ಸೇತುಬಂದು ಸಾಹಸಿಗನ ಸಿನಿಮಾ
ಪ್ರಪಂಚದಲ್ಲಿ ಕೆಲವರು ಮಾತ್ರ ಯಾವುದೇ ಅಪೇಕ್ಷೆ ಹೊಂದದೆ ಸಮಾಜ ಸೇವೆಯಲ್ಲಿ ತೊಡಗಿಕೊಂಡು ಯಶಸ್ವಿಯಾದ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಆ ಪೈಕಿ ಸುಳ್ಯಾದ ಗಿರೀಶ್‌ಭಾರದ್ವಾಜ್ ಒಬ್ಬರು. ಮಂಡ್ಯಾದಲ್ಲಿ ವಿದ್ಯಾಭ್ಯಾಸ ಮುಗಿಸಿ, ಬೆಂಗಳೂರಲ್ಲಿ ಉದ್ಯೋಗ ಮಾಡಿಕೊಂಡಿದ್ದ, ಇವರು ತೂಗು ಸೇತುವೆUಳು ನಿರ್ಮಾಣ ಮಾಡುವುದರ ಮೂಲಕ ಮನುಷ್ಯರ ಬದುಕು ಸಂಬಂದಗಳನ್ನು ಕಟ್ಟಿದವರು. ಇವರ ಸೇವೆಯನ್ನು ಪರಿಗಣಿಸಿದ ಕೇಂದ್ರ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ಸೇರಿದಂತೆ ಭಾರತದಾದ್ಯಂತ ೧೩೯ ಸೇತುವೆಗಳನ್ನು ಕಟ್ಟಿ, ೨೪೦ ಹಳ್ಳಿಗಳಲ್ಲಿ ಸಂಪರ್ಕ ಕ್ರಾಂತಿಗೆ ನಾಂದಿಯಾಗಿ, ಮೂರು ಲಕ್ಷಕ್ಕೂ ಹೆಚ್ಚು ಜನರ ಬದುಕು ಮತ್ತು ಕನಸುಗಳನ್ನು ದಿಟ ಮಾಡಿದ ಸಾಧಕ. ಇವರನ್ನು ಸೇತು ಬಂದು ಅಂತಲೂ ಕರೆಯುತ್ತಾರೆ. ಈ ಸಾಹಸಿಗನ ಬದುಕು ‘ದ ಬ್ರಿಡ್ಜ್ ಮ್ಯಾನ್’ ಹೆಸರಿನೊಂಡಿಗೆ ಸಿನಿಮಾ ಆಗುತ್ತಿರುವುದು ವಿಶೇಷ.
ಮೊನ್ನೆ ತಾನೆ ಚಿತ್ರದ ಟೈಟಲ್ ಅನಾವರಣಗೊಂಡಿತು. ಸಂತೋಷ್‌ಕೊಡಂಕೇರಿ ನಿರ್ದೇಶನದಲ್ಲಿ ಎಸ್.ಕೆ.ಟಾಕೀಸ್ ಮುಖಾಂತರ ಶಾಂತಕುಮಾರ್ ನಿರ್ಮಾಣ ಮಾಡುತ್ತಿರುವುದು ಎರಡನೇ ಅನುಭವ. ಶೀರ್ಷಿಕೆಯಾಗಿ ಯಾರು ಕಾಣಿಸುತ್ತಾರೆಂಬುದು ಇನ್ನಷ್ಟೇ ತಿಳಿಯಬೇಕಿದೆ. ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಸಿದ್ದಗೊಳ್ಳುತ್ತಿರುವುದರಿಂದ ಎರಡು ಕಡೆ ಬಲ್ಲ ಕಲಾವಿದರನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆಯಂತೆ. ಅವರು ಹುಟ್ಟಿ ಬೆಳೆದ ಹಳ್ಳಿಯ ಸಮಸ್ಯೆಗಳು. ಹಳ್ಳಿ ಹಾಗೂ ನಗರಗಳ ಸಂಪರ್ಕ ಕಲ್ಪಿಸುವ ತೂಗು ಸೇತುವೆ ಕಟ್ಟುವ ಮೂಲಕ ಸಾಹಸ ಆರಂಭಿಸಿದ ಸಾಹಸಿಗನ ಕತೆಯನ್ನು ಸಿನಿಮಾ ಮಾಡುತ್ತಿರುವುದು ಸಂತಸದ ವಿಷಯವೆಂದು ನಿರ್ದೇಶಕರು ಮಾದ್ಯಮದ ಮುಂದೆ ಹೇಳಿಕೊಂಡರ. ಸಂಗೀತ ವಿನಯ್‌ಶರ್ಮ, ಛಾಯಾಗ್ರಹಣ ಧನ್ವಿಕ್‌ಗೌಡ ಅವರದಾಗಿದೆ.