Hagalu Kanasu.Film Review.

Friday, December 06, 2019

1057

                

ಹಗಲು ಕನಸು ನೋಡಲು ಸೊಗಸು

      ‘ಹಗಲು ಕನಸು’ ಚಿತ್ರದ ಹೆಸರೇ ಹೇಳುವಂತೆ ಕತೆಯು ಶುಕ್ರವಾರ, ಶನಿವಾರ ಮತ್ತು ಭಾನುವಾರ ವಿಕೆಂಡ್‌ನಲ್ಲಿ ನಡೆಯುತ್ತದೆ.  ಕಥಾನಾಯಕ  ವಿಕ್ರಂಗೆ  ಪ್ರತಿ ಬಾರಿ ಕುತ್ತಿಗೆ ಮೇಲೆ ಮಚ್ಚೆ ಇರುವ ಮುಖ ಕಾಣಿಸದ ಹುಡುಗಿಯೊಬ್ಬಳು ಸಿಕ್ಕಂತೆ ಕನಸು ಕಾಣುತ್ತಿರುತ್ತಾನೆ. ಸೋಜಿಗ ಎನ್ನುವಂತೆ ಒಮ್ಮೆ ಅದೇ ತರಹದ ಹುಡುಗಿಯೊಬ್ಬಳು ಮನೆ ಪ್ರವೇಶಿಸಿದಾಗ ಮನೆಯಲ್ಲಿರುವ ಇಬ್ಬರು ಅಳಿಯಂದಿರಿಗೆ  ಪಜೀತಿಯಾಗುತ್ತದೆ. ಆಕೆಯು ಇಲ್ಲಿಗೆ  ಬಂದು ಹನಿಟ್ರ್ಯಾಪ್ ಮಾಡಲು  ಕಾರಣವಿರುತ್ತದೆ. ಅದು ಏನು ಎಂಬುದು ಸೆಸ್ಪೆನ್ಸ್ ,ಥ್ರಿಲ್ಲರ್ ಮಾದರಿಯಲ್ಲಿ ತೋರಿಸಲಾಗಿದೆ. ಥ್ರಿಲ್ಲರ್, ಹಾಸ್ಯ ಇರುವುದರಿಂದ ಬೇಸರ ತರಿಸುವುದಿಲ್ಲ. 

        ಮಾಸ್ಟರ್ ಆನಂದ್ ಮೊದಲಬಾರಿ ನಾಯಕನಾಗಿ ಅದ್ಬುತವಾಗಿ ಅಭಿನಯಿಸಿದ್ದಾರೆ.  ನಾಯಕಿ ಸನಿಹಯಾದವ್ ಮೊದಲ ಚಿತ್ರದಲ್ಲಿ ಮೈ ಚಳಿ ಬಿಟ್ಟು ಅಭಿನಯಿಸಿರುವುದು ಕಂಡು ಬರುತ್ತದೆ. ಅಳಿಯಂದಿರುಗಳಾಗಿ ಅಶ್ವಿನ್‌ಹಾಸನ್, ನೀನಾಸಂ ಅಶ್ವಥ್ ಸಮಾನ ಅವಕಾಶ ಸಿಕ್ಕಿದೆ.  ನಾರಾಯಣಸ್ವಾಮಿ, ಚಿತ್ಕಲಾಬಿರಾದಾರ್, ವಾಣಿಶ್ರೀ, ಸ್ವಸ್ಕಿಕ್‌ಶಂಕರ್ ನೀಡಿದ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ. ಮನ್‌ದೀಪ್‌ರಾಯ್ ಒಂದೇ ಕಾಸ್ಟೂಮ್, ಸ್ಥಳದಲ್ಲಿ ಕಡಿಮೆ ನಗಿಸುತ್ತಾರೆ.  ಸದಭಿರುಚಿಯ ಚಿತ್ರಗಳನ್ನು ನೀಡಿರುವ ದಿನೇಶ್‌ಬಾಬು ರಚನೆ, ಛಾಯಾಗ್ರಹಣ ಮತ್ತು ನಿರ್ದೇಶನ ಮಾಡಿರುವುದು ಸಿನಿಮಾಕ್ಕೆ ಕಳಸವಿಟ್ಟಂತೆ ಆಗಿದೆ.  ಕಾರ್ತಿಕ್‌ವೆಂಕಟೇಶ್ ಸಂಗೀತದಲ್ಲಿ ಒಂದು ಹಾಡು ನೋಡಬಹುದು, ಕೇಳಬಹುದು. ವಿ.ಜಿ.ಅಚ್ಯುತರಾಜ್, ರಹಮತ್ ಮತ್ತು ಎಂ.ಪದ್ಮನಾಭ ಬಂಡವಾಳ ಹೂಡಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,