Girki.Film Reviews

Friday, July 08, 2022

458

 

ಕಥೆಗೆ ಹೊಸ ನಿರೂಪಣೆ

 

 

       ಎಲ್ಲಾ ಚಿತ್ರಗಳಲ್ಲಿ ಇರುವಂತೆ ಪೋಲೀಸು, ಮೋಸ, ಕ್ರೈಮು, ರೇಪು ಇದರ ನಡುವೆ ಪ್ರೀತಿ ಇವಿಷ್ಟು ‘ಗಿರ್ಕಿ’ ಸಿನಿಮಾದಲ್ಲಿ ಇದ್ದರೂ ನಿರೂಪಣೆ ಹೊಸದಂತೆ ಕಾಣಿಸುತ್ತದೆ. ಅವನು ಬಾರ್‌ನಲ್ಲಿ ಕೆಲಸ ಮಾಡುವವನು, ಅವಳು ಬಟ್ಟೆ ಅಂಗಡಿಯಲ್ಲಿ ಉದ್ಯೋಗ. ಇವರಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ. ಇವರಿಗೆ ಅಡ್ಡ ಆಗುವುದು ನಿಗೂಢವಾಗಿ ಸಾಯುತ್ತಿರುವ ಹಾಗೂ ನಾಪತ್ತೆಯಾಗುತ್ತಿರುವ ಅನಾಥ ಯುವತಿಯರು. ಇದಕ್ಕೂ ಆಕೆ ಕೆಲಸ ಮಾಡುವ ನಾಯಕಿಗೂ ಏನು ಸಂಬಂದ ಎನ್ನುವುದೇ ಒಂದೇ ಏಳೆಯ ಸಾರಾಂಶವಾಗಿದೆ. ಸಾಧಾರಣ ಕಥೆ ಇದ್ದರೂ ಅದನ್ನು ಹೇಳುವ ಧಾಟಿ ಚೆನ್ನಾಗಿದೆ. ಎಲ್ಲಿಯೂ ಬೋರ್ ಅನಿಸುವುದಿಲ್ಲ. ಅದಕ್ಕೆ ನಿರ್ದೇಶಕ ವೀರೇಶ್.ಪಿ.ಎಂ. ಶ್ರಮ ತೆರೆ ಮೇಲೆ ಎದ್ದು ಕಾಣಿಸುತ್ತದೆ. ಇದಕ್ಕೆ ತಕ್ಕಂತೆ ಸನ್ನಿವೇಶಗಳು ಹೂ ಪೋಣಿಸಿದಂತೆ ನವಿರಾಗಿ ಮೂಡಿಬಂದಿರುವುದು ಪ್ಲಸ್ ಪಾಯಿಂಟ್ ಆಗಿದೆ.

       ನಟನೆ ನಿರ್ಮಾಣ ಮಾಡಿರುವ ತರಂಗವಿಶ್ವ ಪೇದೆಯಾಗಿ ಗಮನ ಸೆಳೆಯುತ್ತಾರೆ. ನವ ನಾಯಕ ವಿಲೋಕ್‌ರಾಜ್ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ದಿವ್ಯಾಉರುಡುಗ ಚೆಂದ ಕಾಣಿಸುತ್ತಾರೆ. ಕ್ರಿಮಿನಲ್ ಪಾತ್ರಗಳಲ್ಲಿ ಅಭಿನಯಿಸಿರುವ ನಾಲ್ಕು ಹುಡುಗರಿಗೆ ಭವಿಷ್ಯದಲ್ಲಿ ಅವಕಾಶಗಳು ಸಿಗಬಹುದು. ವೀರಸಮರ್ಥ ಸಂಗೀತದಲ್ಲಿ ಹಾಡುಗಳು ಮೂಡಿಬಂದಿದೆ.  ಕ್ರೈಂ ಅಂಶಗಳು ಇರುವ ಕಾರಣ ಹಿನ್ನಲೆ ಸಂಗೀತಕ್ಕೆ ಹೆಚ್ಚು ಸ್ಕೋಪ್ ಇದೆ. ಮೂರು ಸಾಹಸಕ್ಕೆ ವಿನೋದ್-ಮಾಸ್‌ಮಾದ,  ಛಾಯಾಗ್ರಹಣ ನವೀನ್, ಸಂಕಲನ ಮಧು ತುಂಬಿಕೆರೆ ಇವೆಲ್ಲವೂ ಚಿತ್ರಕ್ಕೆ ಪೂರಕವಾಗಿದೆ.

***

 

Copyright@2018 Chitralahari | All Rights Reserved. Photo Journalist K.S. Mokshendra,