Ombatthane Dikku.Film Reviews

Friday, January 28, 2022

372

ಥ್ರಿಲ್ಲರ್ ಹಾದಿಯಲ್ಲಿಒಂಬತ್ತನೇ ದಿಕ್ಕು

ಕಡಿಮೆ ಬಜೆಟ್‌ದಲ್ಲಿ ಒಳ್ಳೆ ಕಂಟೆಂಟ್‌ಕೊಡುವ ನಿರ್ದೇಶಕ ದಯಾಳ್ ಪದ್ಮನಾಬನ್ ಈ ಬಾರಿ ‘ಒಂಬತ್ತನೇ ದಿಕ್ಕು’ ಚಿತ್ರದಲ್ಲಿ ಬೇರೆಯದೆರೀತಿಯಕಥೆಯನ್ನು ಹೇಳಿರುವುದು ಕಾಣಿಸುತ್ತದೆ.ಕಥೆಯಕುರಿತು ಹೇಳುವುದಾದರೆ ಶಿವಮೊಗ್ಗದಲ್ಲಿ ಐದುಕೋಟಿಗೂ ಹೆಚ್ಚು ಬೆಲೆ ಬಾಳುವ ಪುರಾತನ ಕಾಲಭೈರವೇಶ್ವರ ಶಿಲೆಯ ಕಳ್ಳತನವಾಗುತ್ತದೆ.ಸದರಿ ಶಿಲೆಯನ್ನು ಮಾರಾಟ ಮಾಡುವುದಕ್ಕೆ ಬೆಂಗಳೂರಿಗೆ ಕಳುಹಿಸಲಾಗುತ್ತದೆ.ಇಲ್ಲಿಕದ್ದವರನ್ನೇ ಯಾಮಾರಿಸಿ, ಅಷ್ಟೂ ದುಡ್ಡನ್ನು ಕಬಳಿಸುವ ಹುನ್ನಾರ ನಡೆಯುತ್ತದೆ.ಇದರಿಂದ ಮತ್ತೊಂದುಕಥೆಯು ತೆರೆದುಕೊಳ್ಳುತ್ತದೆ.ಅದೇಚಿತ್ರದ ಶೀರ್ಷಿಕೆ.ಅಮಾಯಕರುಏನೆಲ್ಲಅನುಭವಿಸುತ್ತಾರೆಎನ್ನುವುದೇಒನ್ ಲೈನ್ ಸ್ಟೋರಿಯಾಗಿದೆ.ನಿರ್ದೇಶಕರುಎಲ್ಲ ದಿಕ್ಕುಗಳಲ್ಲಿಯೂ ಎಲ್ಲರದೃಷ್ಟಿಯಲ್ಲೂಒಂದೂಂದುರೀತಿಯಲ್ಲಿಕಾಣುವಂತೆ ಮಾಡಿರುವ ಪ್ರಯತ್ನಚೆನ್ನಾಗಿದೆ. 

ಸಾವು ಮತ್ತು ಬದುಕು, ಹಸಿವು ಮತ್ತು ಬೇಟೆಒಮ್ಮೆ ಮುಖಾ ಮುಖಿ  ಆದರೆಏನಾಗುತ್ತದೆಎನ್ನುವುದನ್ನುಅರ್ಥವಾಗುವ ಹಾಗೆ ಸರಳವಾಗಿ ನಿರೂಪಿಸಿದ್ದಾರೆ.

ಮಿಡ್ಲ್‌ಕ್ಲಾಸ್ ಹುಡುಗನಾಗಿಯೋಗಿಅಭಿನಯ ಪ್ಲಸ್ ಪಾಯಿಂಟ್.ಸಿಕ್ಕ ಅವಕಾಶದಲ್ಲೆ ಗಮನ ಸೆಳೆದಿರುವುದು ನಾಯಕಿಅದಿತಿಪಭುದೇವ. ಉಳಿದಂತೆ ಸಂಪತ್, ಹಿರಿಯ ನಟಅಶೋಕ್, ಸಾಯಿಕುಮಾರ್, ಸುಂದರ್, ಮುನಿ ಅವರ ಪಾತ್ರಗಳು ಸಿನಿಮಾಕ್ಕೆ ಪೂರಕವಾಗಿದೆ.ನಿಹಾಲ್‌ತೌರೋ ಹಾಡಿರುವ ಶೀರ್ಷಿಕೆ ಗೀತೆಅದಕ್ಕೆ ಸಂಗೀತ ಒದಗಿಸಿರುವ ಮಣಿಕಾಂತ್‌ಕದ್ರಿ ಕೆಲಸ ನೋಟಬಲ್. ಒಟ್ಟಾರೆ ಸೆಸ್ಪನ್ಸ್, ಕ್ರೈಂಇಷ್ಟುಪಡುವವರಿಗೆಇದು ಪಕ್ಕಾ ಪೈಸಾ ವಸೂಲ್‌ಎನ್ನಬಹುದು.ದಯಾಳ್ ಪದ್ಮನಾಬನ್ ನಿರ್ಮಾಣದಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

*** 

 

Copyright@2018 Chitralahari | All Rights Reserved. Photo Journalist K.S. Mokshendra,