Siri Kannada Tv.Press Meet

Wednesday, May 18, 2022

460

 

*ಮೇ  23ರ ರಿಂದ ಸಿರಿ ಕನ್ನಡ ಟಿವಿಯಲ್ಲಿ  ಮೂರು ವಿಭಿನ್ನ ಧಾರಾವಾಹಿಗಳು.* 

 

ಆರಂಭವಾದ ಮೂರು ವರ್ಷಗಳಲ್ಲೇ ಸಿರಿ ಕನ್ನಡ ಟಿವಿ ತನ್ನ ಕ್ರಿಯಾತ್ಮಕ ಹಾಗೂ ವಿಶಿಷ್ಟ ಮನರಂಜನೆಯ ಮೆರವಣಿಗೆಯಲ್ಲಿ ವೀಕ್ಷಕರ ಮನ ಗೆದ್ದಿದೆ.

 

ಈ ವಾಹಿನಿಯ "ನಾರಿಗೊಂದು‌ ಸೀರೆ" , "ಲೈಫ್ ಓಕೆ", " ಟೂರಿಂಗ್‌ ಟಾಕೀಸ್" ಸೇರಿದಂತೆ ಅನೇಕ ಕಾರ್ಯಕ್ರಮಗಳು, "ಧ್ರುವ ನಕ್ಷತ್ರ", " ಪ್ರೇಮ್ ಜೊತೆ ಅಂಜಲಿ" ಯಂತಹ ಜನಪ್ರಿಯ ಧಾರಾವಾಹಿಗಳು ಜನಪ್ರಿಯವಾಗಿದೆ.

 

ಇದೇ ಇಪ್ಪತ್ತಮೂರರಿಂದ ಸಿರಿ ಕನ್ನಡ ಟಿವಿಯಲ್ಲಿ ಮೂರು ವಿಭಿನ್ನ ಕಥೆಯುಳ್ಳ ಧಾರಾವಾಹಿಗಳು ಆರಂಭವಾಗುತ್ತಿದೆ.

 

 *ಯುಗಾಂತರ*

 

"ಮಾಯಾಮೃಗ" ದಲ್ಲಿ ನಾರಾಯಣ ಮೂರ್ತಿ ಪಾತ್ರದ ಮೂಲಕ ಚಿರಪರಿಚಿತರಾಗಿದ್ದ, ಎಸ್ ಎನ್ .ಸೇತುರಾಂ, "ಮಂಥನ" ಸೇರಿದಂತೆ ಕೆಲವು ಧಾರಾವಾಹಿಗಳನ್ನು ನಿರ್ದೇಶಿಸಿರುವರು. ಹದುಮೂರು ವರ್ಷಗಳ ನಂತರ ಎಸ್ ಎನ್ ಸೇತುರಾಂ ಅವರು ಸಿರಿ ಕನ್ನಡ ವಾಹಿನಿಗಾಗಿ "ಯುಗಾಂತರ" ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ.

 

ನಾನು ನಿರ್ದೇಶನ ಮಾಡಿ ಹಲವು ವರ್ಷಗಳೇ ಆಗಿವೆ. ಈ ವಾಹಿನಿಯವರು ನನಗೊಂದು ಧಾರಾವಾಹಿ ನಿರ್ದೇಶಿಸುವಂತೆ ಹೇಳಿದರು. ವಾಹಿನಿಯವರು ಎಲ್ಲಾ ಜವಾಬ್ದಾರಿ ನನಗೆ ನೀಡಿದ್ದಾರೆ. ಇದರಿಂದ ಸ್ವತಂತ್ರವಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ.

ಅರುಂಧತಿ ಎಂಬ ಜಿಲ್ಲಾಧಿಕಾರಿ ಪಾತ್ರದ ಸುತ್ತ ನಡೆಯುವ ಸಾಮಾಜಿಕ ಹಾಗೂ ಭಾವ ಸಂಘರ್ಷದ ಸುತ್ತ ನಡೆಯುವ ಕಥೆ ಇದಾಗಿದೆ . ಇದೇ ಇಪ್ಪತ್ತಮೂರರಿಂದ ರಾತ್ರಿ 9.30 ಕ್ಕೆ ಪ್ರಸಾರವಾಗಲಿದೆ . ನೋಡಿ. ಪ್ರೋತ್ಸಾಹ ನೀಡಿ ಎಂದರು ಎಸ್ ಎನ್ ಸೇತುರಾಂ.

 

ಜಿಲ್ಲಾಧಿಕಾರಿ ಪಾತ್ರಧಾರಿ ದಿವ್ಯ ಕಾರಂತ್ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.

 *ರಿಜಿಯಾ ರಾಮ್*

 

ಧರ್ಮ ಎಲ್ಲಕ್ಕೂ ಮಿಗಿಲು ಎಂಬ ಭಾವ ಭಾರತದ ಮಣ್ಣಿನಲ್ಲಿ ಆಳವಾಗಿ ಬೇರೂರಿದೆ. ಆದರೆ ಧರ್ಮಕ್ಕೂ ಮಿಗಿಲಾದ ವಿಶಿಷ್ಟ ಪ್ರೇಮಕಥೆಯ "ರಜಿಯಾ ರಾಮ್" ಮೆಗಾ ಧಾರಾವಾಹಿಯಾಗಿ ಇದೇ 23ರಿಂದ ರಾತ್ರಿ 7.30ಕ್ಕೆ  ಪ್ರಸಾರವಾಗಲಿದೆ.  ಈಗಾಗಲೇ 20ದಿನಗಳ ಕಾಲ ಮೈಸೂರು, ಮಂಡ್ಯ, ಮೇಲುಕೋಟೆಯಲ್ಲಿ ಚಿತ್ರೀಕರಣ ಮಾಡಿದ್ದೇವೆ.

ರಾಮ್ ಪಾತ್ರ ಮಾಡುತ್ತಿರುವ

ಅಥರ್ವ,  ಬ್ರಾಹ್ಮಣರ ಹುಡುಗ. ಆರ್ ಎಸ್ ಎಸ್ ನ ವಿದ್ಯಾರ್ಥಿ ಕೂಡ‌. ರಾಜಿಯಾ ಪಾತ್ರಧಾರಿ ಶಿಲ್ಪ ಲಾಯರ್ ಆಗುವ ಕನಸು ಹೊತ್ತು ಮನೆಬಿಟ್ಟು ಬರುತ್ತಾಳೆ. ಇದೇ ಧಾರಾವಾಹಿಯ ಕಥಾಹಂದರ. ಕಥೆ ಸಿರಿ ಕನ್ನಡ ವಾಹಿನಿಯವರದೆ. ನಿರ್ದೇಶನ ಮಾತ್ರ ನನ್ನದು ಎನ್ನುತ್ತಾರೆ ನಿರ್ದೇಶಕ ಸುಧಾಕರ್ ರೆಡ್ಡಿ ಗೋಪೇನಹಳ್ಳಿ.

 

ನಾಯಕ ಅಥರ್ವ ಹಾಗೂ ನಾಯಕಿ ಶಿಲ್ಪ ಸಹ ಪಾತ್ರದ ಬಗ್ಗೆ ಮಾತನಾಡಿದರು.

 

 *ಮರೆತು ಹೋದವರು*

 

ಈಗಿನ ಯುವಕರಿಗೆ ಸಂಬಂಧಿಕರು ಯಾರು ಎಂಬುದು ಹೆಚ್ಚಾಗಿ ಗೊತ್ತಿರಲ್ಲ. ಎಷ್ಟೋ ದಿನಗಳು ಒಬ್ಬರನೊಬ್ಬರು ನೋಡಿರುವುದಿಲ್ಲ. ಸಂಬಂಧಗಳೇ ಇಲ್ಲ ಅಂದ ಮೇಲೆ ಸಂಭ್ರಮ ಎಲ್ಲಿರತ್ತೆ ? ಮರೆಯಾದ ಸಂಬಂಧಗಳನ್ನು ಒಂದುಗೂಡಿಸಿ ಮದುವೆ ಮಾಡಿಕೊಳ್ಳುವ ಆಶಯ ಇಲ್ಲಿನ ಯುವ ಜೋಡಿಯದು. ಮರೆತು ಹೋದ ಸಂಬಂಧಗಳ ಹುಡುಕಾಟವೇ "ಮರೆತುಹೋದವರು" ಎಂದು ನಿರ್ದೇಶಕ ಮಧುಸೂದನ್ ತಿಳಿಸಿದರು‌.

 

ಮುಖ್ಯ ಪಾತ್ರಧಾರಿಗಳಾದಾ ನಿಖಿಲ್ ಹಾಗೂ ಸಿರಿ ಅವರು "ಮರೆತುಹೋದವರು" ಧಾರಾವಾಹಿ ಬಗ್ಗೆ ಮಾತನಾಡಿದರು. ಈ ಧಾರಾವಾಹಿ ಇದೇ 23 ರಿಂದ ರಾತ್ರಿ 9 ಕ್ಕೆ ಪ್ರಸಾರವಾಗಲಿದೆ.

 

 *ಸಂಸ್ಥಾಪಕ ನಿರ್ದೇಶಕ ಸಂಜಯ್ ಶಿಂಧೆ*

 

ಸಿರಿ ಕನ್ನಡ ಟಿವಿ ನಮ್ಮ ಮನುರಂಜನೆ ಎಂಬ ಉದ್ದೇಶ ಹೊತ್ತುಕೊಂಡು ಕನ್ನಡಿಗರಿಂದ ಕನ್ನಡಿಗರಿಗಾಗಿಯೇ  ಇರುವ ವಾಹಿನಿ. ಉತ್ತಮ ಧಾರಾವಾಹಿ ಹಾಗೂ ಕಾರ್ಯಕ್ರಮ ನೀಡುವುದೇ ನಮ್ಮ ಧ್ಯೇಯ. ಈ ಮೂರು ಧಾರಾವಾಹಿಗಳ ಕಥೆಗಳು ವಿಭಿನ್ನವಾಗಿದೆ. ಯಾವ ಪಂಗಡಕ್ಕಾಗಲಿ ಅಥವಾ ವ್ಯಕ್ತಿಗಾಗಲಿ ಯಾವುದೇ ರೀತಿಯ ಬೇಸರ ತರುವ ಅಂಶಗಳು ನಮ್ಮ ಧಾರಾವಾಹಿಗಳಲಿಲ್ಲ. ಮನರಂಜನೆಗೆ ಹೆಚ್ಚು ಒತ್ತು ಕೊಡುತ್ತೇವೆ ಎಂದು ಸಿರಿ ಕನ್ನಡದ ಸಂಸ್ಥಾಪಕ ನಿರ್ದೇಶಕ ಸಂಜಯ್ ಶಿಂಧೆ ತಿಳಿಸಿದರು.

 

ಮುಂದೆ ರಾಘವೇಂದ್ರ ರಾಜಕುಮಾರ್ ಅವರ ನಿರ್ಮಾಣದ "ವಿಜಯ ದಶಮಿ" ಸೇರಿದಂತೆ ಹಲವು ಧಾರಾವಾಹಿ ಆರಂಭವಾಗಲಿದೆ ಎಂದರು ವಾಹಿನಿಯ ಮುಖ್ಯಸ್ಥ ರಾಜೇಶ್ ರಾಜಘಟ್ಟ.

Copyright@2018 Chitralahari | All Rights Reserved. Photo Journalist K.S. Mokshendra,