುತ್ತಾರೆ!"* "ನಾನು ನಿರೂಪ್ ನಟಿಸಿದ್ದ ....
ಹಾಡಿನ ಸಾಲು ಚಿತ್ರದ ಶೀರ್ಷಿಕೆ ಟಿ.ಪಿಕೈಲಾಸಂ ಸಾಹಿತ್ಯ, ಮೈಸೂರು ಅನಂತಸ್ವಾಮಿ ಗಾಯನ ಮತ್ತು ಸಂಗೀತದ ’ತಿಪ್ಪಾರಳಿ ಬಲುದೂರ’ ಜಾನಪದ ಹಾಡಿನ ಪದವನ್ನು ಬಳಸಿಕೊಂಡು *ತಿಪ್ಪಾರಳ್ಳೀಲಿ ತಿಮ್ಮಣ್ಣ ಡಾಕ್ಟ್ರು* ಸಿನಿಮಾ ಸಿದ್ದಗೊಂಡಿದೆ. ಪ್ರಚಾರದ ಮೊದಲ ಹಂತವಾಗಿ ಸಿನಿಮಾದ ಟ್ರೇಲರ್ ಮತ್ತು ಹಾಡಿನ ಬಿಡುಗಡೆ ಸಮಾರಂಭ ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಬೆಳಗಾವಿ ಮೂಲದ ಉದ್ಯಮಿ *ಗಿರೀಶ ಪ್ರಕಾಶ ಭಸ್ಮೇ ನಾಯಕನಾಗಿ ನಟಿಸುವ ಜತೆಗೆ ಶ್ರೀ ದಾನಮ್ಮ ದೇವಿ ಫಿಲಂಸ್ ಲಾಂಛನದಲ್ಲಿ ಬಂಡವಾಳ ಹೂಡಿದ್ದಾರೆ* ನಾಲ್ಕು ದಶಕಗಳ ಕಾಲ ಸಹ ನಿರ್ದೇಶನ-ಸಹಾಯಕ ನಿರ್ದೇಶಕರಾಗಿ ಕನ್ನಡ, ಹಿಂದಿ, ತೆಲುಗು ಸಿನಿಮಾಗಳಲ್ಲಿ ಕೆಲಸ ಮಾಡಿರುವ *ಕೆ.ಮೋಹನ್ ....
*’ತಾಯವ್ವ’ ಮುಖದಲ್ಲಿ ಗೆಲುವಿನ ನಗು* *ಸದ್ದಿಲ್ಲದೆ ಯಶಸ್ವಿ 25 ದಿನ ಪೂರೈಸಿದ ‘ತಾಯವ್ವ’* *ಚಿತ್ರರಂಗದ ಗಣ್ಯರ ಜೊತೆ ಯಶಸ್ಸಿನ ಖುಷಿ ಹಂಚಿಕೊಂಡ ‘ತಾಯವ್ವ’ ಬಳಗ* ಬೆಂಗಳೂರು: ಇದೇ 2025ರ ಮೇ ತಿಂಗಳ 30 ರಂದು ಕನ್ನಡದಲ್ಲಿ ತೆರೆಕಂಡ ‘ತಾಯವ್ವ’ ಚಿತ್ರ ಯಶಸ್ವಿಯಾಗಿ 25 ದಿನಗಳ ಪ್ರದರ್ಶನವನ್ನು ಪೂರೈಸಿದೆ. ‘ಅಮರ ಫಿಲಂಸ್’ ಬ್ಯಾನರಿನಲ್ಲಿ ಗೀತಪ್ರಿಯಾ ನಿರ್ಮಿಸಿ, ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ತಾಯವ್ವ’ ಮಹಿಳಾ ಪ್ರದಾನ ಕಥಾಹಂದರವನ್ನು ಹೊಂದಿದ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಗ್ರಾಮೀಣ ಭಾಗದ ಸೂಲಗಿತ್ತಿ ಮಹಿಳೆಯ ಬದುಕನ್ನು ಅನಾವರಣ ಮಾಡಲಾಗಿದೆ. ಸದ್ಯ ಬಿಡುಗಡೆಯಾಗಿರುವ ‘ತಾಯವ್ವ’ ಚಿತ್ರಕ್ಕೆ ....
ಚಿತ್ರ: ತಿಮ್ಮನ ಮೊಟ್ಟೆಗಳು**** ನಿರ್ದೇಶನ: ರಕ್ಷಿತ್ತೀರ್ಥಹಳ್ಳಿ ನಿರ್ಮಾಪಕ: ಆದರ್ಶ್ ಅಯ್ಯಂಗಾರ್ ತಾರಾಗಣ: ಕೇಶವ್ ಗುತ್ತಳಿಕೆ, ಸುಚೇಂದ್ರಪ್ರಸಾದ್, ಶೃಂಗೇರಿ ರಾಮಣ್ಣ, ರಘು, ಆಶಿಕಾಸೋಮಶೇಖರ್, ಪ್ರಗತಿ, ವಿನಯ್ ಕಣಿವೆ ಕಾಡಿನ ಕಥನ ತಿಮ್ಮನ ಮೊಟ್ಟೆಗಳು ಮುಂದುವರೆಯುತ್ತಿರುವ ತಂತ್ರಜ್ಞಾನ, ಮತ್ತೋಂದು ಕಡೆ ಜನರ ಮೂಡ ನಂಬಿಕೆಗಳು. ಇದರ ಮಧ್ಯೆ ಪ್ರಾಣಿ-ಪಕ್ಷಿಗಳು, ಪ್ರಕೃತಿ ....