Kavyanjali.Udaya.TV

Tuesday, July 28, 2020

584

ಉದಯ ಟಿವಿಯಹೊಸ ಧಾರಾವಾಹಿಕಾವ್ಯಾಂಜಲಿ

ಆಗಸ್ಟ್ ೩ರಿಂದ ಸೊಮವಾರದಿಂದ ಶುಕ್ರವಾರ ರಾತ್ರಿ .೩೦ಕ್ಕೆ

 

ಉದಯ ಟಿವಿ ದಿನದಿಂದ ದಿನಕ್ಕೆ ಹೊಸ ಕಥೆಗಳಿಂದ ಜನರ ಮನಸ್ಸನ್ನು ಗೆಲ್ಲೋ ಪ್ರಯತ್ನದಲ್ಲಿದೆ. ಪುಟಾಣಿಗಳಿಂದ ಹಿಡಿದು ವಯೋವೃದ್ಧರ ತನಕ ತನ್ನ ವಿನೂತನ   ಕಾರ್ಯಕ್ರಮಗಳಿಂದ ಪ್ರತಿದಿನ ಮನರಂಜನೆ ನೀಡುತ್ತಾ, ಜನರನ್ನು ಸೆಳೆಯುತ್ತಿದೆ. ವೈವಿಧ್ಯಮಯ ಧಾರಾವಾಹಿಗಳಲ್ಲಿ ಕೌತುಕಗಳ ಜೊತೆ ಸೃಜನಾತ್ಮಕ ವಿμಯಗಳಿಂದ ವೀಕ್ಷಕರಿಗೆ ರಸದೌತಣ ನೀಡಲುತಯಾರಾಗಿದೆ. ನಂದಿನಿ, ಕಸ್ತೂರಿ ನಿವಾಸ, ಸೇವಂತಿ, ಮನಸಾರೆಯಂತಹಕೌಟುಂಬಿಕ ಧಾರವಾಹಿಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ಉದಯ ಟಿವಿ, ಈಗ ಒಂದು ನವಿರಾದ ಪ್ರೇಮಕಥಾಹಂದರವಿರುವ ಹೊಸಧಾರಾವಾಹಿಯನ್ನು ಪ್ರೇಕ್ಷಕರ ಮುಂದೆ ಪ್ರಸ್ತುತ ಪಡಿಸುತ್ತಿದೆ. ಅದೇಕಾವ್ಯಾಂಜಲಿ. ಕಾವ್ಯಾಂಜಲಿ ಹೆಸರು ಕೇಳಿದಾಕ್ಷಣ ವೀಕ್ಷಕರಿಗೆ ಕುತೂಹಲ ಹುಟ್ಟುವುದಂತೂಗ್ಯಾರಂಟಿ, ಅದರಲ್ಲೂಅತಿಹೆಚ್ಚುಜನಪ್ರಿಯತೆ ಮತ್ತು ಮೆಚ್ಚುಗೆಗೆ ಪಾತ್ರವಾದ ಧಾರಾವಾಹಿ ಅಂದ್ರೆ ಸುಳ್ಳಲ್ಲ.

ಈ ಕಾವ್ಯಾಂಜಲಿ ಧಾರಾವಾಹಿಯು ಒಂದು ಪರಿಪೂರ್ಣ ಮನರಂಜನೆಯೆ ಜೊತೆಗೆ ಪರಿಶುದ್ದ ಪ್ರೀತಿಯ ಸವಿಯನ್ನು ನಿಮ್ಮ ಮುಂದಿಡಲಿದೆ. ಹೊಸ ಕಲ್ಪನೆಯತ್ರಿಕೋನ ಪ್ರೇಮಕಥೆಗೆ ಮ್ಯೂಸಿಕ್‌ನ ಮ್ಯಾಜಿಕ್‌ಟಚ್ ನೀಡಿ ಮೋಡಿ ಮಾಡಲು ಬರ್ತಿದೆ ಅಕ್ಕ ತಂಗಿ ಬಾಂಧವ್ಯದ ಕಥೆ ಕಾವ್ಯಾಂಜಲಿ. ಜಗತ್ತಿನಲ್ಲಿ ಪ್ರೀತಿಗೆ ಅತಿಹೆಚ್ಚು ಮಹತ್ವವಿದೆ, ಆದ್ರೆ ಪ್ರಾಣ ಉಳಿಸೊ ಅಮೃತದಂತಹ ಪ್ರೀತಿ ಕೆಲವೊಮ್ಮೆ ಉಸಿರು ಕಟ್ಟಿಸುತ್ತೆ. ಇಂತಹದೇ ಪ್ರೀತಿಯಲ್ಲಿ ಉಸಿರು ಕಟ್ಟಿರೊ ನಾಯಕನಿಗೆ ನಿμಲ್ಮಶ ಪ್ರೀತಿಯ ತಂಪೆರೆಯೋ ನಾಯಕಿ ಹೇಗೆ ಜೊತೆಯಾಗ್ತಾಳೆ ಅನ್ನೋದನ್ನಕಾದು ನೋಡಬೇಕಾಗಿದೆ.

ಲಾಕ್‌ಡೌನ್ ನಂತರ ಹೊಸ ಹುರುಪಿನಿಂದ ಶ್ಯಾಕ್ ಸ್ಟುಡಿಯೊ ಸಂಸ್ಥೆಯಡಿ ಶಂಕರ್ ವೆಂಕಟರಾಮನ್ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿಯನ್ನುಅನುಭವಿ ನಿರ್ದೇಶಕ ಆದರ್ಶ್ ಹೆಗಡೆ ಹೊತ್ತುಕೊಂಡಿದ್ದಾರೆ. ಈ ಹಿಂದೆ ಹಿಟ್ ಧಾರಾವಾಹಿಗಳಲ್ಲಿ ತಮ್ಮ ಕ್ಯಾಮರಾ ಕೈ ಚಳಕ ತೋರಿದ ನಿಪುಣಛಾಯಾಗ್ರಾಹಕರುದ್ರಮುನಿ ಬೆಳೆಗೆರೆ ಈ ತಂಡದ ಮತ್ತೊಬ್ಬ ಸದಸ್ಯ. ಇನ್ನμ ನುರಿತತಂತ್ರಜ್ಞರನ್ನು ಒಳಗೊಂಡಿರುವ ಕಾವ್ಯಾಂಜಲಿ ತಂಡವುಜಬರ್ದಸ್ತ್ ಮನರಂಜನೆ ನೀಡುವ ಭರವಸೆಯಲ್ಲಿದೆ.

ಕಾವ್ಯಾಂಜಲಿಯ ಮತ್ತೊಂದು ವಿಶೇμತೆಏನಂದರೆಅಂಜಲಿ ಪಾತ್ರದ ಮೂಲಕ ಸುಷ್ಮಿತಅನ್ನೋ ಹೊಸ ಪ್ರತಿಭೆ ಕನ್ನಡ ಕಿರುತೆರೆಗೆ ಪರಿಚಯವಾಗ್ತಿದೆ. ವಿದ್ಯಾಶ್ರಿ ಜಯರಾಂಕಾವ್ಯ ಪಾತ್ರ ನಿರ್ವಹಿಸುತ್ತಿದ್ದು, ಪವನ್‌ರವೀಂದ್ರಇವರಿಬ್ಬರ ನಡುವಿನ ಕೇಂದ್ರಬಿಂದು. ಕಣ್ಮಣಿಖ್ಯಾತಿಯದರ್ಶಕ್‌ಗೌಡಕೂಡ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಮಿಥುನ್ ತೇಜಸ್ವಿ, ರವಿ ಭಟ್, ಮಹಾಲಕ್ಷ್ಮಿ, ಮರಿನಾತಾರ, ರಾಮಸ್ವಾಮಿ, ನಿಸರ್ಗ, ಸಿಂಚನಾ ಕಾವ್ಯಾಂಜಲಿ ಧಾರಾವಾಹಿಯ ತಾರಬಳಗದಲ್ಲಿದ್ದಾರೆ.

ಮತ್ತೊಂದು ಪ್ರಮುಖ ಅಂಶ ಎಂದರೆ ಹಿರಿಯ ಕಲಾವಿದ ಶಂಕರ್‌ಅಶ್ವಥ್‌ಅವರು ವಿಶೇμ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಕೋವಿಡ್ ೧೯ಗೆ ಸಂಬಂಧಿಸಿದ ಹಾಗೆ ಶೂಟಿಂಗ ಸಮಯದಲ್ಲಿನ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

“ಬದಲಾಗಿದೆ ಸಮಯ, ಬದಲಾಗ್ತಿದೆ ಉದಯ”ಅನ್ನೊಅಡಿಬರಹದೊಂದಿಗೆ ಪ್ರಸಾರವಾಗ್ತಿರೋ ಮೊದಲ ಹೊಸ ಧಾರಾವಾಹಿ ಅನ್ನೊ ಹೆಗ್ಗಳಿಕೆಗೆ ಕಾವ್ಯಾಂಜಲಿ ಪಾತ್ರವಾಗ್ತಿದೆ. 

ಇದೇ ಆಗಸ್ಟ್ ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ .೩೦ಕ್ಕೆ ಉದಯ ಟಿವಿಯಲ್ಲಿ ಕಾವ್ಯಾಂಜಲಿ ತನ್ನ ಓಟ ಶುರು ಮಾಡಲಿದ್ದು ಪ್ರೇಕ್ಷಕರ ಮನಗೆಲ್ಲುವ ಭರವಸೆಯಲ್ಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,