Shri Balaji Photo Studio.Reviews

Friday, January 06, 2023

46

ಕ್ಯಾಮೆರಮನ್ ಬದುಕಿನ ಸವಾಲು, ಹೋರಾಟಗಳು

       ಫೋಟೋ ಗ್ರಾಫರ್ ಒಬ್ಬನ ಕಥೆಯನ್ನು ಹೇಳುವ ‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಚಿತ್ರವು ಆತನ ಬದುಕನ್ನು ಏಳೆ ಏಳೆಯಾಗಿ ಬಿಚ್ಚಿಟ್ಟಿದ್ದಾರೆ. ಬೇರೊಬ್ಬರ ಜೀವನದ ಸಂಭ್ರಮದ ಕ್ಷಣಗಳನ್ನು ಕ್ಲಿಕ್ಕಿಸುವ ಪುಟ್ಟು ತನ್ನ ಜೀವನವನ್ನೇ ದೊಡ್ಡ ಅಘಾತವೊಂದನ್ನು ಎದುರಿಸಬೇಕಾಗುತ್ತದೆ. ಊರಲ್ಲಿ ಶೀರ್ಷಿಕೆ ಹೆಸರಿನಲ್ಲಿ ಸ್ಟುಡಿಯೋ ಇಟ್ಟುಕೊಂಡಿದ್ದು, ಅಲ್ಲಿ ಯಾವುದೇ ಶುಭ ಸಮಾರಂಭ ನಡೆದರೂ ಈತನ ಹಾಜರಿ ಖಾಯಂ ಆಗಿರುತ್ತದೆ. ಎಲ್ಲ ಜನರಿಗೂ ಇವನನ್ನು ಕಂಡರೆ ಅಚ್ಚು ಮೆಚ್ಚು. ಕ್ಯಾಮಾರ, ಸ್ಟುಡಿಯೋ ಎರಡೇ ಪ್ರಪಂಚ ಅಂದುಕೊಂಡಿದ್ದ ಅವನಿಗೆ ಬದುಕಿನಲ್ಲಿ ಘೋರ ಘಟನೆ ನಡೆದು, ಜೀವನ ಹೀನಸ್ಥಿತಿಗೆ ಬರುತ್ತದೆ. 

ಸ್ನೇಹಿತನೊಬ್ಬನ ಪ್ರಿವೆಡ್ಡಿಂಗ್ ಶೂಟ್ ಮಾಡಲು ಭಾವಿ ಸತಿಪತಿಗಳನ್ನು ಫಾಲ್ಸ್ ಬಳಿ ಕರೆದುಕೊಂಡು ಹೋದಾಗ ನಡಿಬಾರದ ದುರ್ಘಟನೆ ಸಂಭವಿಸುತ್ತದೆ. ತಂಗಿಯನ್ನು ಕಳೆದುಕೊಂಡ ಅಣ್ಣ ಅವನ ಕ್ಯಾಮಾರವನ್ನು ಬಿಸಾಕಿ, ಸ್ಟುಡಿಯೋಗೆ ಬೀಗ ಹಾಕಿಸುತ್ತಾನೆ. ಮುಂದೆ ಪಟ್ಟಣಕ್ಕೆ ಬಂದು ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಆದರೂ ಇವನ ಮೇಲೆ ಬಂದಿರುವ ಆರೋಪಕ್ಕೆ ಬಿಡುಗಡೆ ಸಿಕ್ಕಿತಾ? ಹಳ್ಳಿಯಲ್ಲಿ ಎಂದಿನಂತೆ ಸ್ಟುಡಿಯೋ ಶುರು ಮಾಡಿದನಾ? ಎಲ್ಲದಕ್ಕೂ ಉತ್ತರ ಚಿತ್ರಮಂದಿರದಲ್ಲಿ ಸಿಗುತ್ತದೆ.

       ನಿರ್ದೇಶಕ ಮತ್ತು ನಾಯಕನಾಗಿ ಎರಡು ಜವಬ್ದಾರಿಗಳನ್ನು ಹೊತ್ತುಕೊಂಡಿರುವ ರಾಜೇಶ್‌ಧ್ರುವ ಸೈ ಅನಿಸಿಕೊಂಡಿದ್ದಾರೆ. ನಾಯಕಿ ರಾಧಿಕಾಅಚ್ಯುತಕುಮಾರ್ ಪ್ರಥಮ ಪ್ರಯತ್ನದಲ್ಲೆ ನಟನೆಯನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಶ್ರೀರಾಮ್‌ಗಂಧರ್ವ ಸಂಗೀತ ಪರವಾಗಿಲ್ಲ. ಮನೋಜ್ ಛಾಯಾಗ್ರಹಣ, ಸ್ವಸ್ತಿಕ್‌ಕಾರೆಕಾಡ್ ಹಿನ್ನಲೆಶಬ್ದ ಇದಕ್ಕೆ  ಪೂರಕವಾಗಿದೆ. ಸೃಜನ ಪ್ರೊಡಕ್ಷನ್ ಅಡಿಯಲ್ಲಿ ವೆಂಕಟೇಶ್ವರರಾವ್, ಬಳ್ಳಾರಿ ನಿರ್ಮಾಣ ಮಾಡಿದ್ದಾರೆ.

****

 

Copyright@2018 Chitralahari | All Rights Reserved. Photo Journalist K.S. Mokshendra,