Gara.Film Review.

Friday, May 03, 2019

 

ಗರ ವೈವಿಧ್ಯತೆಯ ಆಗರ

 

ಚಿತ್ರ: ಗರ

ತಾರಾಗಣ: ರೆಹಮಾನ್, ಆವಂತಿಕಾ ಮೋಹನ್, ರಾಮಕೃಷ್ಣ, ಜಾನಿಲಿವರ್, ಸಾಧುಕೋಕಿಲ

ನಿರ್ದೇಶನ: ಮುರಳೀಕೃಷ್ಣ

ನಿರ್ಮಾಣ: ನಾಗ ಪ್ರಸಾದ್

 

ಕನ್ನಡದಲ್ಲಿ  ವಿಭಿನ್ನ ಕತೆಯ ಚಿತ್ರಗಳು ಬರುತ್ತಿಲ್ಲ ಎನ್ನುವವರಿಗೆ ಉತ್ತರವಾಗಿ ಬಂದಿರುವ ಚಿತ್ರವೇ ಗರ.

 

 

ಗಂಗಸ್ವಾಮಿ ಎನ್ನುವ ಗರ ಹಾಕಿ ಭವಿಷ್ಯ ನುಡಿಯುವ ವ್ಯಕ್ತಿಯೊಬ್ಬನ ಬದುಕಿನ ಕತೆಯನ್ನು ಫ್ಲ್ಯಾಶ್‌‌‌ ಬ್ಯಾಕ್ ಜೊತೆಯಲ್ಲೇ ತೆರೆದಿಡುತ್ತಾ ಹೋಗುತ್ತದೆ ಚಿತ್ರ. ಗರಗಳನ್ನು ಮನಸಿಗೆ ಬಂದಂತೆ ತಿರುಗಿಸಿ ತನಗೆ ಬೇಕಾದ ರೀತಿಯಲ್ಲಿ ದಾಳ ಹಾಕಿ ಶಕುನಿಯಂತೆ ಪಂದ್ಯ ಗೆಲ್ಲುವ ವ್ಯಕ್ತಿ ಗಂಗಸ್ವಾಮಿ. ಆದರೆ ಸುಬ್ಬಯ್ಯ ಎನ್ನುವ ವ್ಯಕ್ತಿಯ ವಿಚಾರದಲ್ಲಿ ಆತನ ಗರದಾಟ ಗರ ಬಡಿಸುವ ರೀತಿಯಲ್ಲಿ ಬದಲಾಗುತ್ತದೆ. ಹಾಗೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಾತನಿಗೆ ಆತನ ಸಾಲಗಳನ್ನು ತೀರಿಸಲು ಒಂದು ದಾರಿ ಗೋಚರವಾಗುತ್ತದೆ. ಅದುವೇ ಭಗೀರತನಿಗೆ ಮಾಡುವ ಮೋಸ. ದಿನ ಭಗೀರತನನ್ನು ಬಾವಿಗೆ ತಳ್ಳಿ ಸಂಪಾದಿಸಿದ ಹಣದ ಮೂಲಕ ಸೋಲಿನಿಂದ ಪಾರಾಗುತ್ತಾನೆ ಗಂಗಸ್ವಾಮಿ. ಆದರೆ ಅಂದು ಸತ್ತನೆಂದುಕೊಂಡ ಭಗೀರತ ಮತ್ತೆ ಎದುರಾದಾಗ ನಡೆಯುವುದೇನು? ಎನ್ನುವುದೇ ಗರ ಚಿತ್ರದ ರೋಚಕ ಕತೆ. ಚಿತ್ರದಲ್ಲಿ ಗರದ ಮೂಲಕಬದಲಾಗುವ ಹಣದ ಬಗ್ಗೆ ಮಾತ್ರವಲ್ಲ ಗುಣದ ಬಗ್ಗೆಯೂ ಹೇಳಲಾಗಿದೆ. ಹಾಗಾಗಿ ಗಂಗಸ್ವಾಮಿ ಮತ್ತು ಭಗೀರತನ ಮಧ್ಯೆ ಬರುವ ನಾಯಕಿಯ ಪಾತ್ರ ಕೂಡ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

 

ಮೊದಲ ಬಾರಿಗೆ ಪೂರ್ಣ ಪ್ರಮಾಣದ ಕೇಂದ್ರಪಾತ್ರವಾದ ಗಂಗಸ್ವಾಮಿಯಾಗಿ ಬಣ್ಣ ಹಚ್ಚುವ ಮೂಲಕ ರೆಹಮಾನ್ ಗಮನ ಸೆಳೆದಿದ್ದಾರೆ. ಮೊದಲ ಪ್ರಯತ್ನದಲ್ಲೇ ಅವರನ್ನು ತಮ್ಮ ಜನಪ್ರಿಯ ವಾರ್ತಾವಾಚಕನ ಶೈಲಿಯಿಂದ ಹೊರಗೆ ತರುವಲ್ಲಿ ನಿರ್ದೇಶಕ ಮುರಳೀಕೃಷ್ಣ ಯಶಸ್ವಿಯಾಗಿದ್ದಾರೆ. ಅವರ ಪಾತ್ರ ಗಂಗಸ್ವಾಮಿಯ ಜೊತೆಯಲ್ಲೇ ನಿಶಾಂತ್ ಎನ್ನುವ ಮತ್ತೊಂದು ಶೇಡ್ ನಲ್ಲಿಯೂಕಾಣಸಿಗುತ್ತದೆರೆಹಮಾನ್ ಎರಡನ್ನೂ‌‌ ಸಮರ್ಥವಾಗಿ ನಿಭಾಯಿಸಿದ್ದಾರೆ. ರೆಹಮಾನ್ ಜೋಡಿಯಾಗಿ ಆಕಸ್ಮಿಕ ಮತ್ತು ತುಂಗ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿರುವ ಆವಂತಿಕಾ ಮೋಹನ್ ಕೂಡ ಗಮನಸೆಳೆಯುತ್ತಾರೆ. ಉಳಿದಂತೆ ಭಗೀರಥನಾಗಿ ಆರ್ಯನ್ ಶರ್ಮ,

ಡಿಜಿಟಲ್ ಗೌಡನ ಪಾತ್ರ ಮತ್ತು ಅತಿಥಿ ನಟಿಯಾಗಿ ಕಾಣಿಸಿರುವ ನೇಹಾ ಪಾಟೀಲ್ಪಾತ್ರಗಳು ಉಲ್ಲೇಖನೀಯ. ವಿಶೇಷವಾಗಿ ಬಾಲಿವುಡ್ ಜನಪ್ರಿಯ ನಟ ಜಾನಿಲಿವರ್ ಮತ್ತು ಕನ್ನಡದ ಸಾಧುಕೋಕಿಲ‌‌ ಸಹೋದರರಾಗಿಗಮನಸೆಳೆದಿದ್ದಾರೆ. ರೂಪಾದೇವಿ, ರಾಮಕೃಷ್ಣ, ಸುಚಿತ್ರಾ ಮೊದಲಾದವರ ತಾರಾ ಬಳಗವಿದೆ. ಕುಡುಕಚಾಲಕನಾಗಿ ತಬಲಾ ಹಾಗೂ ಸುಚಿತ್ರಾ ಮತ್ತು ನಾಣಿ, ವ್ಯಾಪಾರಿ ಬಶೀರನಾಗಿ ಮನದೀಪ್ ರಾಯ್, ಸೇಠುವಾಗಿ ಎಂ ಎಸ್ ಉಮೇಶ್, ಚಹಾ ಮಾರಾಟಗಾರ್ತಿಯಾಗಿ ಸೋನುಪಾಟೀಲ್ನಟಿಸಿದ್ದಾರೆ. ಹಿನ್ನೆಲೆ ಸಂಗೀತ ಮತ್ತು ಹಾಡುಗಳ‌‌‌ ಸಂಗೀತ ಸಂಯೋಜನೆ ಚೆನ್ನಾಗಿದೆ. ಒಟ್ಟಿನಲ್ಲಿ ಎಲ್ಲವಿಚಾರದಲ್ಲಿಯೂ ಗಮನಸೆಳೆಯುವ ಚಿತ್ರ ಗರ ಎನ್ನುವುದರಲ್ಲಿ ಸಂದೇಹವಿಲ್ಲ.

Copyright@2018 Chitralahari | All Rights Reserved. Photo Journalist K.S. Mokshendra,