Sri Allamaprabhu.Film Muhurtha.

Friday, December 11, 2020

510

ತೆರೆ ಮೇಲೆ ಶ್ರೀ ಅಲ್ಲಮಪ್ರಭು ದಿವ್ಯ ಚರಿತ್ರೆ

      ಹಿರಿಯ ನಿರ್ದೇಶಕ ನಾಗಭರಣ ಸಾರಥ್ಯದಲ್ಲಿ ‘ಅಲ್ಲಮ’ ಚಿತ್ರವೊಂದು ತೆರೆಕಂಡಿತ್ತು. ಈಗ ಬೇರೊಂದು ತಂಡದಿಂದ ‘ಶ್ರೀ ಅಲ್ಲಮಪ್ರಭು’ ಸಿನಿಮಾ ಸೆಟ್ಟೇರಿದೆ. ದಿವ್ಯ ಸ್ವಾಮೀಜಿಗಳು ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್‌ಬಿದರಿ ಉಪಸ್ಥಿತಿಯಲ್ಲಿ ಮಹೂರ್ತ ಸಮಾರಂಭವು ಸರಳವಾಗಿ ನಡೆಯಿತು. ರಾಜ್ಯ ಪ್ರಶಸ್ತಿ ಪುರಸ್ಕ್ರತ ಡಿ.ಕೆ.ಶಿವರಾಜ್ ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಮಾಧವಾನಂದ ಕತೆ,ಚಿತ್ರಕತೆ ಹಾಗೂ  ಪಾಲುದಾರರು. ಶ್ರೀ ಶ್ರೀ ಮಹಾವೀರಪ್ರಭು  ಅವರು ಅಮರಜ್ಯೋತಿ ಪಿಕ್ಚರ‍್ಸ್ ಮುಖಾಂತರ ನಿರ್ಮಾಣ ಮಾಡುತ್ತಿದ್ದಾರೆ. ಸಂಗೀತ ಕುಮಾರ್‌ಈಶ್ವರ್, ಛಾಯಾಗ್ರಹಣ ಮಂಜುನಾಥ್.ಆರ್, ಸಂಕಲನ ಕೆಂಪರಾಜ್.ಬಿ.ಎಸ್, ಸಂಭಾಷಣೆಗೆ ರಾಜಾರವಿ ಮುಂತಾದವರು ಪೆನ್ನು ಹಿಡಿಯಲಿದ್ದಾರೆ. 

        ಇದು ಕಾಳಗದ ಕಥೆಯಲ್ಲ, ಪ್ರೇಮದ ವ್ಯಥೆಯಲ್ಲ, ದಾಯಾದಿಗಳ ಮತ್ಸರವಲ್ಲವೆಂದು ಪೋಸ್ಟರ್‌ದಲ್ಲಿ ಹೇಳಿಕೊಂಡಿದೆ. ಶೂನ್ಯ ಸಿಂಹಾಸನಾಧೀಶ್ವರನೆಂದು ಅಡಿಬರಹವಿದೆ. ವ್ಯೋಮಕಾಯ ಸಿದ್ದ ಶ್ರೀ ಅಲ್ಲಮಪ್ರಭುರವರ ಬಾಲ್ಯ, ಯೌವ್ವನ, ಮುಂದೆ ಕಲ್ಯಾಣಕ್ಕೆ ಹೋಗಿ, ಕಲ್ಯಾಣ ಕ್ರಾಂತಿ ಶುರುವಾಗುವ ತನಕ ತೋರಿಸಲಾಗುತ್ತಿದೆ. ಅಂದರೆ ಸಮಾಜ ಪರಿವರ್ತನೆ ಕಷ್ಟದ ಕೆಲಸ. ಸುಲುಭವಾಗಿ ಆಗುವಂತದಲ್ಲ. ನೀನು ಶುರು ಮಾಡಿರುವ ಒಳ್ಳೆಯ ಕಾರ್ಯವನ್ನು ಮುಂದೆ ನಡೆಸಿಕೊಂಡು ಹೋಗು. ನಿನ್ನಂಥ ಮಹಾಪುರುಷರು ಹುಟ್ತಾರೆ. ಕಳವಳಕ್ಕೆ ಒಳಗಾಗಬೇಡ. ಅದಕ್ಕೆ ಇಲ್ಲಿರುವುದು ಅನಾವಶ್ಯಕ ಎಂದು ಬಸವೇಶ್ವರರಿಗೆ ಹೇಳುತ್ತಾರೆ. ಕದಡಿಗೆ ಹೋಗು ಅಂತ ಸಲಹೆ ನೀಡಿ, ಉಳಿದವರನ್ನು ಒಂದೊಂದು ಜಾಗಕ್ಕೆ ಕಳುಹಿಸಿ, ಪ್ರಭುಗಳು ಶ್ರೀಶೈಲಕ್ಕೆ ಹೋಗುತ್ತಾರೆ. ಅಲ್ಲಿ ಯೋಮಕಾರ್ಯದಲ್ಲಿ ಸಮಾಜ ಸ್ಥಿತಿಯನ್ನು ಹೊಂದುವ ತನಕ ಸನ್ನಿವೇಶಗಳು ಬರುತ್ತದೆ.

        ಎನ್‌ಕೌಂಟರ್ ದಯಾನಂದ್ ಚಿತ್ರದ ಖ್ಯಾತಿ ಸಚ್ಚಿನ್‌ಸುವರ್ಣ ಶೀರ್ಷಿಕೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗುರುಗಳಾಗಿ ರಾಮಕೃಷ್ಣ, ಮಾಯಿ ಮತ್ತು ಬಸವಣ್ಣನ ಪಾತ್ರಕ್ಕೆ ಅಡಿಷನ್ ಮೂಲಕ ಸೂಕ್ತ ಕಲಾವಿದರನ್ನು ಆಯ್ಕೆ ಮಾಡಲಿದ್ದಾರೆ. ತಾರಗಣದಲ್ಲಿ ಮೂಗುಸುರೇಶ್, ಅರವಿಂದ್‌ರಾವ್‌ಕೇಸರ್‌ಕರ್, ಅರವಿಂದಜತ್ತಿ ಬಣ್ಣ ಹಚ್ಚಲಿದ್ದಾರೆ.   ಹಾಡುಗಳಿಗೆ ಜಾಗವಿಲ್ಲದ ಕಾರಣ, ಅಲ್ಲಮರ ಹದಿನೈದು,ಬಸವಣ್ಣನವರ ಮೂರು ವಚನಗಳನ್ನು ಬಳಸಲಾಗುತ್ತಿದೆ. ಬನವಾಸಿ, ಬೆಂಗಳೂರು ಹಾಗೂ ಅನುಭವ ಮಂಟಪದಲ್ಲಿ ಸೆಟ್ ಹಾಕಿ ಇಪ್ಪತ್ತು ದಿನಗಳ ಕಾಲ ಚಿತ್ರೀಕರಣ ನಡೆಸಲು ತಂಡವು ಯೋಜನೆ ಹಾಕಿಕೊಂಡಿದೆ.  ಅಂದಾಜು ಎಪ್ಪತ್ತೈದು ಲಕ್ಷದಲ್ಲಿ ಸಿದ್ದಗೊಳ್ಳುತ್ತಿರುವ ಸಿನಿಮಾವು ಮಾರ್ಚ್ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.

 

Copyright@2018 Chitralahari | All Rights Reserved. Photo Journalist K.S. Mokshendra,