Big Boss.Season 8 Press Meet.

Thursday, February 25, 2021

335

ಇದೇ ಭಾನುವಾರದಿಂದ ಬಿಗ್ಬಾಸ್ ಸೀಸನ್- ದರ್ಬಾರ್ ಶುರು

ಅಂದುಕೊಂಡಂತೆ ‘ಬಿಗ್ ಬಾಸ್ ಸೀಸನ್-೮’  ಕಲರ‍್ಸ್‌ಕನ್ನಡ ವಾಹಿನಿಯಲ್ಲಿ  ಫೆಬ್ರವರಿ ೨೮ರಂದು ಭಾನುವಾರ ಸಂಜೆ ೬ ಘಂಟೆಗೆ ಚಾಲನೆ ಸಿಗಲಿದೆ. ಮಾಹಿತಿಯನ್ನು ತಿಳಿಸಲು ದೊಡ್ಡ ಹೋಟೆಲ್‌ದಲ್ಲಿ ಸಣ್ಣದಾದ ಸುದ್ದಿಗೋಷ್ಟಿಯನ್ನುಕರೆಯಲಾಗಿತ್ತು.ಕಲರ‍್ಸ್‌ಕನ್ನಡ ಚಾಲನ್ ಕ್ಲಸ್ಟರ್ ಹೆಡ್ ಪರಮೇಶ್ವರಗುಂಡ್ಕಲ್‌ಮಾತನಾಡಿವಿವರಗಳನ್ನು ತೆರೆದಿಟ್ಟರು. ಈ ಬಾರಿ ಸಿನಿಮಾ, ಕ್ರೀಡೆ, ಕಿರುತೆರೆ, ರಾಜಕೀಯ ಹೀಗೆ  ವೈವಿಧ್ಯಮಯ ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರು ಮನೆಯೊಳಗೆ ಪ್ರವೇಶ ಮಾಡುವರಿದ್ದಾರೆ. 

ಈಗಾಗಲೇ ಅಷ್ಟೂ ಜನರನ್ನುಕ್ವಾರಂಟೈನ್ ಮಾಡಲಾಗಿದೆ.ಆಯ್ಕೆಯಲ್ಲಿಯಾವುದೇಒತ್ತಡ ಬಂದರೂ, ಆಯ್ಕೆ ಪ್ರಕ್ರಿಯೆಯಲ್ಲಿ ಮಾನದಂಡಗಳನ್ನು ಅನುಸರಿಸಿ ಪಾರದರ್ಶಕವಾಗಿ ಸೆಲೆಕ್ಟ್‌ಆಗಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಭಿನ್ನತೆ  ಮುಖ್ಯ ಪಾತ್ರ ವಹಿಸುತ್ತದೆ. ಕನ್ನಡ ಮತ್ತುಇಂಗ್ಲೀಷ್‌ದಲ್ಲಿ ಹ್ಯಾಶ್‌ಟ್ಯಾಗ್ ಬಳಸಿ ಜನ ಬಿಗ್‌ಬಾಸ್‌ಜೊತೆಗೆಕನೆಕ್ಟ್ ಆಗಬಹುದು. ಪ್ರತಿ ಸ್ಪರ್ಧಿಗೆಲ್ಲಲಿ  ಅಂತನೇ ಮನೆಯೊಳಗೆ ಕಳುಹಿಸುತ್ತೇವೆ. ಎಂಟನೇ ಸೀಸನ್ನು ಆದರೂಆರಂಭದಲ್ಲಿಇದ್ದಂತೆದುಗುಡಇದ್ದೇಇರುತ್ತದೆಎಂದರು.

ಕಾರ್ಯಕ್ರಮ ರೂಪುರೇಷೆಗಳ ವಿಷಯಗಳನ್ನು ಹಂಚಿಕೊಂಡ ಸುದೀಪ್, ಸ್ಪರ್ಧಿಗಳ ವಿವರದಗುಟ್ಟನ್ನು ಮಾದ್ಯಮದವರು ವರಾತ ಮಾಡಿದರೂ ಹೇಳದೆ ಜಾರಿಕೊಂಡರು.ಸಂಭಾವ್ಯ ಪಟ್ಟಿಯಲ್ಲಿರಾಗಿಣಿದ್ವಿವೇದಿ, ನಿರ್ದೇಶಕ ರವಿಶ್ರೀವತ್ಸ, ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ, ಸಮೀಕ್ಷಾ, ಸುನಿಲ್‌ರಾವ್, ರವಿಶಂಕರ್‌ಗೌಡ, ತಬಲಾನಾಣಿ ಮುಂತಾದವರ ಪಟ್ಟಿ ಲಭ್ಯವಾಗಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,