Adhyaksha in America.Film Reviews

Friday, October 04, 2019

 

ಶರಣ್ ಅಧ್ಯಕ್ಷತೆಯ ಹಾಸ್ಯಕ್ಕೆ ಪ್ರೇಕ್ಷಕ ಶರಣು!

 

ಚಿತ್ರ: ಅಧ್ಯಕ್ಷ ಇನ್ ಅಮೇರಿಕಾ

ತಾರಾಗಣ: ಶರಣ್, ರಾಗಿಣಿ

ನಿರ್ದೇಶನ: ಯೋಗಾನಂದ್ ಮುದ್ದಾನ್

ನಿರ್ಮಾಣ: ವಿಶ್ವಪ್ರಸಾದ್, ವಿವೇಕ್

 

ಶರಣ್ ಚಿತ್ರಗಳೆಂದರೆ ಪೂರ್ತಿ ಮನೋರಂಜನೆಯ ನಿರೀಕ್ಷೆಯಲ್ಲೇ ಪ್ರೇಕ್ಷಕರು. ಅಂಥ ಪ್ರೇ

ಕ್ಷಕರಿಗೆ ಯಾವುದೇ ನಿರಾಶೆ ಆಗದ ಹಾಗೆ  ಚಿತ್ರ ಮಾಡಿ‌ಕೊಟ್ಟಿದ್ದಾರೆ ನಿರ್ದೇಶಕ ಯೋಗಾನಂದ್ ಮುದ್ದಾನ್.

 

ಕಥಾನಾಯಕನ ಹೆಸರು ಉಲ್ಲಾಸ್. ಆತ ಹಳ್ಳಿಯೊಂದರಲ್ಲಿ ವಾಸಿಸುರುತ್ತಾನೆ. ಆತನಿಗೆ ವಿಪರೀತ ಹಣದಾಹ. ಆದರೆ ಅದಕ್ಕಾಗಿ ಕಷ್ಟ ಪಟ್ಟು ದುಡಿಯುವ ಜಾಯಮಾನ ಆತನಿಗಿಲ್ಲ. ಪಂಚಾಯತ್ ಚುನಾವಣೆಯಲ್ಲೇ ಡೀಲ್ ಮಾಡುವ ಪ್ರಚಂಡ. ದುಡ್ಡಿಗಾಗಿ ಮಾರ್ವಾಡಿ ಕುಟುಂಬದ ಹುಡುಗಿಯೊಬ್ಬಳ ಮೇಲೆ ಕಣ್ಣು ಹಾಕಿರುತ್ತಾನೆ. ಆದರೆ ಆಕೆಗಿಂತ ವಿದೇಶದಲ್ಲಿರುವ ಹುಡುಗಿಯೊಂದಿಗೆ ವಿವಾಹವಾಗುವುದೇ ಬೆಟರ್ ಎನ್ನುವ ಅರಿವು ಮೂಡಿದಾಗ ಬಾಲ್ಯದ ಪ್ರೇಮದ ಕತೆ ಹೇಳುತ್ತಾನೆ. ಅದಕ್ಕೆ ತಕ್ಕಂತೆ ನಂದಿನಿ  ಎನ್ನುವ ಆ ಹುಡುಗಿಯೂ ತಯಾರಾಗುತ್ತಾಳೆ. ಮದುವೆ ಕೂಡ ನಡೆಯುತ್ತದೆ. ಆದರೆ ಮದುವೆಯ ಬಳಿಕ ಆಕೆ ಒಬ್ಬ ಮದ್ಯ ವ್ಯಸನಿ ಎನ್ನುವ ಸತ್ಯ ಉಲ್ಲಾಸನಿಗೆ ಅರಿವಾಗುತ್ತದೆ. ಮುಂದೇನು ಮಾಡುತ್ತಾನೆ ಎನ್ನುವುದನ್ನು ಪರದೆಯ ಮೇಲೆ ನೋಡುವುದೇ ಸೊಗಸು.

 

ಉಲ್ಲಾಸ್ ಪಾತ್ರದಲ್ಲಿ ಶರಣ್ ಉಲ್ಲಾಸಕಾರಿಯಾಗಿ ನಟಿಸಿದ್ದಾರೆ. ನಂದಿನಿಯಾಗಿ ರಾಗಿಣಿ ಪಕ್ಕಾ ಕುಡುಕಿಯಾಗಿ ಗಮನ ಸೆಳೆದಿದ್ದಾರೆ. ವಿದೇಶದಿಂದ ಬಂದು ಮತ್ತೆ ವಿದೇಶಕ್ಕೆ ಮರಳುವ ಯುವತಿಯಾಗಿ ರಾಗಿಣಿ ಪಾತ್ರಕ್ಕೆ ಹೊಂದಿಕೊಂಡಂತೆ ಕಾಣುತ್ತಾರೆ.     ನಂದಿನಿ ತಂದೆಯಾಗಿ ಪ್ರಕಾಶ್ ಬೆಳವಾಡಿ, ಸಾಕು ತಂದೆಯಾಗಿ ಅವಿನಾಶ್ ನಟಿಸಿದ್ದಾರೆ. ಒಂದು ಗ್ಯಾಪ್ ಬಳಿಕ ಅವಿನಾಶ್ ಜೋಡಿಯಾಗಿ ಚಿತ್ರಾ ಶೆಣೈ ಕಾಣಿಸಿಕೊಂಡಿದ್ದಾರೆ. ಶರಣ್ ಸ್ನೇಹಿತನ ಪಾತ್ರದಲ್ಲಿ ಶಿವರಾಜ್ ಕೆ ಆರ್ ಪೇಟೆ ನಟನೆ ನೆನಪಲ್ಲಿ ಉಳಿಯುತ್ತದೆ.

 

ಸಾಮಾನ್ಯವಾಗಿ ಮಲಯಾಳಂನಿಂದ ರಿಮೇಕ್ ಮಾಡಲ್ಪಡುವ ಚಿತ್ರಗಳಿಗೆ ಅದೇ ಹಾಸ್ಯವನ್ನು ಕನ್ನಡದಲ್ಲಿ ತೋರಿಸುವಲ್ಲಿ ಚಾಲೆಂಜ್ ಎದುರಿಸಬೇಕಾಗುತ್ತದೆ. ಆದರೆ ನಿರ್ದೇಶಕರ ಜಾಣ್ಮೆ ಮತ್ತು ಶರಣ್ ಅವರ ನಟನೆ ತಮಾಷೆಯನ್ನು ತೂಗಿಸಿಕೊಂಡು ಹೋಗುವಲ್ಲಿ ಗೆದ್ದಿದೆ. ಸಾಧು ಕೋಕಿಲ, ರಂಗಾಯಣ ರಘು ಮೊದಲಾದ ಹಾಸ್ಯ ದಿಗ್ಗಜರ ಸಮ್ಮಿಲನ ಚಿತ್ರರಸಿಕರ ಮನಗೆಲ್ಲುವಲ್ಲಿ ಫಲಕಾರಿಯಾಗಿದೆ.

Copyright@2018 Chitralahari | All Rights Reserved. Photo Journalist K.S. Mokshendra,