Ellide Illi Tanaka.Film Review.

Friday, October 11, 2019

ಹಾಸ್ಯದ ಮಿಶ್ರಣ ಎಲ್ಲದ್ದೆ ಇಲ್ಲ ತನಕ

       ಮಜಾ ಟಾಕೀಸ್ ಖ್ಯಾತಿ ಸೃಜನ್ ಲೋಕೇಶ್ ‘ಎಲ್ಲಿದ್ದೆ ಇಲ್ಲ ತನಕ’  ಚಿತ್ರದಲ್ಲಿ ಕಾಮಿಡಿಯನ್ನು ಉಣಬಡಿಸಿದ್ದಾರೆ.  ಒಂದು ಸುಳ್ಳು  ಎಂತಹ ಪರಿಣಾಮಗಳನ್ನು ತರಿಸುತ್ತದೆ ಎಂಬುದನ್ನು  ನವಿರಾದ ಪ್ರೀತಿ, ಹಾಸ್ಯ ಎರಡು ಮಿಶ್ರಣ ಮಾಡಿ ತೋರಿಸಲಾಗಿದೆ.  ಸೂರ್ಯ (ಸೃಜನ್ ಲೋಕೇಶ್) ಅಗರ್ಭ ಶ್ರೀಮಂತನ ಮಗ. ಚಿಕ್ಕಂದಿನಿಂದಲೇ ವಿದೇಶದಲ್ಲಿ ಇವರ ಅಧೀನದಲ್ಲಿ ಬೆಳೆದು,  ಒಂದು ವರ್ಷಗಳ ಕಾಲ ತನ್ನಿಷ್ಟದಂತೆ ಇರಲು ಸ್ವದೇಶಕ್ಕೆ ಬರುತ್ತಾನೆ. ಒಮ್ಮೆ ಅಮ್ಮನೊಂದಿಗೆ ಮದುವೆಗೆ ಹೋದಾಗ ನಂದಿನಿ(ಹರಿಪ್ರಿಯಾ)ಳನ್ನು ನೋಡಿ ಮರುಳಾಗುತ್ತಾನೆ.  ಮುಂದೆ  ಚಡ್ಡಿ ಗೆಳಯರೊಂದಿಗೆ ಸಮಯ ಕಳೆಯುತ್ತಿರುವಾಗ ಗೆಳೆಯ ಹಾಕಿದ ಛಾಲೆಂಜ್‌ನ್ನು ಸ್ವೀಕರಿಸಿ ಕೆಲಸಕ್ಕೆ ಸೇರುತ್ತಾನೆ. ಕಚೇರಿಯಲ್ಲಿ ಈತನ ಬಾಸ್ ನಂದನಿ ಆಗಿರುವುದರಿಂದ ಇವಳನ್ನು ಪಡೆಯುವ ಬಯಕೆಯಿಂದ ಸುಳ್ಳಿನ ಸರಮಾಲೆಗಳನ್ನು  ಹುಟ್ಟಿಸುತ್ತಾ ಕೊನೆಗೂ ಮದುವೆ ಮಾಡಿಕೊಳ್ಳುವಲ್ಲಿಗೆ ಬರುತ್ತಾನೆ. ಇದು ಆಕೆಗೆ ಗೊತ್ತಾದಾಗ ಏನಾಗುತ್ತದೆ ಅನ್ನೋದು ಒನ್ ಲೈನ್ ಸ್ಟೋರಿಯಾಗಿದೆ.

         ಸೃಜನ್‌ಲೋಕೇಶ್ ಚಿತ್ರದಲ್ಲಿ ಡೈಲಾಗ್‌ಗಳನ್ನು ಹೇಳುತ್ತಾ ಭರಪೂರ ಮನರಂಜನೆ ನೀಡಿದ್ದಾರೆ.  ಹರಿಪ್ರಿಯಾ ನಾಯಕಿಯಾಗಿ ನ್ಯಾಯ ಒದಗಿಸಿದ್ದಾರೆ.  ತಾರಾ-ಅವಿನಾಶ್ ಜೋಡಿ ಚೆನ್ನಾಗಿದೆ.  ಗೆಳೆಯರಾಗಿ ಯಶಸ್, ಗಿರಿ, ಎದುರಾಳಿಯಾಗಿ ತರಂಗವಿಶ್ವ, ಗಿರಿಜಾ ಲೋಕೇಶ್  ಗಮನ ಸೆಳೆಯುತ್ತಾರೆ. ಕ್ಲೀನ್‌ಕೃಷ್ಣಪ್ಪನಾಗಿ ಸಾಧುಕೋಕಿಲ, ಮಿಮಿಕ್ರಿ ದಯಾನಂದ್, ತಬಲನಾಣಿ  ಸಣ್ಣ ಪಾತ್ರದಲ್ಲಿ ಬಂದರೂ  ನಗಿಸುತ್ತಾರೆ. ಸ್ನೇಹಿತೆಯಾಗಿ ರಾಧಿಕಾರಾವ್ ಉಪನಾಯಕಿ ಎನ್ನಬಹುದು.  ಮೊದಲ ನಿರ್ದೇಶನದಲ್ಲೆ ತೇಜಸ್ವಿ ಭವಿಷ್ಯದ ತಂತ್ರಜ್ಘರೆಂದು ಗುರುತಿಸಿಕೊಂಡಿದ್ದಾರೆ. ಕವಿರಾಜ್-ಚೇತನ್‌ಕುಮಾರ್ ಸಾಹಿತ್ಯದ ಗೀತೆಗಳಿಗೆ ಅರ್ಜುನ್‌ಜನ್ಯಾ ಸಂಗೀತ ಸಂಯೋಜನೆ ಒಮ್ಮೆ ಕೇಳಬಲ್. ಹೆಚ್.ಸಿ.ವೇಣು ಛಾಯಾಗ್ರಹಣ ಕೆಲಸ ತೆರೆ ಮೇಲೆ ಕಾಣಿಸುತ್ತದೆ. ಗಿರಿಜಾಲೋಕೇಶ್- ಸೃಜನ್ ಪುತ್ರ ಮಾಸ್ಟರ್ ಸುಕೃತ್‌ಲೋಕೇಶ್ ಧ್ವನಿಯೊಂದಿಗೆ ಸಿನಿಮಾ ತೆರೆದುಕೊಳ್ಳುತ್ತದೆ. ಲೋಕೇಶ್ ಪ್ರೊಡಕ್ಷನ್ಸ್ ಮೂಲಕ ಮೊದಲಬಾರಿ ನಿರ್ಮಾಣವಾಗಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,