Spooky College.Reviews

Friday, January 06, 2023

209

ಹೆದರಿಸುವ ಸ್ಪೂಕಿ ಕಾಲೇಜು

       ಹಾರರ್ ಚಿತ್ರಗಳು ನೋಡುಗರನ್ನು ಆಕರ್ಷಿಸುತ್ತದೆ ಎಂಬುದನ್ನು ಅರಿತಿರುವ ಸಿನಿಮಾತಂಡವು ಅಂತಹುದೆ ಚಿತ್ರಗಳನ್ನು ಮಾಡುತ್ತಾ ಬಂದಿದ್ದಾರೆ. ಆ ಸಾಲಿಗೆ ‘ಸ್ಫೂಫಿ ಕಾಲೇಜು’ ಸೇರ್ಪಡೆಯಾಗುತ್ತದೆ. ಕಥೆಯಲ್ಲಿ ನೂರು ವರ್ಷಗಳಷ್ಟು ಹಳೆಯದಾದ ಬ್ರಿಟಿಷರ ಕಾಲದ ಶಿಥಿಲಾವಸ್ಥೆಯಲ್ಲಿದ್ದ ಕಾಲೇಜ್ ಕಟ್ಟಡವೊಂದನ್ನು ನವೀಕರಣಗೊಳಿಸಿ, ಪುನ: ಅಲ್ಲಿ ಇಂಜಿನಿಯರಿಂಗ್ ಕಾಲೇಜ್‌ನ್ನು ಶುರುಮಾಡುವ ಪ್ರಿನ್ಸಿಪಾಲ್, ಅದನ್ನು ಉಳಿಸಿ, ಬೆಳೆಸಲು ಸತತ ಹೋರಾಟ ಮಾಡಲು ಮುಂದೆ ಬಂದಾಗ, ಈ ಹಂತದಲ್ಲಿ ನಡೆಯುವ ಕೆಲ ಅಹಿತಕರ ಘಟನೆಗಳು ಕಾಲೇಜಿನ ಬಗ್ಗೆ ಇದ್ದ ಇತಿಹಾಸಕ್ಕೆ ಸಿಂಕ್ ಆಗಿ ಭಯ ಹುಟ್ಟಿಸುತ್ತದೆ. ಇದೇ ಕಾಲೇಜಿನಲ್ಲಿ ರಿಷಿಕುಮಾರ್, ಖುಷಿ ವಿದ್ಯಾಭ್ಯಾಸ ಮಾಡುತ್ತಿರುತ್ತಾರೆ. ಆಕೆಗೆ ಅಲ್ಲಿ ಕೆಟ್ಟ ಅನುಭವ ಆಗಿರುತ್ತದೆ. ಅದರಿಂದ ಹೊರಬರಲು ಕಷ್ಟಪಡುತ್ತಿರುತ್ತಾಳೆ. ಇತ್ತ ರಿಷಿ ಕಾಲೇಜಿನಲ್ಲಿ ಉಂಟಾಗುತ್ತಿದ್ದ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಹೊರಡುತ್ತಾನೆ. 

ಇದರಿಂದ ಅವನಿಗೊಂಡು ಘೋರ ಸತ್ಯ ತಿಳಿಯುತ್ತದೆ. ಅದು ಏನೆಂಬುದನ್ನು ಚಿತ್ರ ನೋಡಿ ತಿಳಿಯಬೇಕು.

       ನಿರ್ದೇಶಕ ಭರತ್ ಹೊಸ ಅವಕಾಶ ಸಿಕ್ಕಿದ್ದರಿಂದ ಅದನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಪ್ರೀಮಿಯರ್ ಪದ್ಮಿನಿಯಲ್ಲಿ ಗಮನ ಸೆಳೆದಿದ್ದ ನಾಯಕ ವಿವೇಕ್‌ಸಿಂಹ ಉತ್ತಮ ನಟನೆ ಮಾಡಿದ್ದಾರೆ. ನಾಯಕಿ ಖುಷಿರವಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ವಿಜಯ್‌ಚೆಂಡೂರು, ರಘುರಮನಕೊಪ್ಪ, ಹನುಮಂತೇಗೌಡ ನಗಿಸುತ್ತಾರೆ. ಅಜನೀಶ್‌ಲೋಕನಾತ್ ಹಿನ್ನಲೆ ಸಂಗೀತ ಇಡೀ ಚಿತ್ರವನ್ನು ಆವರಿಸಿಕೊಂಡಿದೆ. ಇದಕ್ಕೆ ಪೂರಕವಾಗಿ ಮನೋಹರ್‌ಜೋಷಿ ಛಾಯಾಗ್ರಹಣ ಪ್ಲಸ್ ಪಾಯಿಂಟ್ ಆಗಿದೆ. ರಂಗಿತರಂಗ ನಿರ್ಮಾಣ ಮಾಡಿದ್ದ ಹೆಚ್.ಕೆ.ಪ್ರಕಾಶ್ ಮತ್ತೋಮ್ಮೆ ಒಳ್ಳೆ ಸಿನಿಮಾವನ್ನು ಜನರಿಗೆ ನೀಡಿದ್ದಾರೆ.

****

 

Copyright@2018 Chitralahari | All Rights Reserved. Photo Journalist K.S. Mokshendra,