Kiss.Film Review.

Friday, September 27, 2019

41

ಕಲರ್‌ಫುಲ್ ಯುಗದ ಕಿಸ್

         ‘ಕಿಸ್’ ಚಿತ್ರದ ಪದ ಪ್ರೀತಿ ಮಾಡುವವರಿಗೆ, ಪ್ರೀತಿಸಿ ಮದುವೆ ಆದವರಿಗೆ ಇದು ಅಮೂಲ್ಯವಾದ ಕೊಡುಗೆ. ಇಂತಹ ಕಿಸ್ ಗಾಗಿ ಒದ್ದಾಡುವ ಯುವ ಪ್ರೀತಿ ಕತೆಯೇ ಇದಾಗಿದೆ. ಹಾಗಂತ ಶೀರ್ಷಿಕೆ ಹೆಚ್ಚು ದೃಶ್ಯದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅವಳು ಕಾರಿಗೆ ಕಲ್ಲು ಒಡೆದು ರಿಪೇರಿ ಮಾಡಿಸಲು ದುಡ್ಡು ಇಲ್ಲದ ಕಾರಣ ಅವನಿಗೆ ಸಹಾಯಕಳಾಗಿ ೭೨ ದಿವಸ ಇರುವಂತೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಇಷ್ಟರಲ್ಲಿ ಇಬ್ಬರಲ್ಲೂ ಜಗಳ, ಆತನ ಧೋರಣೆಯಿಂದ ಅನುಭವಿಸುವ ತೊಂದರೆಗಳು ಒಂದು ಹಂತದಲ್ಲಿ ಅವಳನ್ನು ಕಾಪಾಡಿದಾಗ ಕೋಪ ಪ್ರೀತಿಗೆ ವಾಲುತ್ತದೆ. ಇಷ್ಟರಲ್ಲಿ ತನ್ನ ಲವ್ ಹೇಳಿಕೊಳ್ಳಲು ಆತನ ಬಳಿಗೆ ಬಂದಾಗ ಇಂದಿನಿಂದ ನೀನು ಫ್ರಿಬರ್ಡ್, ನಮ್ಮಿಬ್ಬರ ಅಗ್ರಿಮೆಂಟ್ ಮುಗಿದಿದೆ. ನೋಯಿಸಿದ್ದರೆ ಕ್ಷಮಿಸು ಎಂದು ಹೇಳುತ್ತಾನೆ. ಮುಂದೇನು ಎಂಬುದನ್ನ ಸಿನಿಮಾ ನೋಡಬೇಕು.

        ನಾಯಕ ವಿರಾಟ್ ಡ್ಯಾನ್ಸ್, ಫೈಟ್ ಮತ್ತು ಅಭಿನಯದಲ್ಲಿ ಸೈ ಅನಿಸಿಕೊಂಡಿದ್ದಾರೆ. ಇವರಿಗೆ ಸರಿಸಾಟಿಯಾಗಿ ನಾಯಕಿ ಶ್ರೀಲೀಲಾ ಮುದ್ದಾಗಿ ನಟನೆ ಮಾಡುತ್ತಾ ಇಂದಿನ ಹುಡುಗಿಯರನ್ನು ಪ್ರತಿಪಾದಿಸಿದ್ದಾರೆ. ಇಬ್ಬರದು ಹೊಸ ಪ್ರಯತ್ನ ಎಂದು ಹೇಳುವ ಆಗಿಲ್ಲ. ಭವಿಷ್ಯದಲ್ಲಿ ಕಲಾವಿದರಾಗಿ ನಿಂತರೂ ಅಚ್ಚರಿಯಿಲ್ಲ. ಎಂದಿನಂತೆ ಗೆಳಯನಾಗಿ ಚಿಕ್ಕಣ್ಣ  ಹೆಚ್ಚು ಕಾಣಿಸಿಕೊಂಡು ಅಲ್ಲಲ್ಲಿ ನಗಿಸುತ್ತಾರೆ. ಸಾಧುಕೋಕಿಲ, ಅವಿನಾಶ್, ಸುಂದರ್ ಹಾಗೆ ಬಂದು ಹೋಗುತ್ತಾರೆ.       ನಿರ್ಮಾಪಕ ಮತ್ತು  ನಿರ್ದೇಶಕ ಎ.ಪಿ.ಅರ್ಜುನ್  ಒಳ್ಳೆಯ ಚಿತ್ರ ನೀಡುರುವುದು ಪರದೆ ಮೇಲೆ ಕಾಣಿಸುತ್ತದೆ.  ವಿ.ಹರಿಕೃಷ್ಣ ಪುತ್ರ  ಆದಿಹರಿಕೃಷ್ಣ ಸಂಗೀತ ಸಂಯೋಜಿಸಿರುವ ‘ನೀನೇ ಮೊದಲು’ ಗೀತೆಯು ನೋಡಲು,ಕೇಳಲು ಇಂಪಾಗಿದೆ.  ವಿ.ಹರಿಕೃಷ್ಣ ಸಂಗೀತ,  ಅರ್ಜುನ್‌ಶೆಟ್ಟಿ ಛಾಯಾಗ್ರಹಣ, ರವಿವರ್ಮ ಸಾಹಸ  ಇದೆಲ್ಲಕ್ಕೂ ಪೂರಕವಾಗಿದೆ. 

 

Copyright@2018 Chitralahari | All Rights Reserved. Photo Journalist K.S. Mokshendra,