Ajay Rao At"Sadanimmondige"

Thursday, November 22, 2018

705

ವಾರದ ಸದಾ ನಿಮ್ಮೋಂದಿಗೆಯಲ್ಲಿ ಕೃಷ್ಣ ಅಜಯ್ ರಾವ್

 ಇದೇ ಭಾನುವಾರ (೨೫.೧೧.೧೮) ರಾತ್ರಿ ೯ಕ್ಕೆ

 

ಸದಾ ನಿಮ್ಮೊಂದಿಗೆ ಕಾರ್ಯಕ್ರಮದ ಕಳೆದ ಸಂಚಿಕೆಯಲ್ಲಿ ಹರಿಪ್ರಿಯಾ ಅವರು ರೈತ ಕುಟುಂಬಕ್ಕಾಗಿ ಫ್ರೂಟ್ ಸಲಾಡ್ ಮಾರಾಟ ಮಾಡಿ ಸಹಾಯ ಮಾಡಿದ್ದರು.

 

ಅದೇ ರೀತಿ ವಾರದ ಕಾರ್ಯಕ್ರಮದಲ್ಲಿ "ಅಜಯ್ ರಾವ್" ಭಾಗವಹಿಸಿದ್ದಾರೆ. ಚಂದನ್ ಎಂಬ ಹುಡುಗ ಒಬ್ಬ ವಿಕಲಚೇತನ.ಚಿಕ್ಕವನಿದ್ದಾಗ ರೈಲ್ವೆಯಿಂದ ಇಳಿಯುವ ರಭಸದಲ್ಲಿ ತನ್ನ ಎರಡು ಕಾಲುಗಳನ್ನು ಕಳೆದುಕೊಂಡಿದ್ದಾನೆ. ಚನ್ನಪಟ್ಟಣದಲ್ಲಿ ಓದುತ್ತಿರುವ ಈತನಿಗೆ ಮುಂದಿನ ವಿದ್ಯಾಭ್ಯಾಸ ಮಾಡಲು ತೊಂದರೆಯಿದೆ.

ಆದ ಕಾರಣ ಚಂದನ್ಗೆ ಸಹಾಯ ಮಾಡಲು ಅಜಯ್ ರಾವ್ ಟೀ/ಕಾಫಿ ಮಾರಿದ್ದಾರೆ. ರಾಮಕೃಷ್ಣ ಆಶ್ರಮದ ಮುಂದೆ ಅಜಯರಾವ್ ಟೀ/ಕಾಫಿ ಮಾರಿ ಸಂಗ್ರಹಿಸಿದ ಒಟ್ಟು ಹಣ ಎಷ್ಟು? ಎಂಬುದನ್ನು ವಾರದ ಸಂಚಿಕೆಯಲ್ಲಿ ನೋಡಬಹುದು.

 

"ಸದಾ ನಿಮ್ಮೊಂದಿಗೆ" ಇದೇ ಭಾನುವಾರ ರಾತ್ರಿ ೯ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

 

Copyright@2018 Chitralahari | All Rights Reserved. Photo Journalist K.S. Mokshendra,