Kaalidaasa Kannada Mestru.Film Review.

Friday, November 22, 2019

1075

   

ಶಿಕ್ಷಣ ವ್ಯವಸ್ಥೆಗೆ ಕಾಳಿದಾಸನೇ ನಾಯಕ

          ಜಗ್ಗೇಶ್ ಚಿತ್ರವೆಂದರೆ ಅಲ್ಲಿ ಭರಪೂರ ನಗು ಇರುತ್ತದೆ. ಆದರೆ  ‘ಕಾಳಿದಾಸ ಕನ್ನಡ ಮೇಷ್ಟ್ರು’ ಸಿನಿಮಾದಲ್ಲಿ ಅವರು ನಗಿಸಿ, ಅಳಿಸಿ ಶಿಕ್ಷಣ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಪಾತ್ರದಲ್ಲಿ ಅದ್ಬುವಾಗಿ ನಟಿಸಿದ್ದಾರೆ.  ಪ್ರಚಲಿತ ಸ್ಥಿತಿಯಲ್ಲಿ ಪೋಷಕರಾದವರು ಮಕ್ಕಳಿಗೆ ಸ್ವಾತಂತ್ರ ನೀಡದೆ  ಕೇವಲ ಓದು ಎಂದು ಹೇಳುತ್ತಿರುತ್ತಾರೆ. ಅಲ್ಲದೆ ತಮ್ಮ ಸಾಮರ್ಥ್ಯ ಮೀರಿ ಮಕ್ಕಳನ್ನು ದೊಡ್ಡ ಶಾಲೆಗಳಿಗೆ ಸೇರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ. ಆರ್‌ಟಿಈ ದುರುಪಯೋಗ, ಶಿಕ್ಷಣ ವ್ಯವಸ್ಥೆ ಸಮಸ್ಯೆಯಿಂದ ಮದ್ಯಮ ವರ್ಗದ ಜನರು  ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಮತ್ತೋಂದು ಕಡೆ ಹೊಸ ತಲೆಮಾರಿನ ಶಿಕ್ಷಕರು ಇದರ ವ್ಯವಸ್ಥೆಯಿಂದ  ಹೈರಾಣಾಗುತ್ತಿದ್ದಾರೆ.  ಸಿನಿಮಾ ನೋಡಿ ಹೊರಬರುವ ಪ್ರೇಕ್ಷಕರು ಮಕ್ಕಳನ್ನು  ಇದೇ ರೀತಿ ನೋಡಿಕೊಳ್ಳಬೇಕೆಂದು ಸಣ್ಣ ಮಟ್ಟದ ಬದಲಾವಣೆ ಆಗಬಹುದು, ಸರ್ಕಾರಕ್ಕೂ ಮಹತ್ವದ ಸಂದೇಶ ಹಾಗೂ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಂತೆ ಪೂರಕವಾಗಿ ಕಾಳಿದಾಸ ನಿಜವಾಗಲೂ ವಿಭಿನ್ನವಾಗಿ ಕಾಣಿಸುತ್ತಾರೆ.

          ನಿರ್ದೇಶನ ಜೊತೆಗೆ ಕತೆ,ಸಾಹಿತ್ಯ ಬರೆದಿರುವ ಕವಿರಾಜ್ ಇಲ್ಲಿ ಸಮಾಜ ಮತ್ತು ಶಿಕ್ಷಣ ವ್ಯವಸ್ಥೆಯನ್ನು ತೋರಿಸಿರುವುದು ಪ್ರಶಂಶಿಸಬಹುದು. ಇವರಿಗೆ ಶಕ್ತಿ ತುಂಬಲು ಕನ್ನಡ ಶಿಕ್ಷಕನಾಗಿ ಜಗ್ಗೇಶ್ ಪ್ರಸಕ್ತ ಶಿಕ್ಷಣ ವ್ಯವಸ್ಥೆ ವಿರುದ್ದ ಹೋರಾಡುವ ಪಾತ್ರದಲ್ಲಿ ನಗಿಸಿ ಅಳಿಸುತ್ತಾರೆ.  ವ್ಯತಿರಿಕ್ತ ಸ್ವಭಾವದವಳಾಗಿ ಮೇಘನಾಗಾಂವ್ಕರ್ ನಾಯಕಿ.   ಪ್ರಾಂಶುಪಾಲರಾಗಿ ಅಂಬಿಕಾ, ಮುಖ್ಯಮಂತ್ರಿ ಆಗಿ ಟಿ.ಎಸ್.ನಾಗಭರಣ, ಸಚಿವರಾಗಿ ಸುರೇಶ್‌ಚಂದ್ರ, ಶಿಕ್ಷಣ ಮಂತ್ರಿಯಾಗಿ ಸುಂದರ್, ಬಿಇಓ ಆಗಿ ಯತಿರಾಜ್, ಕುಡುಕನಾಗಿ ತಬಲನಾಣಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.  ಒಂದು ಹಾಡಿನಲ್ಲಿ ೧೯ ನಾಯಕಿಯರು ಹೆಜ್ಜೆ ಹಾಕಿದ್ದಾರೆ. ಎರಡು ಹಾಡಿಗೆ ಗುರುಕಿರಣ್ ಸಂಗೀತ ಪರವಾಗಿಲ್ಲ, ಪೋಷಕರು ಮಕ್ಕಳೊಂದಿಗೆ ನೋಡಬಹುದಾದ ಸಿನಿಮಾ ಎನ್ನ ಬಹುದು. 

 

Copyright@2018 Chitralahari | All Rights Reserved. Photo Journalist K.S. Mokshendra,