Bigg Boss.Season-7 Reality Show Press Meet.

Thursday, October 10, 2019

692

ಬಿಗ್ ಬಾಸ್   ಬಾರಿ  ಸೆಲೆಬ್ರಿಟಿಗಳಿಗೆ  ಮೀಸಲು

       ಬಿಗ್ ಬಾಸ್ ಸೀಸನ್-೬ರಲ್ಲಿ ಸಾಮಾನ್ಯರಿಗೂ ಅವಕಾಶ ಮಾಡಿಕೊಡಲಾಗಿತ್ತು. ಈ ಬಾರಿ ಸೀಸನ್-೭ರಲ್ಲಿ  ಕೇವಲ ಸೆಲಬ್ರಿಟಿಗಳಿಗೆ ಮಾತ್ರ ಮನೆಗೆ ಸೇರಿಸಲು ತೀರ್ಮಾನಿಸಿಲಾಗಿದೆ ಎಂದು ವಾಹಿನಿ ಮುಖ್ಯಸ್ಥ ಪರಮೇಶ್ವರ್‌ಗುಂಡ್ಕಲ್ ಸುದ್ದಿಗೋಷ್ಟಿಯಲ್ಲಿ ಮಾಹಿತಿ ತಿಳಿಸಿದರು. ಅಲ್ಲದೆ ಪ್ರತಿಬಾರಿ ನಿರೂಪಕರಾಗಿ ಸುದೀಪ್ ಅವರನ್ನೆ ಆಯ್ಕೆ ಮಾಡಲು ಕಾರಣಗಳನ್ನು ನೀಡಿದರು.  ಅವರಲ್ಲಿ ಸೂಕ್ಷ ಸಂವೇದನೆ, ಸ್ಪರ್ಧಿಗಳ ಮನಸ್ಸಿನ ಸೂಕ್ಷತೆಯನ್ನು ಬುದ್ದಿವಂತಿಕೆಯಿಂದ ಗ್ರಹಿಸುವುದು, ಸ್ವಯಂಪ್ರೇರಿತವಾಗಿ ವರ್ತಿಸುವ ಚಾಣಾಕ್ಷತನ, ವ್ಯಕ್ತಿತ್ವ, ಶುದ್ದ ಕನ್ನಡ ಭಾಷೆಯನ್ನು ಪ್ರಯೋಗಿಸುವುದು, ಜನಪ್ರಿಯತೆ, ಕೊನೆಯದು ಮುಖ್ಯವಾಗಿ ಎಲ್ಲಾ ವಿಭಾಗದ ಸ್ಪರ್ಧಿಗಳನ್ನು ಅರ್ಥ ಮಾಡಿಕೊಳ್ಳುವ ಶಕ್ತಿ. ಇವೆಲ್ಲಾ ಅರ್ಹತೆ ಇರುವುದರಿಂದ ಕಳೆದ ಆರು ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಹದಿನೇಳು ಸ್ಪರ್ಧಿಗಳನ್ನು  ಹಲವು ವಿಭಾಗಗಳಲ್ಲಿ ಪರಶೀಲನೆ ನಡೆಸಿ ಅವರುಗಳ ವಯಸ್ಸು,  ಬುದ್ದಿಶಕ್ತಿ, ವಿಭಾಗ, ಜಾತಿ, ಪ್ರದೇಶ ಇದೆಲ್ಲಾವನ್ನು  ಆಯ್ಕೆ ಮಾನದಂಡದಲ್ಲಿ ಇರುತ್ತದೆ.  ಸ್ಪರ್ಧಿಗಳ ವಿವರವನ್ನು ಗುಟ್ಟಾಗಿ ಇಡಲಾಗಿದೆ. ಎಲ್ಲವು ಭಾನುವಾರ  ತಿಳಿಯಲಿದ. ಹೊಸ ಪ್ರಯತ್ನ ಎನ್ನುವಂತೆ ಬಿಗ್ ಬಾಸ್ ಅಭಿಮಾನಿಗಳಿಗಾಗಿ ಮೈಸೂರು, ಉಡುಪಿ, ಬೆಳಗಾವಿ ಮತ್ತು ಬೆಂಗಳೂರು ಆಯ್ದ ಮಾಲ್‌ಗಳಲ್ಲಿ ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ ಎಂದರು.

       ಸುದೀಪ್ ಮಾತನಾಡಿ ಸ್ಪರ್ಧಿಗಳ ಹೆಸರು ನನಗೂ ತಿಳಿದಿಲ್ಲ. ಯಾವುದೇ ಒತ್ತಡ ಇಲ್ಲದೆ ಸೆಟ್‌ಗೆ ಬರುತ್ತೇನೆ. ನೀವು ನೀವಾಗಿದ್ದರೆ ಮನೆಯಲ್ಲಿ ಹೆಚ್ಚು ಇರಬಹುದು.  ನಮ್ಮ ಸಂಸ್ಕ್ರತಿ ತಕ್ಕಂತೆ ಕಾರ್ಯಕ್ರಮ ನಡೆಸುತ್ತೇನೆ. ಕೆಲವು ಸಲ ಬೇಸರ ತರಿಸಿದ್ದು ಉಂಟು. ಮೊದಲ ಸೀಸನ್ ಸ್ಪರ್ಧಿಗಳು ಮುಗ್ದರಾಗಿದ್ದರು. ನಂತರ ಬಂದವರು ತಮ್ಮ ಗುಣವನ್ನು ಮರೆತು ಗೆಲ್ಲುವುದೊಂದೆ ಗುರಿ ಅಂದುಕೊಂಡು ಬರುತ್ತಾರೆ. ಇದರಿಂದ ಹೆಚ್ಚು ದಿನ ಮನೆಯಲ್ಲಿ ಇರಲು ಕಷ್ಟವಾಗುತ್ತದೆಂದು ಮಾಧ್ಯಮದ ಪ್ರಶ್ನೆಗೆ ಉತ್ತರವಾದರು.  ‘ಕಲರ‍್ಸ್ ಕನ್ನಡ’ ವಾಹಿನಿಯಲ್ಲಿ  ಭಾನುವಾರ ಸಂಜೆ ೬ಕ್ಕೆ ಗ್ರ್ಯಾಂಡ್ ಓಪನಿಂಗ್,  ಆ ಬಳಿಕ ಪ್ರತಿ ರಾತ್ರಿ ೯ಕ್ಕೆ ಪ್ರಸಾರವಾಗಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,