Kanneri.Film Reviews

Friday, March 04, 2022

780

ಸತ್ಯ ಘಟನೆಗಳನ್ನು ಸಾರುವಕನ್ನೇರಿ

ಕಾನನದಲ್ಲಿಚಿಣ್ಣರುಅನುಭವಿಸುವ ನೋವುಗಳನ್ನು ‘ಕನ್ನೇರಿ’ ಚಿತ್ರದಲ್ಲಿತೋರಿಸುವ ಪ್ರಯತ್ನ ಮಾಡಲಾಗಿದೆ.ಕಾಡಿನ ನಡುವೆ ಮೂಕರೋದನೆಯಿಂದ ಬಳಲುತ್ತಿರುವ ಆದಿವಾಸಿಗಳ ನೋವಿಗೆ ಚಿತ್ರವುಧ್ವನಿಯಾಗಿದೆ.ಸನಾತನ ಕಾಲದಿಂದಲೂ ಬದುಕನ್ನುಕಟ್ಟಿಕೊಂಡಿರುವ ಬುಡಕಟ್ಟುಜನರ ಸಾಮಾಜಿಕ ಸ್ಥಿತಿಗತಿಗಳನ್ನು ಕಟ್ಟಿಕೊಡಲಾಗಿದೆ.ಅರವಿಂದ್‌ಎನ್ನುವತಂತ್ರಜ್ಘನೊಬ್ಬ ಸಾಕ್ಷಚಿತ್ರ ನಿರ್ಮಿಸುವಸಲುವಾಗಿಅವರಜಾಗಕ್ಕೆ ಬಂದು, ಅಲ್ಲಿನ ಪರಿಸ್ಥಿತಿ, ಮಕ್ಕಳು ಶಿಕ್ಷಣದಿಂದ ವಂಚಿತರಾಗಿರುವುದನ್ನುಕಂಡು ಬೇಸರಗೊಳ್ಳುತ್ತಾನೆ. ಇದೇ ಸ್ಥಿತಿಯಲ್ಲಿ ಆಯಾಜನಾಂಗದ ಮುತ್ತಮ್ಮ ಎಂಬ ಹುಡುಗಿಯೊಬ್ಬಳು ವಿದ್ಯಾಭ್ಯಾಸಕಲಿತುತನ್ನ ಸಮುದಾಯವನ್ನುಕಷ್ಟದಿಂದ ಹೊರಗೆತರಬೇಕೆಂದು ನಿಲುವು ತೆಗೆದುಕೊಳ್ಳುತ್ತಾಳೆ. 

ಹೀಗಿರುವಾಗಲೆತಾತಆರೋಗ್ಯ ಹದಗೆಟ್ಟಿದ್ದರಿಂದ, ಅವರನ್ನು ಬದುಕಿಸುವ ಸಲುವಾಗಿ, ಹಣ ಹೊಂದಿಸಲು ಶ್ರೀಮಂತರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ.ಆದರೆ ಅನಿವಾರ್ಯಕಾರಣದಿಂದಜೈಲು ಸೇರಿರುತ್ತಾಳೆ.ಇವಳ ಪರವಾಗಿ ಹೋರಾಟ ಮಾಡಿದಅರವಿಂದ್‌ಏನಾಗುತ್ತಾನೆ. ಮುತ್ತಮ್ಮಆರೋಪದಿಂದ ಮುಕ್ತಳಾಗುತ್ತಾಳಾ?ಎಂಬುದಕ್ಕೆಉತ್ತರವು ಸಿನಿಮಾ ನೋಡಿದರೆ ತಿಳಿಯುತ್ತದೆ.

ನಿರ್ದೇಶಕ ನೀನಾಸಂಮಂಜುಕಥೆಗೆತಕ್ಕಂತೆ ದೃಶ್ಯಗಳನ್ನು ತೆರೆ ಮೇಲೆ ತೋರಿಸುವಲ್ಲಿಅವರ ಶ್ರಮಎದ್ದುಕಾಣಿಸುತ್ತದೆ.ಮುತ್ತಮ್ಮನಾಗಿಅರ್ಚನಾಮಧುಸೂಧನ್‌ತನಗೆ ನೀಡಿದ ಪಾತ್ರವನ್ನುಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.ತಾತನಾಗಿ ಎಂ.ಕೆ.ಮಠ, ಖಳನಾಯಕಿಯಾಗಿ ಅನಿತಾಭಟ್, ವಕೀಲನಾಗಿ ಅರುಣ್‌ಸಾಗರ್, ಪೋಲೀಸ್‌ಅಧಿಕಾರಿಯಾಗಿ ಸರ್ದಾರ್‌ಸತ್ಯ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಕೋಟಗಾನಹಳ್ಳಿ ರಾಮಯ್ಯನರಚನೆಗೆ ಪೂರಕವಾಗಿ ಮಣಿಕಾಂತ್‌ಕದ್ರಿ ಸಂಗೀತ ಪ್ಲಸ್ ಪಾಯಿಂಟ್‌ಆಗಿದೆ.ಕಾಡಿನ ಸುಂದರ ತಾಣಗಳನ್ನು ಗಣೇಶ್‌ಅಚ್ಚುಕಟ್ಟಾಗಿ ಸೆರೆಹಿಡಿದಿದ್ದಾರೆ.ಅತಿ ಹಿಂದುಳಿದ ವರ್ಗದಜನರ ಬದುಕು ಬವಣೆಗಳನ್ನು ನೋಡಲು ಬಯಸುವವರಿಗೆ ಸಿನಿಮಾವುಆಪ್ತವಾಗುತ್ತದೆ. ಬುಡ್ಡಿ ದೀಪ ಸಿನಿಮಾ ಹೌಸ್ ನಿರ್ಮಾಣದಜವಬ್ದಾರಿಯನ್ನು ಹೊತ್ತುಕೊಂಡಿದೆ.

****

 

Copyright@2018 Chitralahari | All Rights Reserved. Photo Journalist K.S. Mokshendra,