Geetha.Film Review.

Friday, September 27, 2019

ಕನ್ನಡದ ಹೋರಾಟಗಾರನ ಕಥನ

       ೧೯೮೧ರ ಗೋಕಾಕ್ ಚಳುವಳಿ ಹೋರಾಟ ಜೊತೆಗೆ ಪ್ರೀತಿ ಇರುವ  ‘ಗೀತಾ’  ಮಹಿಳಾ ಪ್ರಧಾನ ಸಿನಿಮಾವಾಗಿದೆ.  ಇಂದಿನ ಯುವಜನಾಗಂಕ್ಕೆ ಇದರ ಬಗ್ಗೆ  ಮಾಹಿತಿ ಇಲ್ಲ. ವಿಷಯದ ಬಗ್ಗೆ ಆಸಕ್ತಿ ಇರುವವರು ಚಿತ್ರ ನೋಡಬಹುದು.  ಸಿನಿಮಾದಲ್ಲಿ  ಚೌಕಟ್ಟು ಮೀರದ ಪಾತ್ರಗಳು ಇರಲಿದೆ. ನೋಡುಗನಿಗೆ ಅರ್ಥವಾಗುವಂತೆ  ಚಿತ್ರಕತೆ ಇರುವುದು  ಪ್ಲಸ್ ಪಾಯಿಂಟ್ ಆಗಿದೆ. ಕತೆಯಲ್ಲಿ ಕನ್ನಡದ ಭಾಷಾಭಿಮಾನ, ಪ್ರೀತಿ, ನೋವು-ನಲಿವು, ದುಗುಡ ಇತ್ಯಾದಿ ಅಂಶಗಳು ಚಿತ್ರದ ವೇಗವನ್ನು ಎತ್ತಿ ಹಿಡಿದಿದೆ.  ಮೊದಲರ್ಧ ಗೋಕಾಕ್ ಚಳುವಳಿ ವಾಸ್ತವದ ನೆನಪುಗಳನ್ನು ತೆರೆದಿಟ್ಟಿದೆ. ವಿರಾಮ ನಂತರ ಮುಗ್ದ ಪ್ರೇಮ ಕಥನ ತೆರೆದುಕೊಳ್ಳುತ್ತದೆ. 

       ಗಣೇಶ್ ಪ್ರಥಮ ಬಾರಿ ಆಂಗ್ರ್ರಿ ಯಂಗ್ ಮ್ಯಾನ್ ಆಗಿ, ಚಳುವಳಿ ಹೋರಾಟಗಾರ, ಪ್ರೀತಿಯಲ್ಲಿ ಬೀಳುವ ಮುಗ್ದನಾಗಿ ಎರಡು ಶೇಡ್‌ಗಳಲ್ಲಿ  ಸುಲಲಿತವಾಗಿ  ನಟನೆ ಮಾಡಿರುವುದು ಸಿನಿಮಾಕ್ಕೆ ಕಳಸವಿಟ್ಟಂತೆ ಆಗಿದೆ. ಶಾನ್ವಿಶ್ರೀವಾತ್ಸವ್ ಗತಕಾಲ, ಪ್ರಸಕ್ತಕಾಲ ಹೀಗೆ ಎರಡಲ್ಲೂ ಕಾಣಿಸಿಕೊಂಡು ಡಬ್ಬಿಂಗ್ ಮಾಡಿರುವುದು ಚೆಂದ ಅನಿಸುತ್ತದೆ.  ಪ್ರಯಾಗ್‌ರಾವ್, ಪಾರ್ವತಿ ಅರುಣ್ ನಾಯಕಿಯರು.  ಸುಧಾರಾಣಿ, ದೇವರಾಜ್‌ಗೆ ಹೆಚ್ಚು ಸ್ಕೋಪ್ ಸಿಕ್ಕಿದೆ.  ಅಚ್ಯುತಕುಮಾರ್, ರಂಗಾಯಣರಘು, ಸ್ವಾತಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ವಿಜಯ್‌ನಾಗೇಂದ್ರ ಮೊದಲಬಾರಿ ರಚನೆ, ನಿರ್ದೇಶನ ಮಾಡಿದ್ದಾರೆ.  ಸಂತೋಷ್‌ಆನಂದ್‌ರಾಮ್ ಅವರ ‘ಕನ್ನಡ ಕನ್ನಡ’ ಗೀತೆಗೆ ಇಂಪಾದ ಸಂಗೀತ ಒದಗಿಸಿರುವ ಅನುಪ್‌ರುಬೆನ್ಸ್ ಕೆಲಸಕ್ಕೆ ಪೂರಕವಾಗಿ ಶ್ರೀಶಕೂದುವಳ್ಳಿ ಛಾಯಾಗ್ರಹಣ ಸಾಥ್ ನೀಡಿದೆ.  ಶಿಲ್ಪಶ್ರೀನಿವಾಸ್ ಹಾಗೂ ಸೈಯದ್‌ಸಲಾಂ ನಿರ್ಮಾಣ ಮಾಡಿರುವ ಸಿನಿಮಾವು ಕನ್ನಡಿಗರಿಗೆ ಇಷ್ಟವಾಗುತ್ತದೆ. 

 

Copyright@2018 Chitralahari | All Rights Reserved. Photo Journalist K.S. Mokshendra,