Rangiha Rate.Reviews

Friday, February 10, 2023

421

ಬದುಕೇ ಒಂದು ರಂಗಿನಾಟ

        ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ರಂಗಿನರಾಟೆ’ ಚಿತ್ರವು ನಾವು ಮಾಡಿದ ಕರ್ಮ ನಮ್ಮನ್ನು ಹೇಗೆ ಬಿಡದೆ ಕಾಡುತ್ತದೆ ಎಂಬುದನ್ನು ಹೇಳಹೊರಟಿದೆ.  ಎಲ್ಲರ ಜೀವನವು ರಾಟೆಯ ಹಾಗೆ ಸುತ್ತುತ್ತಿರುತ್ತದೆ. ಇಂತಹುದೇ ವಿಷಯಗಳು ಚಿತ್ರದಲ್ಲಿದೆ. ನಾವೆಲ್ಲರೂ ಉತ್ತಮ ಬದುಕು ಕಟ್ಟಿಕೊಳ್ಳಲು ರಾಟೆಯಂತೆ ಸುತ್ತುತ್ತಿರುತ್ತೇವೆ. ಹಾಗಾಗಿ ಇದೇ ಶೀರ್ಷಿಕೆಯನ್ನು ಇಡಲಾಗಿದೆ. ನಾಯಕ ರಾಜೀವ್‌ರಾಥೋಡ್, ನಾಯಕಿ ಭವ್ಯಾ ದುನಿಯಾರಶ್ಮಿ, ಹಾಗೂ ಸಂತೋಷ್ ಈ ನಾಲ್ಕು ಜನರ ಸುತ್ತ ಕಥೆಯು ಸಾಗುತ್ತದೆ. ಅನಿರೀಕ್ಷಿತ ಘಟನೆಯಲ್ಲಿ ಹೀರೋ ಸಿಕ್ಕಿಹಾಕಿಕೊಂಡು ಅದರಿಂದ ಹೇಗೆ ಪಾರಾಗುತ್ತೇನೆ ಅಂತ ಚಿತ್ರ ನೋಡಿದರೆ ತಿಳಿಯುತ್ತದೆ.

        ಪ್ರಥಮ ಪ್ರಯತ್ನದಲ್ಲಿ ಆರ್ಮುಗಂ ನಿರ್ದೇಶನದಲ್ಲಿ ಶ್ರಮ ಪಟ್ಟಿರುವುದು ಪರದೆ ಮೇಲೆ ಕಾಣಿಸುತ್ತದೆ. ಚಂದ್ರುಒಬಯ್ಯ ಹಿನ್ನಲೆ ಸಂಗೀತ ಪ್ಲಸ್ ಪಾಯಿಂಟ್. ಇದಕ್ಕೆ ಪೂರಕವಾಗಿ ರವಿಸುವರ್ಣ ಛಾಯಾಗ್ರಹಣ, ದಾಮೋದರನಾಯ್ಡು ಸಂಕಲನವಿದೆ. ಕವಿತಾಅರಣ್‌ಕುಮಾರ್ ಒಳ್ಳೆ ಸಿನಿಮಾವನ್ನು ಜನರಿಗೆ ನೀಡಿದ್ದಾರೆಂದು ಹೇಳಬಹುದು. ಮುಂದೆ ರಂಗಿನರಾಟೆ-೨ ಕೂಡ ಬರಲಿದೆ ಎಂದು ಸೂಕ್ಷವಾಗಿ ಹೇಳಿದ್ದಾರೆ.

****  

 

Copyright@2018 Chitralahari | All Rights Reserved. Photo Journalist K.S. Mokshendra,