Navaraathri.Film Review.

Friday, September 27, 2019

ನವರಾತ್ರಿ ಭಯ, ಭಕ್ತಿ ಸಾರುವ ಚಿತ್ರ

       ಹಿಂದಿನ ಕಾಲದಲ್ಲಿ  ದೇವರನ್ನು  ಪೂಜಿಸುವ ಭಕ್ತರು ಸಾಕಷ್ಟು ಮಂದಿ ಇದ್ದರು. ಅಲ್ಲಿನ ವಾತವರಣ, ಹಳ್ಳಿಯ ಸುಂದರ ಪರಿಸರ ಎಲ್ಲರಿಗೂ ನೆಮ್ಮದಿಯ ಜೀವನ ಕಟ್ಟಿಕೊಟ್ಟಿತ್ತು. ಆದರೆ ನಾವುಗಳು ಇಂದಿನ ಯಾಂತ್ರಿಕ ಬದುಕಿನಲ್ಲಿ  ಪ್ರತಿಯೊಂದನ್ನು ವ್ಯಾವಹಾರಿಕವಾಗಿ ನೋಡುತ್ತಿರುವುದರಿಂದ ಮಿಕ್ಕಲ್ಲೆವು ಗೌಣ ಎನ್ನುವಂತೆ ಭಾಸವಾಗುತ್ತದೆ. ಕತೆಯಲ್ಲಿ ಒಂದಷ್ಟು ಗೆಳಯರು  ಪೂರ್ಣಗೊಳ್ಳದ ಆಪಾರ್ಟ್‌ಮೆಂಟ್  ಒಳಗೆ ಹೋಗುತ್ತಾರೆ. ನಾಯಕನ ಅಣ್ಣನ ಜಾಗವಾಗಿದ್ದರಿಂದ ಮಸ್ತಿ ಮಾಡಲು ಬರುತ್ತಾರೆ. ಇದರ ನಡುವೆ ಬೇರೆ ವ್ಯಾಪಾರದಲ್ಲಿ ನಷ್ಟ ಉಂಟಾಗಿ  ಅಪಾರ್ಟ್ಮೆಂಟ್‌ನ್ನು ಮಾರಲು ನಿರ್ದರಿಸಿದಾಗ ಅಡತಡೆಗಳು ಒದಗಿಬಂದು ಮನೆಯಲ್ಲಿ ದೆವ್ವ ಇದೆ ಅಂತ ತಿಳಿದುಕೊಳ್ಳುತ್ತಾನೆ. ಇದಲ್ಲದೆ ಅಗೋಚರ ಶಕ್ತಿಯೊಂದು ಎಲ್ಲರನ್ನು ದಿಗ್ಬ್ರಾಂತಿಗೆ ಕರೆದುಕೊಂಡು ಹೋಗುತ್ತದೆ. ಮುಂದಿನದನ್ನು ‘ನವರಾತ್ರಿ’ ಚಿತ್ರದಲ್ಲಿ ನೋಡಬಹುದು. 

        ತ್ರಿವಿಕ್ರಮ ನಾಯಕನಾಗಿ ಪರವಾಗಿಲ್ಲ. ನಾಯಕಿ ಹೃದಯಆವಂತಿಕಾ ತಾನೇನು ಕಮ್ಮಿ ಇಲ್ಲದಂತೆ ನಟಿಸಿದ್ದಾರೆ. ಉಳಿದಂತೆ ನಿರ್ಮಾಪಕ, ಕಲಾವಿದರು ಅಚ್ಚು ಕಟ್ಟಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅದರಲ್ಲೂ ನೋಡುಗರನ್ನು ನಗಿಸಿರುವ ಶಿವುಮಂಜು-ಕಾರ್ತಿಕ್ ಜುಗಲ್‌ಬಂದಿಯಲ್ಲಿ ಬಂದಿರುವ ಡೈಲಾಗ್‌ಗಳು ಪ್ಲಸ್ ಪಾಯಿಂಟ್ ಆಗಿದೆ. ನಿರ್ದೇಶಕ ಲಕ್ಷೀಕಾಂತ್‌ಚೆನ್ನ ಕನ್ನಡಿಗರು ಇಷ್ಟಪಡುವಂತ ಕತೆ ನೀಡಿದ್ದಾರೆ. ನರೇಶ್‌ಕುಮಾರ್ ಸಂಗೀತ ಮತ್ತು ಹಿನ್ನಲೆ ಶಬ್ದ ಇದಕ್ಕೆ ಪೂರಕವಾಗಿದೆ.  ಸಮಯರೆಡ್ಡಿ ಮತ್ತು ವಂಶಿಮೋಹನ್‌ರೆಡ್ಡಿ ನಿರ್ಮಾಣ ಮಾಡಿದ್ದಾರೆ. 

 

Copyright@2018 Chitralahari | All Rights Reserved. Photo Journalist K.S. Mokshendra,