Ammanoru.Serial Udaya Tv.Press Meet.

Saturday, January 11, 2020

726

ಸಾಮಾಜಿಕ  ಪುರಾಣ  ಸಮ್ಮಿಲನ

ದೇವಿ,ಮಹಾದೇವಿ ಮೇಘಾ ಧಾರವಾಹಿಗಳನ್ನು ನಿರ್ದೇಶನ ಮಾಡಿರುವರಮೇಶ್‌ಇಂದಿರಾಗ್ಯಾಪ್ ನಂತರ ‘ಅಮ್ನೋರು’ ಸೀರಿಯಲ್‌ಗೆ ಆಕ್ಷನ್‌ಕಟ್ ಹೇಳುವ ಜೊತೆಗೆ ನಿರ್ಮಾಣವನ್ನು ಮಾಡುತ್ತಿದ್ದಾರೆ.  ಹೆಸರು ಕೇಳಿದರೆಇದೊಂದು ಭಕ್ತಿ ಪ್ರಧಾನಕತೆಯಾಗಿದ್ದರೂ ಸಾಮಾಜಿಕ ಅಂಶಗಳು ಸೇರಿಕೊಂಡಿರುತ್ತದೆ. ಸಾಕಷ್ಟು ನಾಟಕೀಯ ಸಂಬಂದಗಳ  ತಾಕಲಾಟಇದೆ. ಒಂದಷ್ಟುದುರಾಲೋಚನೆತುಂಬಿರುವ ವ್ಯಕ್ತಿಯ ಸಂಚುಗಳು ಇರುತ್ತದೆ.ಭಕ್ತಿ, ಶಕ್ತಿ, ಯುಕ್ತಿ, ಕೃತ್ತಿಮ ಇವುಗಳೊಂದಿಗೆ ಭಾವನಾತ್ಮಕ ಸನ್ನಿವೇಶಗಳು ಇರುವುದು ವಿಶೇಷ. ಒಟ್ಠಾರೆಎಲ್ಲವು ಸೇರಿಕೊಂಡಿರುವ ಪೂರ್ಣ ಮನರಂಜನೆಯ  ಪ್ಯಾಕೇಜ್.ಕತೆಯಕುರಿತು ಹೇಳುವುದಾದರೆ ಅಮ್ನೋರ ಪರಮ ಭಕ್ತರಾದ ಶಂಕರ ಮತ್ತುದಾಕ್ಷಾಯಿಣಿ ದಂಪತಿಗಳು ಅಮ್ಮನ ವಿಗ್ರಹ, ರುದ್ರಾಕ್ಷಿಯನ್ನುದುಷ್ಟರಿಂದಕಾಪಾಡುತ್ತಾರೆ.  ಇದನ್ನು ಸಹಿಸದ ಮಾಟಗಾತಿಧನಶೇಖರಿ, ಪತಿಯ ಸೋದರ ವರದಪ್ಪನಿಂದಲೇಇಬ್ಬರು ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ರುದ್ರಎನ್ನುವಆತ್ಮ ೨೭ ವರ್ಷಗಳಿಂದ ಎರಡನ್ನುಕಾಪಾಡುತ್ತಾ, ಪುನಜನ್ಮ ಪಡೆದುಕೊಂಡು ಬರುವ ಜೋಡಿಗಳಿಗಾಗಿ ಕಾಯುತ್ತಿರುತ್ತದೆ.

ಮುಂದೆ ಶಂಕರ,ದಾಕ್ಷಾಯಿಣಿಅಮ್ನೋರ ವಿಗ್ರಹ ಪ್ರತಿಷ್ಟಾಪಿಸಲು  ಮತ್ತೆ ಭೂಮಿಗೆ ಬರುತ್ತಾರಾ? ರುದ್ರಳ ಆಸೆಯು ನೆರೆವೇರುತ್ತಾ?.ತದ್ವಿರುದ್ದ ಆಲೋಚನೆಗಳನ್ನು ಹೊಂದಿರುವಯುವ ಜೋಡಿಗಳು ಜೊತೆಯಾಗಿದೇವಸ್ಥಾನಕ್ಕೆ ಬರುತ್ತಾರಾಎನ್ನುವುದುಒಂದು ಏಳೆಯ ಸಾರಾಂಶವಾಗಿದೆ.  ಶೀರ್ಷಿಕೆ ಹೆಸರಿನಲ್ಲಿ ಸುಕೀರ್ತಿ, ಯುವ ಜೋಡಿಗಳಾಗಿ ಶಶಿಧರಹೆಗಡೆ-ಅನುಶ್ರೀ, ವರದಪ್ಪನಾಗಿಕೀರ್ತಿರಾಜ್, ಪಾರ್ವತಿಅಮ್ಮನಾಗಿ ಪ್ರಥಮಾಪ್ರಸಾದ್, ಪದ್ಮಾವತಿದೇವಿಯಾಗಿರೇಖಾರಾವ್‌ಇವರೊಂದಿಗೆ ಹರ್ಷಿತಾ, ಸಂಗೀತಭಟ್, ಅನಂತುವೇಲು, ಶರ್ಮಿಳಾ, ಮಧುಹೆಗಡೆ, ರೋಹಿಣಿ, ವಿಜಯಲಕ್ಷೀ, ವಿಕ್ರಮ್ ಮುಂತಾದವರು ನಟಿಸುತ್ತಿದ್ದಾರೆ.ಈಗಾಗಲೇ ೪೦ ದಿನಗಳ ಕಾಲ ಮೇಲುಕೋಟೆ, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.ಸಂಗೀತ ಅನೂಪ್‌ಸೀಳನ್, ಛಾಯಾಗ್ರಹಣದಯಾಕರ್‌ಅವರದಾಗಿದೆ.  ಸೋಮವಾರದಿಂದ ಶನಿವಾರದವರೆಗೆರಾತ್ರಿ ೭ ಘಂಟೆಗೆಉದಯ ವಾಹಿನಿಯಲ್ಲಿ ಕಂತುಗಳುಜನವರಿ ೨೦ರಿಂದ ಪ್ರಸಾರವಾಗಲಿದೆ.

 

 

 

Copyright@2018 Chitralahari | All Rights Reserved. Photo Journalist K.S. Mokshendra,