Champion.Film Reviews

Friday, October 14, 2022

208

ದೋಸ್ತಿ ಹಾಡಿಗೆ ಪ್ರಶಂಸೆಯ ಸುರಿಮಳೆ ****

        ಶಾಹುರಾಜ್‌ಶಿಂಧೆ ನಿರ್ದೇಶನದ ‘ಚಾಂಪಿಯನ್’  ಚಿತ್ರದ ‘ನೂರು ಕೋಟಿ ಆಸ್ತಿ ದೋಸ್ತವ್ನೆ’ ಹಾಡು ಬಿಡುಗಡೆಗೊಂಡು ಹಿಟ್‌ಲಿಸ್ಟ್‌ನತ್ತ ಸಾಗುತ್ತಿದೆ.  ನಾಗಾರ್ಜುನ್‌ಶರ್ಮಾ ಸಾಹಿತ್ಯ, ನಕಾಶ್‌ಅಜೀಜ್ ಗಾಯನದಲ್ಲಿ ಅಜನೀಶ್‌ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಮಲೆನಾಡಿನ ಹುಡುಗನೊಬ್ಬ ಕ್ರೀಡಾ ಕ್ಷೇತ್ರದಲ್ಲಿ ಕಷ್ಟಪಟ್ಟು ಸಾಧನೆ ಮಾಡುವ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡು ಚಾಂಪಿಯನ್ ಆಗುವ ಕಥೆಯನ್ನು ಹೊಂದಿದೆ. ಬ್ಯಾಂಕ್ ಉದ್ಯೋಗಿಯಾಗಿದ್ದ ಬೆಳಗಾಂ ಮೂಲದ ಸಚಿನ್‌ಧನಪಾಲ್ ಬಣ್ಣದಲೋಕದ ಆಸೆಯಿಂದ ಕೆಲಸಕ್ಕೆ ಬೆನ್ನು ತೋರಿಸಿ, ಈ ಚಿತ್ರದ ಮೂಲಕ ನಾಯಕನಾಗಿ ನಟಿಸಿದ್ದಾರೆ. 

ನಾಯಕಿಯಾಗಿ ಅದಿತಿಪ್ರಭುದೇವ. ನಾಯಕನ ಸಾಧನೆಗೆ ಗುರಿ ತೋರಿಸುವ ಗುರುಗಳಾಗಿ ದೇವರಾಜ್, ಖಳನಟರಾಗಿ ಪ್ರದೀಪ್‌ರಾವುತ್, ಪೆಟ್ರೋಲ್‌ಪ್ರಸನ್ನ, ಆದಿಲೋಕೇಶ್,ಸುಧಿಕಾಕ್ರೋಚ್ ಇವರೊಂದಿಗೆ ರಂಗಾಯಣರಘು, ಸುಮನ್, ಮಂಡ್ಯಾರಮೇಶ್, ಪ್ರಶಾಂತ್‌ಸಿದ್ದಿ ಮತ್ತು ಉತ್ತರ ಕರ್ನಾಟಕದ ಐಟಂ ಹಾಡಿಗೆ  ಸನ್ನಿಲಿಯೋನ್ ಹೆಜ್ಜೆ ಹಾಕಿದ್ದಾರೆ.

        ಗೆಳಯನನ್ನು ಹೀರೋ ಮಾಡುವ ಸಲುವಾಗಿ ಶಿವಾನಂದ.ಎಸ್.ನೀಲಣ್ಣವರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶಿವಮೊಗ್ಗ, ತೀರ್ಥಹಳ್ಳಿ ಹಾಗೂ ಒಂದು ಹಾಡನ್ನು ದುಬೈನಲ್ಲಿ ಚಿತ್ರೀಕರಿಸಲಾಗಿದೆ. ಛಾಯಾಗ್ರಹಣ ಶರವಣನ್‌ನಟರಾಜನ್, ಸಂಕಲನ ವೆಂಕಿ.ಯುಡಿವಿ, ಸಾಹಸ ವಿನೋಧ್, ನೃತ್ಯ ವಿ.ಮುರಳಿ-ಇಮ್ರಾನ್‌ಸರ್ದಾರಿಯಾ-ಧನಂಜಯ್ ಚಿತ್ರಕ್ಕಿದೆ. ರೊಮ್ಯಾನ್ಸ್, ಫ್ಯಾಮಿಲಿ ಸೆಂಟಿಮೆಂಟ್ ಹಾಗೂ ಹೆಚ್ಚಾಗಿ ಹಾಸ್ಯ ದೃಶ್ಯಗಳು ಇರಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,