Shivarjuna.Film Review.

Thursday, March 12, 2020

1265

ಕ್ಲಾಸ್, ಮಾಸ್ ಸಮ್ಮಿಲನ ಶಿವಾರ್ಜುನ

ಮಾಸ್, ಕ್ಲಾಸ್‌ಗೂ ಸೈ ಅನಿಸುವಂತೆ‘ಶಿವಾರ್ಜುನ’ ಚಿತ್ರವಾಗಿದೆ.ಕತೆಯಲ್ಲಿರಾಯದುರ್ಗದ ಮುಖ್ಯಸ್ಥಪುತ್ರನನ್ನುಕಾಪಾಡುವ ಸಲುವಾಗಿ ರಾಮದುರ್ಗದಗೌಡರ ಮನೆಗೆ ಕಳುಹಿಸುತ್ತಾನೆ. ಆದರೆಅಲ್ಲಿಆತನು ಸತ್ತುಹೋದಾಗಈತನೇಕಾರಣನೆಂದು, ಅವನ ಮಗನನ್ನು ಸಾಯಿಸಲು ಹೋದಾಗಬಾಲಕ ಅಲ್ಲಿಂದ ತಪ್ಪಿಸಿಕೊಳ್ಳುತ್ತಾನೆ. ಆ ದಿನದಿಂದಸೇಡು ತೀರಿಸಿಕೊಳ್ಳಲು ಹೊಂಚು ಹಾಕುತ್ತಿರುತ್ತಾನೆ. ೨೦ ವರ್ಷ ನಂತರಅಧಿಕಾರಿಯಾಗಿಅದೇಊರಿಗೆ ಬಂದುಇಬ್ಬರನ್ನುಒಂದುಗೂಡಿಸುತ್ತಾನಾಎಂಬುದುಕುತೂಹಲಕಾರಿಯಾಗಿದೆ.

ಚಿರಂಜೀವಿಸರ್ಜಾನಾಯಕನಾಗಿ ಹೊಡೆದಾಟದಲ್ಲಿ ಸೂಪರ್. ಇಬ್ಬರು ನಾಯಕಿಯರ ಪೈಕಿ ನವತಾರೆ ಅಕ್ಷತಾಶ್ರೀನಿವಾಸ್  ಮೈಚಳಿ ಬಿಟ್ಟುಕಣ್ಣಿಗೆತಂಪು ನೀಡಿದ್ದಾರೆ. ವಿರಾಮದ ನಂತರಕಾಣುವಅಮೃತಅಯ್ಯಂಗಾರ್ ಬಜಾರಿ ಹುಡುಗಿಯಾಗಿಚೆಲ್ಲುಚೆಲ್ಲಾದ ನಟನೆಯಿಂದಇಷ್ಟವಾಗುತ್ತಾರೆ. ಕಾಮಿಡಿಕಿಲಾಡಿಗಳು ಖ್ಯಾತಿಯ ನಯನ-ಶಿವರಾಜ್.ಕೆ.ಆರ್.ಪೇಟೆ ಜೋಡಿಗಳು, ಸಾಧುಕೋಕಿಲ,ಕುರಿಪ್ರತಾಪ್, ತರಂಗವಿಶ್ವ ಹೆಚ್ಚು ನಗಿಸಿದ್ದಾರೆ. ಶಾಸಕನಾಗಿ ಸತೀಶ್‌ಮಂಗಳೂರು, ಡಿಸಿಯಾಗಿ ತಾರಾ, ಗೌಡರುಗಳಾಗಿ ಅವಿನಾಶ್, ರವಿಕಿಶನ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.ಅತಿಥಿಯಾಗಿ ಬರುವಕಿಶೋರ್ ಮುಗ್ದರಾಗಿ ಕೆಲವು ಹೊತ್ತು ಬಂದು ಹೋಗುತ್ತಾರೆ.ತಾರಾ ಪುತ್ರ ಮಾಸ್ಟರ್ ಕೃಷ್ಣ ಪರಿಚಯವಾಗಿದ್ದಾರೆ. ಸುರಾಗ್‌ಕೋಕಿಲ ಸಂಗೀತದಲ್ಲಿಎರಡು ಹಾಡುಗಳು ಕೇಳಬಲ್.ಎಂ.ಬಿ.ಮಂಜುಳಶಿವಾರ್ಜುನ್ ನಿರ್ಮಾಣ ಮಾಡಿದ್ದಾರೆ.

***

 

Copyright@2018 Chitralahari | All Rights Reserved. Photo Journalist K.S. Mokshendra,