Avane Srimannarayana.Film Review.

Friday, December 27, 2019

 ಫ್ಯಾಂಟಸಿ ಕಥನ ಅವನೇ ಶ್ರೀಮನ್ನಾರಾಯಣ

       ಅಮರಾವತಿ ಎಂಬ  ಕಾಲ್ಪನಿಕ ಊರಿನಲ್ಲಿ ‘ಅವನೇ ಶ್ರೀಮನ್ನಾರಾಯಣ’ ಚಿತ್ರವು ಸಾಗುತ್ತದೆ.  ನಿಧಿಯೊಂದು ದರೋಡೆಯಾಗುತ್ತದೆ. ಅದನ್ನು ಕಬಳಿಸಲು ಕಾದಿರುವ ಮತ್ತೋಂದು ದರೋಡೆಕೋರರ ತಂಡ. ನಾಪತ್ತೆಯಾದ ನಿಧಿಯ ಹುಡುಕಾಟ. ಇದರ ಮಧ್ಯೆ  ‘ರಾಮರಾಮ ತುಸು ದಕ್ಷ ವೃತ ಜಾರಿಪಾ’ ಎಂಬ ಸ್ಲೋಗನ್. ಇಲ್ಲಿಗೆ ಬರುವ ಚಾಣಾಕ್ಷ ಇನ್ಸ್‌ಪೆಕ್ಟರ್ ನಾಟಕಕಾರರು ಕಳವು ಮಾಡಿ ಬಚ್ಚಿಟ್ಟ ನಿಧಿಯನ್ನು ಹೇಗೆ ಹುಡುಕುತ್ತಾನೆ, ಅದಕ್ಕೆ ಆತ ಯಾವ ರೀತಿ ಮಾರ್ಗ ಅನುಸರಿಸುತ್ತಾನೆ.  ಇದಕ್ಕೆ  ಸರಿಯಾಗಿ ದಾರಿಯಲ್ಲಿ ಬರುವ ಸವಾಲುಗಳನ್ನು  ಎದುರಿಸುವ  ರೀತಿ.  ಅಂತಿಮವಾಗಿ ಅದು ಯಾರಿಗೆ ದಕ್ಕುತ್ತದೆ ಎಂಬುದು ಒನ್ ಲೈನ್ ಸ್ಟೋರಿಯಾಗಿದೆ.  ಪ್ರಾರಂಭದಲ್ಲಿ ಅಭೀರ ಸಂಸ್ಥಾನ ಒಡೆಯ ರಾಮಚಂದ್ರನಿಗೆ ಸ್ವಂತ ಮಗ ಜಯರಾಮ್, ಅನ್ಯರಿಗೆ  ಹುಟ್ಟಿರುವ ತುಕಾರಾಂ. ಇಬ್ಬರು ನಿಧಿಗಾಗಿ ಒಬ್ಬರನ್ನೊಬ್ಬರು ಕತ್ತಿ ಮಸೆಯಿತ್ತಿರುತ್ತಾರೆ. ಒಡೆಯನ ಮರಣಾನಂತರ ಇಬ್ಬರಿಗೂ ಚಳ್ಳೆ ಹಣ್ಣು ತಿನ್ನಿಸಲು ಬರುವ ಪೋಲೀಸ್ ಅಧಿಕಾರಿ,  ಪೇದೆ, ಅಲ್ಲೊಂದು ಪತ್ರಿಕೆಯ ಸಂಪಾದಕ, ಪತ್ರ್ರಕರ್ತೆ. ಹೀಗೇ ಸಂರ್ಕೀಣ ಪಾತ್ರಗಳು ನೋಡಿಸಿಕೊಂಡು ಹೋಗುತ್ತದೆ. 

       ಶೀರ್ಷಿಕೆ ಹೆಸರಿನಲ್ಲಿ  ರಕ್ಷಿತ್‌ಶೆಟ್ಟಿ ನಾಯಕನ ಜೊತೆಗೆ  ಎಲ್ಲಾ ವಿಭಾಗದಲ್ಲಿ ನಿಗಾವಹಿಸಿದಕ್ಕೆ ಫಲಿತಾಂಶ ರ‍್ಯಾಂಕ್ ವಿದ್ಯಾರ್ಥಿ. ಪತ್ರಕರ್ತೆಯಾಗಿ ಶಾನ್ವಿಶ್ರೀವಾತ್ಸವ್  ನ್ಯಾಯ ಒದಗಿಸಿದ್ದಾರೆ.   ಸೋದರರಾಗಿ ಬಾಲಾಜಿಮನೋಹರ್, ಪ್ರಮೋದ್‌ಶೆಟ್ಟ, ಪೇದೆಯಾಗಿ ಅಚ್ಯುತಕುಮಾರ್ ಗಮನ ಸೆಳೆಯುತ್ತಾರೆ.  ಕಡಿಮೆ ಸಮಯದಲ್ಲಿ ಬರುವ ಯೋಗರಾಜಭಟ್, ಅಶ್ವಿನ್‌ಹಾಸನ್, ವಿಜಯ್‌ಚೆಂಡೂರು, ಗೋಪಾಲಕೃಷ್ಣದೇಶಪಾಂಡೆ, ರಘುಪಾಂಡೇಶ್ವರ್, ರಘುಕೊಪ್ಪ ಇವರುಗಳು ಕಾಣಿಸಿಕೊಂಡಿದ್ದಾರೆ.  ಅಜನೀಶ್‌ಲೋಕನಾಥ್ ಹಿನ್ನೆಲೆ ಸಂಗೀತ ಎಲ್ಲದಕ್ಕೂ ಪೂರಕವಾಗಿದೆ.  ಮೊದಲು ಬಾರಿ ಸಂಕಲನ, ನಿರ್ದೇಶನ ಮಾಡಿರುವ ಸಚ್ಚಿನ್ ಎರಡು ವರ್ಷದ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಇವರ ಹುಚ್ಚು ಆಸೆಗೆ ನೀರಿನಂತೆ ಖರ್ಚು ಮಾಡಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ಧೈರ್ಯವನ್ನು ಮೆಚ್ಚಲೇ ಬೇಕಾಗಿದೆ. 

 

Copyright@2018 Chitralahari | All Rights Reserved. Photo Journalist K.S. Mokshendra,