Love Mocktail 2.Film Reviews

Friday, February 11, 2022

463

 

ಚಿತ್ರವಿಮರ್ಶೆ : ಲವ್ ಮಾಕ್ ಟೈಲ್ 2

 

ದಾಂಪತ್ಯ ಪ್ರೇಮದ ಸುತ್ತ ಥ್ರಿಲ್ಲಿಂಗ್ ಕಥೆ

 

ರೇಟಿಂಗ್ 4/5

 

ಲವ್ ಮಾಕ್ ಟೈಲ್ ಮುಂದುವರಿದ ಭಾಗವಾಗಿರುವ ಕಥೆಯಲ್ಲಿ ಪ್ರೇಮದ ಜೊತೆಗೆ ದಾಂಪತ್ಯ ಬಿಂಬಿತವಾಗಿರುವುದೇ ನೋಡಲು ಅದ್ಭುತವೆನಿಸುತ್ತದೆ..

 

ಆದಿ ಕೃಷ್ಣನ ಗುಣದವನೇ. ಸುತ್ತಲೂ ಆವರಿಸುವ ಹುಡುಗಿಯರಿಗೆ ಲೆಕ್ಕವೇ ಇಲ್ಲ; ಆದರೆ ಅವನ ಮನ ಯಾವಾಗೂ ಧ್ಯಾನಿಸುವುದು ಅಗಲಿದ ಪತ್ನಿಯನ್ನು..

 

ಅದು ಸಂಪೂರ್ಣ ಭ್ರಮೆಗೆ ಒಳಪಟ್ಟ ಸಂದರ್ಭದಲ್ಲಿ ಆತ ಪತ್ನಿಯ ಜೊತೆಗೆ ಇದ್ದಂತೆ ಭ್ರಮಿಸುತ್ತಾನೆ.. ಸ್ನೇಹಿತರು, ಗೆಳತಿಯರು, ಮದುವೆಯ ಹುಟುಕಾಟ ಹೀಗೆ ಮೊದಲರ್ಧ ನಕ್ಕು ನಗಿಸುತ್ತದೆ..

ಎರಡನೇ ಭಾಗದಲ್ಲಿ ನಾಯಕನ ಪ್ರೇಮದ ಧ್ಯಾನ ಎದ್ದು ಕಾಣುತ್ತದೆ. ಆತ ಪತ್ನಿಯನ್ನು ಎಷ್ಟು ಪ್ರೇಮಿಸುತ್ತಿದ್ದ ಎಂಬುದಕ್ಕೂ ಸಾಕ್ಷಿಯೂ ಕಾಣುತ್ತದೆ. ಸ್ನೇಹಿತ ವಿಜಯ್ ಹಾಗೂ ಆತನ ಪತ್ನಿ ನೊಂದ ಆದಿಗೆ ಹುಡುಗಿ ಹುಡುಕಲು ಪ್ರಯತ್ನ ಪಡುವಾಗ ಆತನ ಹಿಂದಿನ ರೋಚಕ ಪ್ರೇಮಗಳು ಎದುರಾಗಿ ಇರಿಸು ಮುರಿಸಾಗುವ ಘಟನೆಗಳು ಪ್ರೇಕ್ಷಕನಿಗೆ ಕಚಗುಳಿ ಇಡುತ್ತವೆ..

 

ಸತ್ತು ಹೋದ ಪತ್ನಿ ಜೊತೆ ಜೀವಿಸುವುದು ನಾಯಕನಿಗೆ ಭ್ರಮೆಯಾದರೆ ಪ್ರೇಕ್ಷಕನಿಗೆ ಮಜವಾಗಿ ಕಾಣುತ್ತದೆ. ಈ ಸನ್ನಿವೇಶಗಳಲ್ಲಿ ಕೃಷ್ಣ ಮತ್ತು ಮಿಲನಾ ಅದ್ಭುತವಾಗಿ ನಟಿಸಿದ್ದಾರೆ.

 

ಇನ್ನುಳಿದಂತೆ ವಿಜಯ್, ಸುಶ್ಮಿತಾ, ಅಮೃತಾ, ರವಿ ಸೀತಾರಾಮ್, ರಚಲ್ ಡೇವಿಡ್, ರಚನಾ, ಗಿರೀಶ್ ಶಿವಣ್ಣ ಎಲ್ಲರೂ ಪಾತ್ರಕ್ಕೆ ಜೀವ ತುಂಬಿದ್ದಾರೆ. ಶ್ರೀಕ್ರೇಜಿಮೈಂಡ್ ಛಾಯಾಗ್ರಹಣ ಚಿತ್ರದ ಹೈಲೈಟ್. ನಕುಲ್ ಅಭಯಂಕರ್ ಸಂಗೀತ ಇಷ್ಟವಾಗುತ್ತದೆ.

 

ಮೊದಲ ಭಾಗದಲ್ಲಿ ನಗು ಮತ್ತು ಎರಡನೇ ಭಾಗದಲ್ಲಿ ಭಾವನಾತ್ಮಕ ಸನ್ನಿವೇಶಗಳನ್ನು ಒಳಗೊಂಡಿರುವ ಚಿತ್ರ ಪ್ರೇಕ್ಷಕನಿಗೆ ಕಚಗುಳಿಯ ಜೊತೆಗೆ ಕಣ್ಣೀರನ್ನು ತರಿಸುತ್ತದೆ. ಅಷ್ಟರ ಮಟ್ಟಿಗೆ ನಿರ್ದೇಶಕ ಕೃಷ್ಣ ಯಶಸ್ವಿಯಾಗಿದ್ದಾರೆ.

Copyright@2018 Chitralahari | All Rights Reserved. Photo Journalist K.S. Mokshendra,