Chanrakumari.Udaya Tv

Wednesday, January 02, 2019

649

 

ಉದಯ ಟಿವಿಯಲ್ಲಿ ಹೊಸ ಧಾರಾವಾಹಿ "ಚಂದ್ರಕುಮಾರಿ"

ಜನವರಿ ೭ರಿಂದ ರಾತ್ರಿ .೦೦ಕ್ಕೆ

 

ಅದ್ದೂರಿ ಧಾರಾವಾಹಿಗಳಿಂದ ಮನೆಮಾತಾಗಿರುವ ಉದಯ ಟಿವಿ ಈಗ ಮತ್ತೊಂದು ಹೊಸ ಧಾರಾವಾಹಿಯನ್ನು ಕನ್ನಡದ ಕಿರುತೆರೆಗೆ ತರಲು ಸಿದ್ಧವಾಗಿದೆ. ತಾಯಿ ಹಾಗೂ ಮಗಳ ನಡುವಿನ ಶತಮಾನಗಳ ಹಿಂದಿನ ಸಂಘರ್ಷದ ಕಥಾಹಂದರ ಹೊಂದಿರುವ ಚಂದ್ರಕುಮಾರಿ ಧಾರಾವಾಹಿ  ಇದೇ ಜನವರಿ ರಿಂದ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ ಗಂಟೆಗೆ ಪ್ರಸಾರವಾಗಲಿದೆ.

ಶತಮಾನಗಳ ಹಿಂದೆ ನಡೆದು ಹೋಗಿದ್ದ್ದ ಅಮ್ಮ ಮಗಳ ನಡುವಿನ ಸಂಘರ್ಷದ ಕಥೆಗೆ ಮತ್ತೆ ಮರು ಜೀವ ಸಿಕ್ಕರೆ ಆಗಬಹುದಾದ ಘಟನೆಗಳೇನು ಎಂಬುದೇ ಚಂದ್ರಕುಮಾರಿ ಧಾರಾವಾಹಿಯ ಜೀವಾಳ. ಈಗಾಗಲೇ ನಂದಿನಿ, ಜೈ ಹನುಮಾನ್ನಂಥ ಅದ್ದೂರಿ ಧಾರಾವಾಹಿಗಳನ್ನು ನಿರ್ಮಿಸಿ ಕಿರುತೆರೆ ಲೋಕದಲ್ಲಿಯೇ ಹೊಸ ದಾಖಲೆ ಬರೆದ ಉದಯ ಟಿವಿ ಚಂದ್ರಕುಮಾರಿ ಮೂಲಕ ಮತ್ತೊಂದು ಮೈಲಿಗಲ್ಲನ್ನು ಮುಟ್ಟುವ ನಿಟ್ಟಿನಲ್ಲಿದೆ. ಹೊಸ ಕಾಲದ ಯುವ ವೀಕ್ಷಕರ ಅಭಿರುಚಿಗೆ ತಕ್ಕಂತೆ ಕಥೆ ಹೆಣೆಯಲಾಗಿದೆ. ಗುಣಮಟ್ಟದಲ್ಲೂ ಅದ್ದೂರಿತನ ಎದ್ದು ಕಾಣುತ್ತದೆ. ಕುತೂಹಲ ಕೆರಳಿಸುವ ಚಿತ್ರಕಥೆ, ಮೊನಚಾದ ಸಂಭಾಷಣೆ ಹಾಗೂ ಗುಣಮಟ್ಟದ ಚಿತ್ರೀಕರಣ, ಸಂದರ್ಭಕ್ಕೆ ತಕ್ಕಂತೆ ಬಳಸಿಕೊಂಡಿರುವ ಗ್ರಾಫಿಕ್ಸ್ಗಳು ವೀಕ್ಷಕರ ಮನರಂಜನೆಗೆ ಭರ್ಜರಿ ಸರಕು ಒದಗಿಸುತ್ತವೆ.

ಇದರ ಜೊತೆ ಸಂಬಂಧಗಳ ಮಹತ್ವ, ಪ್ರೀತಿ, ಆಕ್ಷನ್ ಎಲ್ಲವೂ ಇದ್ದು ನೋಡುಗರಿಗೆ ಖಂಡಿತವಾಗಿಯೂ ಇಷ್ಟವಾಗಲಿದೆ. ಚಂದ್ರಕುಮಾರಿ ಒಂದು ಪಕ್ಕಾ ಫ್ಯಾಂಟಸಿ ಧಾರಾವಾಹಿಯಾಗಿದ್ದು ತುಂಬಾನೆ ಕಲರ್ಫುಲ್ಲಾಗಿ ಚಿತ್ರೀಕರಿಸಲಾಗಿದೆ. ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆಯಾದ ರಡಾನ್, ಧಾರಾವಾಹಿಯನ್ನು ನಿರ್ಮಿಸುತ್ತಿದೆ. ಜೊತೆಗೆ ಖ್ಯಾತ ನಟಿ ರಾಧಿಕಾ ಶರತ್ಕುಮಾರ್ ಹಾಗೂ ನಮ್ಮ ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರು ಮತ್ತು ಕಲಾ ನಿರ್ದೇಶಕರಾದ ಅರುಣ್ ಸಾಗರ್, ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅಲ್ಲದೇ ಶೋಭಾ ನಾಯ್ಡು ಕೂಡಾ ಮುಖ್ಯ ಪಾತ್ರದಲ್ಲಿದ್ದಾರೆ.

 

 ಚಂದ್ರಕುಮಾರಿ ಇದೇ ಜನವರಿ ೭ರಿಂದ ಸೋಮವಾರದಿಂದ ಶುಕ್ರವಾರ  ರಾತ್ರಿ ೮ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,