Vikrant Rona.Film Reviews

Thursday, July 28, 2022

265

ಕತ್ತಲ ಕಾಡಿನಲ್ಲಿರೋಣನ ಹುಡುಕಾಟಗಳು

ಥ್ರಿಲ್ಲರ್ ಮತ್ತು ಸಸ್ಪೆನ್ಸ್ ಹಾದಿಯಲ್ಲಿ ಹೊಸದೊಂದು ಲೋಕವನ್ನು ಸೃಷ್ಟಿಸಿ, ಆ ಲೋಕದೊಳಗೆ ನೋಡುಗ ಏನೋ ಕಳೆದುಕೊಂಡಂತೆ ಭಾಸವಾಗುವ ಪ್ರಯತ್ನದಲ್ಲಿ ‘ವಿಕ್ರಾಂತ್‌ರೋಣ’ ಚಿತ್ರವು ಯಶಸ್ವಿಯಾಗಿದೆ. ಕಣ್ಣಿಗೆತಂಪುಕೊಡುವ ಸೆಟ್ ವೈಭವಗಳು, ದೃಶ್ಯದಿಂದದೃಶ್ಯಕ್ಕೆಕುತೂಹಲವನ್ನು ಹೆಚ್ಚಿಸಿ ಸೀಟಿನ ತುದಿಯಲ್ಲಿಕೂರುವಂತೆ ಮಾಡಿದೆ.ಕುತೂಹಲಕಾರಿಯಾದ ಭಿನ್ನವಾದ ಭೂತಾರಾಧನೆಯ ಫ್ಲ್ಯಾಷ್ ಬ್ಯಾಕ್‌ಗೆ ಫ್ಯಾಂಟಸಿಯನ್ನು ಜತೆಗೊಡಿಸಿರುವುದು ನಿರ್ದೇಶಕಅನೂಪ್ ಭಂಡಾರಿ ಬುದ್ದವಂತಿಕೆಗೆ ಸಾಕ್ಷಿಯಾಗಿದೆ.ಕಮರೊಟ್ಟುಎನ್ನುವಊರಿನಲ್ಲೊಂದು ಹಳೆಯ ಬಂಗಲೆ. ನಿಗೂಢವಾಗಿ ಸಾವು ಕಾಣುತ್ತ್ತಿರುವ ಮಕ್ಕಳು.ಆ ಕೊಲೆಗಳ ಹಿಂದೆಯಾರಿದ್ದಾರೆಎನ್ನವು ಪೋಲೀಸ್‌ತನಿಖೆಯಾದರೆ, ತಮ್ಮೂರಿನಲ್ಲಿ ಈ ಹಿಂದೆ ಸಂಭವಿಸಿದ ತಪ್ಪಿನಿಂದದೇವರುಕೊಟ್ಟ ಶಿಕ್ಷೆ ಎನ್ನುವಂತೆ ವ್ಯಥೆ ಪಡುವಅಲ್ಲಿನಜನತೆ.

ಈ ಕಾರಣವೇ ವಿಚಿತ್ರ, ವಿಕ್ಷಿಪ್ತ. ಹೀಗೆ ಸಾಗುತ್ತಿರುವಾಗ ಮತ್ತೊಂದುಉಪಕಥೆ ಬಿಚ್ಚಿಕೊಳ್ಳುತ್ತದೆ.ಆ ಮುಖ್ಯಕಥೆಗೆತಿರುವುಆಗುವಂತೆ ನೋಡಿಕೊಂಡಿರುವುದು.ಹಾಗೆಯೇಅದನ್ನುಪರಿಣಾಮಕಾರಿಯಾಗಿ ತೋರಿಸಿರುವುದು ನಿರ್ದೇಶಕನಜಾಣತನಎನ್ನಬಹುದು.ಕಲಾ ನಿರ್ದೇಶಕ ಶಿವಕುಮಾರ್, ಛಾಯಾಗ್ರಾಹಕ ವಿಲಿಯಂಡೇವಡ್, ಸಂಗೀತ ಸಂಯೋಜಕಅಜನೀಶ್‌ಲೋಕನಾಥ್‌ಇವರೆಲ್ಲರೂತೆರೆ ಹಿಂದಿನ ನಾಯಕರುಗಳು ಎನ್ನಬಹುದು.ಅದರಲ್ಲೂ‘ಗುಮ್ಮ ಬಂದಗುಮ್ಮ’ ಹಿನ್ನಲೆಧ್ವನಿ, ‘ರಕ್ಕಮ್ಮ’ ಹಾಡು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವಂತೆ ಮಾಡಿದೆ.

ಇನ್ನುಇನ್ಸ್‌ಪೆಕ್ಟರ್ ವಿಕ್ರಾಂತ್‌ರೋಣನಾಗಿ ಸುದೀಪ್ ಸ್ಟೈಲಿಶ್ ಆಗಿ ನಟಿಸುತ್ತಾಇಡೀಚಿತ್ರವನ್ನು ಹೆಗಲಮೇಲೆ ಹೊತ್ತುಕೊಂಡಿದ್ದಾರೆ.ಪತ್ನಿಯಾಗಿ ಮಿಲನಾನಾಗರಾಜ್‌ಎಂಟ್ರಿಕೊಟ್ಟುಅಚ್ಚರಿ ಮೂಡಿಸುತ್ತಾರೆ. ‘ರಾರಾರಕ್ಕಮ್ಮ’ ಹಾಡಿನಲ್ಲಿಜಾಕ್ವೆಲಿನ್‌ಫರ್ನಾಂಡೀಸ್ ಮಾದಕ ನೃತ್ಯದಿಂದ ಗಮನ ಸೆಳೆಯುತ್ತಾರೆ. ನಿರೂಪ್‌ಭಂಡಾರಿಎಂಟ್ರಿಆಶ್ಚರ್ಯತರಿಸುತ್ತದೆ.ವಾಸುಕಿವೈಭವ್‌ಚಿಕ್ಕ ಪಾತ್ರದಲ್ಲಿ ಬಂದು ಹೋಗುತ್ತಾರೆ.ನೀತಾಅಶೋಕ್‌ಗೆಚಿತ್ರರಂಗದಲ್ಲಿ ಭವಿಷ್ಯವಿದೆ. ಹಾಸ್ಯ ನಟರವಿಶಂಕರ್‌ಗೌಡ ಮೊದಲಬಾರಿಗಂಭೀರ ಪಾತ್ರದಲ್ಲಿ ನಟನೆ ಮಾಡಿದ್ದರೆ. ಇಡೀಚಿತ್ರವುಒಂದುತೂಕವಾದರೆ, ಕ್ಲೈಮಾಕ್ಸ್‌ನದ್ದು ಬೇರೆಯದೆತೂಕವಿದ್ದು, ಎಲ್ಲರಿಗೂಇಷ್ಟವಾಗುತ್ತದೆ.ಒಟ್ಟಿನಲ್ಲಿ ‘ವಿಆರ್’ ಮತ್ತೋಂದುಮಾಯಾಪ್ರಪಂಚಕ್ಕೆಕರೆದುಕೊಂಡು ಹೋಗುತ್ತದೆ.

 

Copyright@2018 Chitralahari | All Rights Reserved. Photo Journalist K.S. Mokshendra,