Vijaykiran(Film Director)

Monday, October 22, 2018

496

ನಿರ್ದೇಶಕನಾಗಲು ಅನುಭವ ಅನಾವಶ್ಯಕ ವಿಜಯ್‌ಕಿರಣ್

ಚಂದನವನದಲ್ಲಿ ಹಲವರ ಬಳಿ ಕೆಲಸ ಕಲಿತು ಬಂದರೆ ನಿರ್ದೇಶಕನಾಗಲು ಸಾಮರ್ಥ್ಯ ಹೊಂದಿರುತ್ತಾನೆ ಎಂಬುದು ಹಿರಿಯರು ಹೇಳುವ ಅನುಭವದ ನುಡಿ. ಆದರೆ ವಿಜಯ್‌ಕಿರಣ್ ಎಂಬುವರು ಯಾರ ಹತ್ತಿರ ಸಹಾಯಕರಾಗಿ ಇರದೆ ಏಕ್‌ದಂ ‘ರಾಮ್‌ಲೀಲಾ’ ಎನ್ನುವ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅನುಭವ ಇಲ್ಲದೆ ನಿರ್ದೇಶನ ಮಾಢುವುದು ಕಷ್ಟ ಆಗುವುದಿಲ್ಲವೆ ಎಂದು ಪ್ರಶ್ನೆ ಹಾಕಿದಾಗ, ಶಿವ ಚಿತ್ರವನ್ನು ರಾಮ್‌ಗೋಪಾಲ್‌ವರ್ಮಾ ಯಾವುದೆ ಪೂರ್ವಪರ ಹೊಂದಿರದೆ ನಿರ್ದೇಶನ ಮಾಢಿ ಯಶಸ್ಸು ಗಳಿಸಿದ್ದಾರೆ. ಅದೇ ರೀತಿ ನಾನು ಅಂತ ಅವರಿಗೆ ಹೋಲಿಕೆ ಮಾಡಿ ಸಮಂಜಸ ಉತ್ತರ ಕೊಡುತ್ತಾರೆ. ಹಾಗಂತ ಚಿತ್ರರಂಗ ಇವರಿಗೆ ಹೊಸತು ಅಲ್ಲ. ಬಯಲು ಸೀಮೆ ಎಂದು ಕರೆಯುವ ಬಳ್ಳಾರಿಯಿಂದ ಹದಿನೈದು ವರ್ಷಗಳ ಹಿಂದೆ ಗಾಂದಿನಗರಕ್ಕೆ ಪಾದಾರ್ಪಣೆ ಮಾಡಿ ಹಲವು ವಿಭಾಗಗಳಲ್ಲಿ ಕೈಯಾಡಿಸಿ ಮೊದಲಬಾರಿ ಗಿಲ್ಲಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಗೆಳೆಯ ಸೌಂದರ್ಯಜಗದೀಶ್ ನಿರ್ಮಾಣ ಮಾಡಿದ ಮಸ್ತ್‌ಮಜಾಮಾಡಿ, ಅಪ್ಪುಪಪ್ಪು, ಸ್ನೇಹಿತರು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಸದ್ಯ ಕನ್ನಡ,ಹಿಂದೆ, ತೆಲುಗು ಭಾಷೆಯಲ್ಲಿ ಚಿತ್ರವನ್ನು ನಿರ್ದೇಶನ ಮಾಢುತ್ತಿದ್ದಾರೆ. ಹಿಂದಿಯಲ್ಲಿ ಮಿಥುನ್‌ಚಕ್ರವರ್ತಿ ಮಗ ನಾಯಕ, ಕನ್ನಡದಲ್ಲಿ ಶ್ರೀನಗರಕಿಟ್ಟಿ. ನಾಯಕಿ ತಿಯಾಬಾಜ್‌ಪೈ ಆಯ್ಕೆಯಾಗಿದ್ದಾರೆ. ಇದರ ಮಧ್ಯೆ ಜಗದೀಶ್‌ರವರಿಗೆ ೩ಡಿ ಸಿನಿಮಾ ನಿರ್ದೇಶನ ಮಾಢಬೇಕಾಗಿತ್ತು. ಅದು ವಿಳಂಬವಾಗುತ್ತಿರುವುದರಿಂದ ಆ ಸಮಯದಲ್ಲಿ ತುರ್ತು ಸಿನಿಮಾ ಮಾಡಲು ಯೋಜನೆ ಹಾಕಿಕೊಂಡಿದ್ದರಿಂದ ತೆಲುಗು ಹಿಟ್ ಲೌಕ್ಯಂ ಚಿತ್ರವನ್ನು ಕನ್ನಡಕ್ಕೆ  ರಾಮ್‌ಲೀಲಾ ಹೆಸರಿನಲ್ಲಿ ತೆರೆಗೆ ತರಲು ಸಿದ್ದಮಾಡಿದ್ದಾರೆ. ಮುಂದಿನ ಸಲ ಸ್ವಮೇಕ್ ಚಿತ್ರಕ್ಕೆ ತಯಾರಿ ಮಾಡಿಕೊಳ್ಳುತ್ತೇನೆ ಎನ್ನುತ್ತಾರೆ ವಿಜಯ್‌ಕಿರಣ್ ಉರುಫ್ ಪ್ರತಾಪ್.

Copyright@2018 Chitralahari | All Rights Reserved. Photo Journalist K.S. Mokshendra,