2nd Life.Film Reviews

Friday, December 02, 2022

125

ಸೆಕೆಂಡ್ ಲೈಫ್ ಥ್ರಿಲ್ಲರ್ ಕಥನ

       ಸೆಸ್ಪೆನ್ಸ್ ಥ್ರಿಲ್ಲರ್ ಜತೆಗೆ ಮಾಫಿಯಾ ಮೂರು ಸೇರಿಕೊಂಡರೆ ‘ಸೆಕೆಂಡ್ ಲೈಫ್’ ಸಿನಿಮಾ ತೆರೆದುಕೊಳ್ಳುತ್ತದೆ. ಮಗು ಜನಿಸಿದ ಕೆಲವೇ ದಿನಗಳಲ್ಲಿ ಹೊಕ್ಕಳು ಬಳ್ಳಿ ಬೀಳುತ್ತದೆ. ಅದನ್ನು ಕ್ಯಾನ್ಸರ್ ರೋಗಿಗಳ ಔಷದಿಗೆ ಬಳಸಲಾಗುತ್ತದೆ. ಕರ್ನಾಟಕ ಒಂದರಲ್ಲೆ ಸುಮಾರು ೭೫ ಸಾವಿರ ಜನರು ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಅಂತಹವರಿಗೆ ಇದು ಉಪಯೋಗವಾಗುತ್ತದೆ. ಕರುಳ ಬಳ್ಳಿಯನ್ನು ಶೇಖರಿಸಿಡುವ ಕಾರ್ಯ ಎಲ್ಲಡೆ ನಡೆಯುತ್ತಿದೆ. ಇಂತಹುದೆ ಅಂಶಗಳನ್ನು ಇಟ್ಟುಕೊಂಡು ಚಿತ್ರವು ಸಿದ್ದಗೊಂಡಿದೆ. ಚಿತ್ರದಲ್ಲಿ ಆಕೆ ಅನಾಥಳು.  ಅವಳ ಸೌಂದರ್ಯಕ್ಕೆ ಸೋತು, ಅಂದಳಾಗಿದ್ದರೂ ಕೈಹಿಡಿದು ಬಾಳು ಕೊಡುತ್ತಾನೆ. ಅವರಿಗೆ ಹೆಣ್ಣು ಮಗು ಜನಿಸುತ್ತದೆ. ಮಗಳನ್ನು ಕಣ್ಣಾರೆ ನೋಡಬೇಕು, ಪ್ರಪಂಚದ ಸೌಂದರ್ಯ ಸವಿಯಬೇಕು ಎಂಬ ಆಸೆ ಹುಟ್ಟಿಕೊಳ್ಳುತ್ತದೆ. 

ಪತಿ ಎಷ್ಟು ಸಲ ಪ್ರಯತ್ನಿಸಿದರೂ ಆಪರೇಶನ್‌ಗೆ ಒಪ್ಪದೆ, ಮುಂದೆ ತಾನಾಗೆ ಶಸ್ತ್ರಚಿಕಿತ್ಸೆಗೆ ಮುಂದಾಗುತ್ತಾಳೆ. ಅದು ಯಶಸ್ವಿಯದರೂ ಸ್ಪಷ್ಟವಾಗಿ ಕಣ್ಣು ಕಾಣಿಸುವುದು ಸ್ವಲ್ಪ ಸಮಯ ಬೇಕೆಂದು ಡಾಕ್ಟರ್ ಹೇಳುತ್ತಾರೆ. ಮುಂದೆ ಆಗಂತುಕನೊಬ್ಬ ಎಂಟ್ರಿ ಕೊಡುತ್ತಾನೆ. ಅವನನ್ನು ದಾಳವಾಗಿ ಬಳಸಿಕೊಳ್ಳಲು ಮುಂದಾಗುತ್ತಾನೆ. ಒಪ್ಪದಿದ್ದಾಗ ಮಗಳನ್ನು ಕೊಲ್ಲುವುದಾಗಿ ಬ್ಲಾಕ್ ಮೇಲ್ ಮಾಡುತ್ತಾನೆ. ಅನಿವಾರ್ಯವಾಗಿ ಆತ ಹೇಳುವ ಕೆಲಸಕ್ಕೆ ಮುಂದಾಗುತ್ತಾನೆ. ಅವನು ಹೇಳಿದ್ದು ಏನು? ಇವೆಲ್ಲಾ ವಿವರಕ್ಕೆ ಸಿನಿಮಾ ನೋಡಬೇಕು.

     ನಾಯಕ ಆದರ್ಶಗುಂಡೂರಾಜ್ ಮೊದಲ ಚಿತ್ರಕ್ಕಿಂತ ಇದರಲ್ಲಿ ಚೆನ್ನಾಗಿ ವರ್ಕ್ ಮಾಡಿದ್ದಾರೆ ಎನ್ನಬಹುದು. ನಾಯಕಿ ಸಿಂಧೂರಾವ್ ಅಂದೆಯಾಗಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಿರ್ದೇಶಕ ರಾಜುದೇವಸಂದ್ರ ಚೆನ್ನಾಗಿ ಕಥೆ ರೂಪಿಸಿರುವುದರಿಂದ ಕುತೂಹಲ ಹುಟ್ಟಿಸುತ್ತಾ ನೋಡುಗರಿಗೆ ಆಸಕ್ತಿ ತರಿಸುವಂತೆ ಮಾಡಿದೆ. ಆರವ್‌ರುಷಿಕ್ ಸಂಗೀತ, ರಮೇಶ್‌ಕೊಯಿರಾ ಛಾಯಾಗ್ರಹಣ ಇದಕ್ಕೆ ಪೂರಕವಾಗಿದೆ. ಜಯಣ್ಣ ಮತ್ತು ಶುಕ್ರ ಫಿಲಿಂಸ್ ಉತ್ತಮ ಚಿತ್ರವನ್ನು ಜನರಿಗೆ ನೀಡಿದ್ದಾರೆ.

***

 

 

Copyright@2018 Chitralahari | All Rights Reserved. Photo Journalist K.S. Mokshendra,