ಒಂದು ಸಾವಿರ ಪರದೆ ಮೇಲೆ ಪೊಗರುದರ್ಶನ
ಕರೋನ ನಂತರಚಿತ್ರರಂಗಕ್ಕೆ ‘ಪೊಗರು’ ಚಿತ್ರದ ಮೂಲಕ ದೊಡ್ಡ ಶಕ್ತಿ ಬಂದಂತೆಆಗುತ್ತಿದೆ.ನಾಯಕಧ್ರುವಸರ್ಜಾಅಧಿಕೃತವಾಗಿ ಫೆಬ್ರವರಿ ೧೯ರಂದು ತೆರೆಗೆ ಬರಲಿದೆಎಂದು ಹೇಳಿದ್ದಾರೆ.ಇದರಜೊತೆಗೆ ತಮಿಳು ಮತ್ತುತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ಬರುತ್ತಿರುವುದು ವಿಶೇಷ. ಮೂಲಗಳ ಪ್ರಕಾರಒಂದು ಸಾವಿರ ಪರದೆಗಳಲ್ಲಿ ಕಾಣಿಸಿಕೊಳ್ಳುತ್ತಿದೆ.ಈ ಕುರಿತಂತೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡವು ಮಾದ್ಯಮದಎದುರು ಹಾಜರಾಗಿತ್ತು.ಇವರೊಂದಿಗೆಚಂದನವನದ ಬಿಗ್ ಬಜೆಟ್ ನಿರ್ಮಾಪಕರುಗಳು ಆಗಮಿಸಿದ್ದರು. ನಿರ್ಮಾಪಕಗಂಗಾಧರ್, ನಿರ್ದೇಶಕ ನಂದಕಿಶೋರ್, ಇವರೊಂದಿಗೆಧರ್ಮ, ಗಿರಿಜಾಲೋಕೇಶ್, ಕರಿಸುಬ್ಬು ಮುಂತಾದವರು ಖುಷಿ ಹಂಚಿಕೊಂಡರು.
ರಾಘವೇಂದ್ರರಾಜ್‌ಕುಮಾರ್ ಮಾತನಾಡಿ ‘ಪೊಗರು’ದಲ್ಲಿ ನಾನಿದ್ದೇನೆಎಂದು ಹೇಳಿಕೊಳ್ಳುವುದೆ ಸಂತಸವಾಗಿದೆ.ಅದೊಂದುರೀತಿಯ ವಿಭಿನ್ನ ಪಾತ್ರವಾಗಿದೆ.ಧ್ರುವಸರ್ಜಾಅವರಲ್ಲಿ ನಾನು ಶಿವಣ್ಣ, ಅಪ್ಪುಅವರನ್ನುಕಂಡಿದ್ದೇನೆ. ಇಡೀದೇಶವೇತಿರುಗಿ ನೋಡವಂತಹ ಸಿನಿಮಾ ಮಾಡಿದ್ದಾರೆ.ಇದುಖಂಡಿತದೊಡ್ಡ ಗೆಲುವು ಕಾಣುತ್ತದೆಂದು ಭವಿಷ್ಯ ನುಡಿದರು.
ಪಾತ್ರದ ಸಲುವಾಗಿ ಮೂರು ವರ್ಷಯಾವುದೇಚಿತ್ರಒಪ್ಪಿಕೊಂಡಿಲ್ಲ. ಅದರಲ್ಲೂ ಹತ್ತನೇತರಗತಿ ಹುಡುಗನಾಗಿ ಕಾಣಿಸಿಬೇಕಾಗಿದ್ದರಿಂದ ೬೫ ಕೆಜಿತೂಕ ಇಳಿಸಬೇಕಾಯಿತು.ನಂತರ ೧೨೦ ಕೆಜಿಗೆ ಬರಬೇಕಾಯಿತುಅಂತಧ್ರುವಸರ್ಜಾ ಹೇಳಿದರು.
ಒಂಬತ್ತು ತಿಂಗಳಿನಿಂದಲೂ ದೊಡ್ಡ ಬಜೆಟ್ ಚಿತ್ರಗಳ ನಿರ್ಮಾಪಕರುತುಂಬಾ ಕಷ್ಟ ಪಟ್ಟಿದ್ದಾರೆ.ಅದಕ್ಕಾಗಿ ಹಿಂದೆಇದ್ದಂತೆ ಬಾಡಿಗೆ ಪದ್ದತಿಯನ್ನೇ ಮುಂದುವರೆಸಿಕೊಂಡು ಹೋಗುವುದು ಸೂಕ್ತ.ಯಾವುದೇಕಾರಣಕ್ಕೂ ಶೇರ್ ಬೇಡ.ಬಾಡಿಗೆ ವ್ಯವಸ್ಥೆಯೇ ಮುಂದುವರೆಯಬೇಕೆಂಬ ಆಗ್ರಹ ನಿರ್ಮಾಪಕರುಗಳಿಂದ ಕೇಳಿಬಂತು.ಅಂದಹಾಗೆ ಮಾರ್ಚ್ ೧೧ಕ್ಕೆ ‘ರಾಬರ್ಟ್’, ಏಪ್ರಿಲ್ ೧ರಂದು ‘ಯುವರತ್ನ’, ೧೫ರಂದು ‘ಸಲಗ’, ೨೫ಕ್ಕೆ ‘ಕೋಟಿಗೊಬ್ಬ-೩’, ಮೇ ೧೫ ಕ್ಕೆ ‘ಭಜರಂಗಿ-೨, ಜೂನ್‌ದಲ್ಲಿ ‘ವಿಕ್ತಾಂತ್‌ರೋಣ’ ಆಗಸ್ಟ್‌ದಲ್ಲಿ ‘ಕೆಜಿಎಫ್-೨’ ಬಿಡುಗಡೆಯಾಗುತ್ತಿರುವುದಾಗಿ ಮಾಹಿತಿ ಲಭ್ಯವಾಯಿತು.