Nam Gani B.Com.Film Review.

Friday, November 15, 2019

ನಮ್  ಗಣಿ ಕಥೆ ವ್ಯಥೆ

         ಕಷ್ಟ ಪಟ್ಟರೆ ಸುಖವುಂಟು ಎನ್ನುವಂತೆ  ‘ನಮ್ ಗಣಿ ಬಿ.ಕಾಂ ಪಾಸ್’ ಚಿತ್ರದ ಕತೆಯು ಇದೇ ರೀತಿ ಇರಲಿದೆ.  ಕಥಾನಾಯಕ ಪದವಿ ಪಡೆದುಕೊಂಡು ಕೆಲಸ ಸಿಗದೆ ನಿರುದ್ಯೋಗಿಯಾಗಿರುತ್ತಾನೆ. ಹಲವು ಸಂದರ್ಶನಗಳಿಗೆ  ಹೋಗಿಬಂದರೂ ಫಲಿತಾಂಶ ಮಾತ್ರ ಶೂನ್ಯ.  ಇದರಿಂದ ಮನೆಯಲ್ಲಿ, ಸಂಬಂದಿಕರು ಹಾಗೂ ಅಕ್ಕಪಕ್ಕದವರಿಂದ ಸದಾ ನಿಂದನೆಗೆ ಒಳಗಾಗುತ್ತಿರುತ್ತಾನೆ. ಇದರ ಮಧ್ಯೆ ಇವನ ಬದುಕಿನಲ್ಲಿ ಇಬ್ಬರು ಹುಡುಗಿಯರ ಪ್ರವೇಶವಾಗುತ್ತದೆ. ಇವರಿಂದಲಾದರೂ ಜೀವನದಲ್ಲಿ ಸೆಟ್ಲ್ ಆಗಬಹುದೆಂದು ನಿರೀಕ್ಷಿಸಿದ್ದ ಕನಸು ಭಂಗವಾಗುತ್ತದೆ. ಒಬ್ಬಳು ಇವನ ಹತ್ತಿರ ಹಣವಿಲ್ಲವೆಂದು  ಕ್ಯಾತೆ ತೆಗೆದು ದೂರ ಹೋಗುತ್ತಾಳೆ. ಮತ್ತೋಬ್ಬಳು  ಡ್ರಗ್ಸ್ ದಂದೆಯವಳು. ಇದಕ್ಕೂ ಮುನ್ನ ಕಾಲೇಜು ವಯಸ್ಸಿನಲ್ಲಿರುವಾಗ ಹೈಸ್ಕೂಲ್ ಹುಡುಗಿಯೊಬ್ಬಳು ಇವನನ್ನು  ಪ್ರೀತಿಸುತ್ತಾಳೆ. ಇವಳಿಗೆ ಬುದ್ದಿವಾದ ಹೇಳಿದರೆ ಕೇಳದೆ ಹೋದಾಗ, ಮೊದಲು ವಿದ್ಯಾಭ್ಯಾಸ ಮುಗಿಸು.  ನಂತರ ನೋಡುವ ಎಂದು ತಪ್ಪಿಸಿಕೊಳ್ಳಲು  ಪ್ರಯತ್ನಿಸಿದಾಗ, ಇವನಿಂದ ಭಾಷೆ ತೆಗೆದುಕೊಂಡು ಓದಿನ ಕಡೆ ಗಮನ ಹರಿಸುತ್ತಾಳೆ.  ಮುಂದೆ ಹೇಗೆ ಸಿಗುತ್ತಾಳೆ, ಇವನ ಬದುಕು ಹೇಗೆ ಸುಖಾಂತ ಕಾಣುತ್ತದೆ ಎಂಬುದನ್ನು ಹಾಸ್ಯ ರೂಪದಲ್ಲಿ ಚೆನ್ನಾಗಿ ತೋರಿಸಲಾಗಿದೆ.  

       ನಾಯಕ ಅಭಿಷೇಕ್‌ಶೆಟ್ಟಿ  ನಟಿಸುವ ಜೊತೆಗೆ ನಿರ್ದೇಶನದ ಜವಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿದ್ದಾರೆ. ಐಶಾನಿಶೆಟ್ಟಿ ನಾಯಕಿಯಾಗಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರಚನಾದಶರಥ, ಪವಿತ್ರಾಗೌಡ, ದಲ್ಲಾಳಿಯಾಗಿ ಸುಚೇಂದ್ರಪ್ರಸಾದ್, ಪೋಷಕರಾಗಿ ಮಂಜುನಾಥಹೆಗ್ಗಡೆ,ಸುಧಾಬೆಳವಾಡಿ ಸಣ್ಣ ಪಾತ್ರವಾದರೂ ಗಮನ ಸೆಳೆಯುತ್ತಾರೆ. ಇಡೀ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ನಾಟ್ಯರಂಗ ಇವರೂ ಸಹ ನಾಟಕದ ಹಿನ್ನಲೆಯಿಂದ ಬಂದವರಾಗಿದ್ದರಿಂದ ಗೆಳಯನಾಗಿ ನಗಿಸುತ್ತಾರೆ.  ಇವರ ಮೂಲಕ ಮತ್ತೋಬ್ಬ ಹಾಸ್ಯ ಕಲಾವಿದ ಹುಟ್ಟುಕೊಂಡಿದ್ದಾರೆ. ವಿಕಾಸ್ ವಸಿಷ್ಟ ಸಂಗೀತದ ಎರಡು ಹಾಡುಗಳಿಗಿಂತ ರಿತ್ವಿಕ್‌ಮುರಳಿಧರ್ ಹಿನ್ನಲೆ  ಶಬ್ದ  ನೋಡುಗರ ಆಸಕ್ತಿಯನ್ನು ಹುಟ್ಟಿಸುತ್ತದೆ. ನಾಗೇಶ್‌ಕುಮಾರ್.ಯು.ಎಸ್. ನಿರ್ಮಾಣದ ಎರಡನೆ ಪ್ರಯತ್ನಕ್ಕೆ ಫಲ ಸಿಕ್ಕಿದೆ ಎನ್ನಬಹುದು. 

 

 

Copyright@2018 Chitralahari | All Rights Reserved. Photo Journalist K.S. Mokshendra,