KGF Chapter 2.Film Reviews

Thursday, April 14, 2022

354

ಕೆಜಿಎಫ್ ವರ್ಣಿಸಲು ಪದಗಳು ಸಾಲದು

‘ಕೆಜಿಎಫ್-೨’ ಸಿನಿಮಾದಲ್ಲಿ ಭಾಗ-೧ ಮುಂದುವರೆದ ಭಾಗವೆಂದು ಪ್ರತಿಯೊಂದು ದೃಶ್ಯಗಳು ಸಮರ್ಥವಾಗಿ ಹೇಳಲಾಗಿದೆ.ನರಾಜಿ ಸಾಮ್ರಾಜ್ಯದಕಥಾನಕವನ್ನು ಎಳೆ ಎಳೆಯಾಗಿ ಅದ್ಬುತವಾಗಿಹೇಳಲಾಗಿದೆ.ಕೆಜೆಎಫ್ ಮೊದಲ ಭಾಗದಲ್ಲಿಜೀತದ ಆಳುಗಳು ಪ್ರಾಣ ಬಿಟ್ಟರೆ, ಎರಡನೇ ಭಾಗದಲ್ಲಿ ಗುಂಪುಗಳ ಘರ್ಷಣೆಯಲ್ಲಿ ಹಲವರು ಬಲಿಯಾಗುತ್ತ್ತಾರೆ. ಬಂದೂಕು, ಗುಂಡಗಳ ನಡುವೆಅಮ್ಮ, ಪ್ರೀತಿ ಸನ್ನಿವೇಶಗಳು ಮುದಕೊಡುತ್ತದೆ. ಚಾಪ್ಟರ್ ೧ರಲ್ಲಿ ಕಾಣಿಸಿಕೊಂಡಿದ್ದ ಪಾತ್ರಗಳ ಜೊತೆಸರಣಿಚಿತ್ರದಲ್ಲಿ ಮತ್ತಷ್ಟು ಪಾತ್ರಗಳು ಬರುತ್ತವೆ. ರಾಕಿ ಬಾಯ್‌ಗೆಇರುವಷ್ಟೇ ಪ್ರಾಮುಖ್ಯತೆಅಧೀರನಿಗೆ (ಸಂಜಯ್‌ದತ್) ಇರಲಿದ್ದು, ಜತೆಗೆರಮೀಕಾಸೇನ್(ರವೀನಾಟಂಡನ್), ಗುರುಪಾಂಡಿಯನ್ (ಅಚ್ಯುತಕುಮಾರ್) ಇವರಿಗೂ ಅವಕಾಶ ಕಲ್ಪಿಸಲಾಗಿದೆ. 

ಪ್ರಾರಂಭದಿಂದಕೊನೆವರೆಗೂಒಂದುಕ್ಷಣವೂ ಬೇಸರತರಿಸದಂತೆಚಿತ್ರಕಥೆ ಮಾಡಿಕೊಂಡು, ಬಿಡುಗಡೆ ಮುಂಚೆ ನೋಡುಗರಲ್ಲಿತುಂಬಿದ ಭರವಸೆಯನ್ನು ಹುಸಿಗೊಳಿಸಿಲ್ಲ.

ನಿರ್ದೇಶಕ ಪ್ರಶಾಂತ್‌ನೀಲ್ ಚಾಪ್ಟರ್-೨ ಶುರುವಾದಾಗಿನಿಂದ ಮಾಹಿತಿ ನೀಡಿದಂತೆ ದೃಶ್ಯಗಳನ್ನು ಚೆನ್ನಾಗಿಕಟ್ಟಿಕೊಟ್ಟಿರುವುದರಿಂದ ನೋಡಲುಎರಡುಕಣ್ಣು ಸಾಲದು.ಛಾಯಾಗ್ರಹಕ ಭುವನ್‌ಗೌಡ, ಸಂಗೀತರವಿಬಸ್ರೂರು, ಕಲಾ ನಿರ್ದೇಶನ ಶಿವಕುಮಾರ್ ಕೆಲಸಕ್ಕೆ ಸಲಾಂ ಹೇಳಲೇಬೇಕು. ಇವರೆಲ್ಲರೂತೆರೆಹಿಂದಿನ ಹೀರೋಗಳು ಎಂದರೆತಪ್ಪಾಗಲಾರದು.ರಾಕಿಬಾಯ್‌ರನ್ನು ನೋಡುವಾಗ ೭೦ರ ದಶಕದಆಂಗ್ರಿಯಂಗ್‌ಮ್ಯಾನ್‌ಅಮಿತಾಬ್‌ಬಚ್ಚನ್ ನೆನಪಿಸುತ್ತದೆ. ಸಿಬಿಐ ಅಧಿಕಾರಿಯಾಗಿಟಾಲಿವುಡ್‌ನರಮೇಶ್ ಪಾತ್ರವು ಗಮನ ಸೆಳೆಯುತ್ತದೆ.

ತಮ್ಮದೆ ಸ್ಟೈಲ್, ಮೇಕಿಂಗ್ ಹಾಗೂ ಆಕರ್ಷಕ ಲುಕ್‌ನೊಂದಿಗೆಯಶ್ ಹದವರಿತ ನಟನೆ.ಇದರ ಮೂಲಕ ಅವರಿಗೆಜೀವಮಾನದ ಪಾತ್ರವೂ ಸಿಕ್ಕಿದೆ.ನಾಯಕಿ ಶ್ರೀನಿಧಿಶೆಟ್ಟಿಗೆಇದರಲ್ಲಿ ಹೆಚ್ಚು ಸ್ಕ್ರೀನ್ ಸ್ಪೇಸ್ ಸಿಕ್ಕಿದೆ.ಇದಕ್ಕೆತಕ್ಕಂತೆ ಹಾಡುಗಳು ಮನಸೆಳೆಯುತ್ತದೆ.ಕಡ್ಡಿ ಮುರಿದಂತೆ ಸಂಭಾಷಣೆಗಳು, ಅದನ್ನು ಹಿನ್ನಲೆಸಂಗೀತದ ಮೂಲಕ ಪರಿಣಾಮಕಾರಿಯಾಗಿತೋರಿಸಲಾಗಿದೆ. ಹೋರಾಟದ ದೃಶ್ಯಗಳಿಗೆ ಹೆಚ್ಚು ಆದ್ಯತೆಕೊಡಲಾಗಿದೆ. ಕೊನೆಯಲ್ಲಿ ಪಾರ್ಟ್-೩ ಬರಬಹುದೆಂಬ ಸಣ್ಣದಾದ ಸುಳಿವನ್ನು ನೀಡಿದ್ದಾರೆ.ಪ್ರಶಾಂತ್‌ನೀಲ್‌ನಂಬಿಕೆ ಮೇಲೆ ಹಣ ಹೂಡಿರುವ ವಿಜಯ್‌ಕಿರಗಂದೂರುಬಂಡವಾಳವು ಒಂದು ವಾರದೊಳಗೆ ವಾಪಸ್ಸು ಬರುವುದುಖಚಿತ.

****/

 

Copyright@2018 Chitralahari | All Rights Reserved. Photo Journalist K.S. Mokshendra,