Dhandupalyam-4.Film Review.

Friday, November 01, 2019

ಅಪರಾಧಿಗಳಿಗೆ ಅಂಕೆ ಹಾಕುವ ದಂಡುಪಾಳ್ಯಂ

 

ಚಿತ್ರ: ದಂಡುಪಾಳ್ಯಂ ‌4

ತಾರಾಗಣ: ಸುಮನ್ ರಂಗನಾಥ್, ರವಿಶಂಕರ್

ನಿರ್ದೇಶನ: ಕೆ

.ಟಿ ನಾಯಕ್

ನಿರ್ಮಾಣ: ವೆಂಕಟ್

 

ದಂಡುಪಾಳ್ಯ ಸಿನಿಮಾವನ್ನು ಇದುವರೆಗೆ ಮೂರು ಭಾಗಗಳಾಗಿ ನೋಡಿದ್ದೇವೆ. ನಾಲ್ಕನೇ ಭಾಗ ಕೂಡ ಅದಕ್ಕಿಂತ ವಿಭಿನ್ನವೇನಲ್ಲ. ಇಲ್ಲಿಯೂ ಅದೇ ಕೊಲೆ ಮತ್ತು ಅತ್ಯಾಚಾರ ತುಂಬಿಕೊಂಡಿದೆ. ಆದರೆ ಹೊಸ ಕಲಾವಿದರು ಹೇಗೆ ಹೊಸ ರೀತಿಯ ಅಭಿನಯ ನೀಡಿದ್ದಾರೆ ಎನ್ನುವುದನ್ನು ಚಿತ್ರದ ಮೂಲಕ ಗಮನಿಸಬಹುದಾಗಿದೆ.

 

ಒಂದು ತಂಡಕ್ಕೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದಾಗ ಅವರನ್ನು ಹೊರಗೆ ತರಲಿಕ್ಕಾಗಿ ಹೊರಗಡೆ ಅವರ ಸ್ನೇಹಿತರ ವರ್ಗದಿಂದ ಮತ್ತೊಂದು ತಂಡ ಪ್ರಯತ್ನ ಪಡುತ್ತಿರುತ್ತದೆ. ಅವರ ಪ್ರಯತ್ನ ವಕೀಲರ ಮೂಲಕವೇ ನಡೆಯುತ್ತಿರುತ್ತದೆ. ಆದರೆ ಆ ವಕೀಲರಿಗೆ ನೀಡಬೇಕಾದ ಹಣಕ್ಕಾಗಿ ಅವರು ಮತ್ತೆ ಅದೇ ಹಳೆಯ ದಾರಿಯನ್ನೇ ಹಿಡಿಯುತ್ತಾರೆ.

 

ಹೊಸ ಮನೆಗಳಿಗೆ ಕೆಲಸಕ್ಕೆಂದು ಹೋಗುವುದು. ಹೋದ ಮನೆಗಳಲ್ಲಿ ಒಂಟಿ ಹೆಂಗಸರು ಸಮಯವಲ್ಲದ ಸಮಯದಲ್ಲಿ ವಾಪಾದು ಹೋಗಿ ನೀರು ಕೇಳಿಯೋ, ಬೇರೇನಾದರೂ ಕಾರಣ ಹೇಳಿಯೋ ಮನೆಯೊಳಗೆ ಸೇರಿಕೊಳ್ಳುವುದು ಮಾಡುತ್ತಾರೆ. ಒಳಗೆ ಬಂದೊಡನೆ ಬಾಗಿಲು ತೆರೆದಾಕೆಯ ತಲೆ ಒಡೆಯುವುದು ಮತ್ತು ಮನೆಯೊಳಗಿನ ಚಿನ್ನಾಭರಣ ದೋಚುವುದು ಅವರ ಕೆಲಸ. ತಂಡದ ಕೆಲವರು ಆ ಕೆಲಸದಲ್ಲಿ ನಿರತರಾಗಿರುವಾಗ ಉಳಿದ ಗಂಡಸರು ತಲೆ ಒಡೆದು ಬಿದ್ದಾಕೆಯನ್ನು ಅತ್ಯಾಚಾರಗೈದು ಕೊನೆಗೆ ಆಕೆಯ ಪ್ರಾಣ ತೆಗೆದು ಅಲ್ಲಿಂದ ಪರಾರಿಯಾಗುತ್ತಾರೆ. ಇಂಥ ಹಲವಾರು ಘಟನೆಗಳು ಒಂದರ ಹಿಂದೊಂದಾಗಿ ನಡೆಯುತ್ತವೆ. ಮತ್ತು ಅಂತ್ಯದಲ್ಲಿ ಈ ಹಂತಕರಿಗೂ ಸರಿಯಾದ ಶಾಸ್ತಿಯಾಗುತ್ತದೆ ಎನ್ನುವುದೇ ಚಿತ್ರದ ಕತೆ.

 

ಚಿತ್ರದಲ್ಲಿ ತಂಡದ ದಂಡುಪಾಳ್ಯದ  ಸದಸ್ಯೆಯಲ್ಲೊಬ್ಬಳಾದ ಸುಂದರಿಯಾಗಿ ಸುಮನ್ ರಂಗನಾಥ್ ನಟಿಸಿದ್ದಾರೆ. ನಾಯಕಿಯಾಗಿ  ಮಾತ್ರ ನೋಡಿರುವ ಪ್ರೇಕ್ಷಕರಿಗೆ ಖಳನಾಯಕಿಯಾಗಿ ಸುಮನ್ ನಟನೆ ವಿಭಿನ್ನ ಅನುಭವ ನೀಡುತ್ತದೆ. ಮಿಷಿನ್ ರಾಜಣ್ಣನಾಗಿ ರಾಕ್ಲೈನ್ ಸುಧಾಕರ್, ಪೊಲೀಸ್ ಅಧಿಕಾರಿ ಜಗಪತಿಯಾಗಿ ರವಿಶಂಕರ್ ನಟನೆ ಗಮನ ಸೆಳೆಯುತ್ತದೆ. ರಸಿಕರನ್ನು ರಂಜಿಸಲು ಮುಮೈತ್ ಖಾನ್  ಐಟಂ ಡ್ಯಾನ್ಸ್ ಇದೆ. ನಿರ್ಮಾಪಕ‌ ವೆಂಕಟ್ ಚಿತ್ರದಲ್ಲಿ ಖುದ್ದು ದಕ್ಷ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ.

ವೀಣಾ ಪೊನ್ನಪ್ಪ, ವಿಕ್ಟರಿ ವಾಸು ಮೊದಲಾದವರ ತಾರಾಗಣ ಇರುವ ಈ ಚಿತ್ರ ಒಂದು ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುವುದರಲ್ಲಿ ಸಂದೇಹವಿಲ್ಲ.

Copyright@2018 Chitralahari | All Rights Reserved. Photo Journalist K.S. Mokshendra,