ಮಂಜನಿಗೆ ಕಮಲಿ ಅಂದರೆ ಪ್ರಾಣ
ಪ್ರೀಮಿಯರ್ ಪದ್ಮಿನಿ, ಮತ್ತೆ ಉದ್ಬವ ಚಿತ್ರಗಳಲ್ಲಿ ಗುರುತಿಸಿಕೊಂಡಿದ್ದ ಪ್ರಮೋದ್ ‘ಇಂಗ್ಲೀಷ್ ಮಂಜ’ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದಾರೆ. ‘ಕೋಲಾರ’ ಚಿತ್ರ ನಿರ್ದೇಶನ ಮಾಡಿದ್ದ ಆರ್ಯ.ಎಂ.ಮಹೇಶ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರೌಡಿಸಂ ಹಿನ್ನಲೆ ಇರುವ ಕತೆಯಲ್ಲಿ ನವಿರಾದ ಪ್ರೀತಿ ಇರಲಿದೆ. ಆತ ಇಂಗ್ಲೀಷ್ ವಿಷಯದಲ್ಲಿ ಅನುತ್ತೀರ್ಣ ನಾಗುತ್ತಿರುವುದರಿಂದ ಶೀರ್ಷಿಕೆಯಲ್ಲಿ ಕರೆಯುತ್ತಿರುತ್ತಾರೆ. ಮಚ್ಚು, ಲಾಂಗ್ ಇದ್ದರೂ ಅದನ್ನು ವಿಭಿನ್ನವಾಗಿ ತೋರಿಸುವುದು ವಿಶೇಷ. ಕೋಲಾರದ ಕಠಾರಿಪಾಳ್ಯದಲ್ಲಿ ನಡೆಯುವ ಸನ್ನಿವೇಶಗಳು ಬೆಂಗಳೂರಿಗೂ ವಿಸ್ತಾರಗೊಳ್ಳಲಿದೆ. ಅದಕ್ಕಾಗಿ ಎರಡು ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ಕಮಲಿಯಾಗಿ ತೇಜಸ್ವಿನಿಶರ್ಮ ನಾಯಕಿ. ಬೆಂಗಳೂರಿನ ವಿದ್ಯಾರ್ಥಿನಿ ಪಾತ್ರವಾಗಿದ್ದರೂ, ಹಿನ್ನಲೆಯು ಕೋಲಾರಕ್ಕೆ ಹೊಂದಿಕೊಂಡಿರುತ್ತದೆ. ಉಳಿದಂತೆ ಶರತ್‌ಲೋಹಿತಾಶ್ವ, ಖುಷಿ, ಕಿರುತೆರೆಯ ಸಂದೀಪ್, ಪಿ.ಮೂರ್ತಿ ಅಲ್ಲದೆ ನಿರ್ದೇಶಕರಗಳಾದ ವಿಕ್ಟರಿವಾಸು,ನಾಗೇಂದ್ರಅರಸ್, ರವಿತೇಜ, ಮಂಜುದೈವಜ್ಘ, ಸೇರಿದಂತೆ ೮ ತಂತ್ರಜ್ಘರು ನಟಿಸುತ್ತಿರುವುದು ವಿಶೇಷ.
ನಿರ್ದೇಶಕರು ನೋಡಿದಂತ, ಗೆಳೆಯರು ಹೇಳಿದಂತ ಘಟನೆಗಳನ್ನು ಚಿತ್ರರೂಪಕ್ಕೆ ತರಲಾಗುತ್ತಿದೆ. ಡಾ.ನಾಗೇಂದ್ರಪ್ರಸಾದ್,ಸಿಂಪಲ್‌ಸುನಿ ಮತ್ತು ಸಿದ್ದುಕೋಡಿಪುರ ಸಾಹಿತ್ಯದ ನಾಲ್ಕು ಹಾಡುಗಳಿಗೆ ಬಿ.ಆರ್.ಹೇಮಂತ್‌ಕುಮಾರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಸಂಭಾಷಣೆ ಹಾಗೂ ಒಂದು ಹಾಡಿಗೆ ಮಳವಳ್ಳಿಸಾಯಿಕೃಷ್ಣ ಪೆನ್ನು ಕೆಲಸ ಮಾಡುತ್ತಿದೆ. ಛಾಯಾಗ್ರಹಣ ನಿರಂಜನ್‌ಬಾಬು, ಸಾಹಸ ರವಿವರ್ಮ, ಸಂಕಲನ ಗಿರೀಶ್‌ಕುಮಾರ್.ಕೆ ನಿರ್ವಹಿಸುತ್ತಿದ್ದಾರೆ. ಚಲನಚಿತ್ರ ಕ್ರಿಯೆಶನ್ಸ್ ಮೂಲಕ ನಿರ್ಮಾಣ ಮಾಡುತ್ತಿರುವ ಗಿರೀಶ್‌ಕೋಲಾರ ಅವರಿಗೆ ಹೊಸ ಅನುಭವ. ನಾಗರಬಾವಿಯ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಸರಳವಾಗಿ ಮಹೂರ್ತ ನಡೆಯಿತು. ‘ಈ ಇಂಗ್ಲೀಷ್ ಮಂಜನಿಗೆ ಕನ್ನಡದ ಹುಡುಗಿ ಕಮಲಿ ಅಂದರೆ ಪ್ರೀತಿ. ಅವಳು ಯಾವಾಗಲೂ ಹೇಳ್ತಾಳೆ. ಲೋ ಮಂಜ ನೀನು ದೋಸ್ತ್ ಮುಂದೆ ಕೂಸು ಆಗಿರು. ಆದರೆ ದುಷ್ಮನ್ ಮುಂದೆ ಮಾಸ್ ಆಗಿರು. ಏನೇ ಕಮಲಿ’ ಎನ್ನುವ ದೃಶ್ಯಕ್ಕೆ ಕಿಸ್ ಖ್ಯಾತಿಯ ನಿರ್ದೇಶಕ ಎ.ಪಿ.ಅರ್ಜುನ್ ಕ್ಲಾಪ್ ಮಾಡಿದರೆ, ಅಯೋಗ್ಯ ನಿರ್ದೇಶಕ ಮಹೇಶ್‌ಕುಮಾರ್ ಕ್ಯಾಮಾರ ಆನ್ ಮಾಡಿ ಶುಭ ಹಾರೈಸಿದರು.