Arjun Gowda.Film Reviews

Friday, December 31, 2021

384

ಮಾಸ್ ಪ್ರಿಯರಅರ್ಜುನ್ಗೌಡ

‘ಗೌಡಅಂದ್ರೆ ಲಿಟಿಗೇಶನ್, ಗೌಡ್ರೆಅಂದ್ರೆರಿಲೇಶನ್’ ಡೈಲಾಗ್ ಕೇಳಿದರೆ ‘ಅರ್ಜುನ್‌ಗೌಡ’ ಮಾಸ್‌ಚಿತ್ರವೆಂದುಗೊತ್ತಾಗುತ್ತದೆ.ಕೋಟಿರಾಮು ನಿರ್ಮಾಣದಚಿತ್ರವೆಂದರೆಅಲ್ಲಿಅದ್ದೂರಿತನಆಕ್ಷನ್‌ಇರುತ್ತದೆಂದು ಹೇಳುತ್ತಾರೆ.ಅದೇರೀತಿಇದರಲ್ಲೂ ಪ್ರೀತಿಯ ಬಲೆ ಜತೆಗೆ ಮಾಫಿಯಾಅಲೆಯನ್ನು ತೋರಿಸಿ ಪಕ್ಕಾ ಮನರಂಜನೆ ನೀಡಿದ್ದಾರೆ.ಫೈಟ್ ಎಷ್ಟು ಗ್ರಾಂಡ್ ಆಗಿ ಇರಬೇಕೆಂದು ನಿರ್ದೇಶಕ ಲಕ್ಕಿಶಂಕರ್‌ಚೆನ್ನಾಗಿಅರ್ಥ ಮಾಡಿಕೊಂಡುಕಥೆ ಸಿದ್ದಪಡಿಸಿರುವುದು ತೆರೆ ಮೇಲೆ ಗೊತ್ತಾಗುತ್ತದೆ.ಅರ್ಜುನ್‌ಗೌಡ (ಪ್ರಜ್ವಲ್‌ದೇವರಾಜು) ಸುದ್ದಿವಾಹಿನಿಯಒಡತಿಜಾನಕಿಗೌಡ (ಸ್ಪರ್ಶಾರೇಖಾ) ಅವರ ಏಕೈಕ ಪುತ್ರ.ಜನರೇಷನ್‌ಗ್ಯಾಪ್‌ನಿಂದ ಆಗಾಗೆ ಪ್ರೀತಿಯ ಜಗಳ ನಡೆಯುತ್ತಲೆಇರುತ್ತದೆ. 

ಉದ್ಯಮಿ ಮಗಳು ಜಾಹ್ನವಿ (ಪ್ರಿಯಾಂಕತಿಮ್ಮೇಶ್) ಮತ್ತುಅರ್ಜುನ್ ಮಧ್ಯೆ ಪ್ರೀತಿ ಬೆಸೆಯುತ್ತದೆ.ಇದಕ್ಕೆಆಕೆಯಅಪ್ಪನಿಂದ ವಿರೋದ. ಕೊನೆಗೆ ಅವಳ ಮದುವೆಎನ್‌ಆರ್‌ಐಯೊಂದಿಗೆಆಗುತ್ತದೆ. ಇದೇ ಬೇಸರದಲ್ಲೆ ಅವನು ಮಂಗಳೂರು ಸೇರಿಕೊಂಡು ಸ್ಥಳಿಯ ಗೂಂಡಾಗಳಿಗೆ ಸ್ನೇಹ ಳೆಸಿಕೊಳ್ಳುತ್ತಾನೆ. ಮುಂದೆಜಾನಕಿಉದ್ಯಮಿಯ ವಿವರವನ್ನುಜಾಲಾಡಿದಾಗ ಸಮಾಜಘಾತಕ ಖಳನಾಯಕನೊಂದಿಗೆ ಸಂಪರ್ಕವಿರುವುದುಗೊತ್ತಾಗುತ್ತದೆ. ವಿಷಯ ತಿಳಿಯುತ್ತಿದ್ದಂತೆ ಆಕೆಯನ್ನುಕೊಲ್ಲಲು ಕರಾವಳಿ ಡಾನ್‌ಗೆ ಸುಪಾರಿಕೊಡುತ್ತಾನೆ. ಆಕೆಯನ್ನುಯಾರುಕೊಲ್ಲುತ್ತಾರೆ.ಕೊಲೆ ಯತ್ನಕೇಸ್‌ದಲ್ಲಿಅರ್ಜುನ್‌ಗೌಡಯಾಕೆಜೈಲಿಗೆ ಹೋಗುತ್ತಾನೆ. ಜಾಹ್ನಿ ಏನಾದಳು.ಎಂಬತ್ಯಾದಿ ಪ್ರಶ್ನೆಗಳಿಗೆ ಉತ್ತರಚಿತ್ರ ನೋಡಿದರೆ ತಿಳಿಯಲಿದೆ.

ಪ್ರಜ್ವಲ್‌ದೇವರಾಜ್‌ಕೆರಿಯರ್‌ದಲ್ಲಿಇದೊಂದುದೂಡ್ಡ ಸಿನಿಮಾಆಗಿದೆ.ಲವರ್‌ಬಾಯ್, ಮಾಸ್ ಹೀರೋಎರಡರಲ್ಲೂ ಮಿಂಚಿದ್ದಾರೆ.ನಾಯಕಿ ಪ್ರಿಯಾಂಕತಿಮ್ಮೇಶ್‌ಇರುವಷ್ಟುಚೆಂದಕಾಣಿಸುತ್ತಾರೆ.ಸಾಧುಕೋಕಿಲ, ಕಾಮಿಡಿ ಕಿಲಾಡಿಗಳ ಕಲಾವಿದರ ಹಾಸ್ಯಚಿತ್ರದಲ್ಲಿ ಕೆಲಸ ಮಾಡಿದೆ.ಸ್ಪರ್ಶಾರೇಖಾ, ರಾಹುಲ್‌ದೇವ್, ಅರವಿಂದ್‌ರಾವ್, ದೀಪಕ್‌ರಾಜ್‌ಇವರೆಲ್ಲರೂತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.ಧರ್ಮವಿಶ್ ಸಂಗೀತ ಅಬ್ಬರವೆನಿಸಿದರೂ ಇಂಪಾದ ಹಾಡುಗಳಿಂದ ಮರೆತು ಹೋಗುತ್ತದೆ.ಜೈಆನಂದ್‌ಛಾಯಾಗ್ರಹಣ ಪರವಾಗಿಲ್ಲ. ಒಟ್ಟಾರೆಕೊಟ್ಟ ಕಾಸಿಗೆ ಚಿತ್ರವು ಮೋಸ ಮಾಡುವುದಿಲ್ಲ.

 

Copyright@2018 Chitralahari | All Rights Reserved. Photo Journalist K.S. Mokshendra,