ರಕ್ತಪಾತವಿಲ್ಲದ ರೌಡಿಸಂ ಚಿತ್ರ
ರೌಡಿಸಂ ಚಿತ್ರವೆಂದರೆ ಅಲ್ಲಿ ರಕ್ತಪಾತ, ಕೊಲೆಗಳು ಇರುತ್ತದೆ. ಆದರೆ ‘ಬಳೆಪೇಟೆ’ ಚಿತ್ರವು ರೌಡಿಸಂ ಆಗಿದ್ದರೂ ಇವೆರಡು ಇಲ್ಲದೆ ಇರುವುದು ವಿಶೇಷ. ಅದು ಏನೆಂದು ಟಾಕೀಸ್‌ದಲ್ಲಿ ಗೊತ್ತಾಗುತ್ತದಂತೆ. ಕಾಲ್ಪನಿಕ ಬಳೆಪೇಟೆ ಸುತ್ತ ನಡೆಯುವ ಸಂಗತಿಗಳು ಸನ್ನವೇಶಗಳಲ್ಲಿ ತೆರೆದುಕೊಳ್ಳುತದೆ. ಹಲವು ಸಿನಿಮಾಗಳಿಗೆ ಛಾಯಾಗ್ರಾಹಕ ಮತ್ತು ಸಂಕಲನ ಮಾಡಿರುವ ರಿಷಿಕೇಶ್ ಕತೆ ಬರೆದು ಸಂಕಲನ, ಕ್ಯಾಮಾರ ಕೆಲಸ ಮಾಡುವ ಜೊತೆಗೆ ನಿರ್ದೇಶನ ಮಾಡುತ್ತಿರುವುದು ಹೊಸ ಅನುಭವ. ಆರ್‌ವಿಎಸ್ ಪ್ರೊಡಕ್ಷನ್ ಮೂಲಕ ಬನಾನಶಿವರಾಂ ನಿರ್ಮಾಣ ಮಾಡುತ್ತಿದ್ದು, ಇವರೊಂದಿಗೆ ಡಾಟ್ ಟಾಕೀಸ್ ಕೈ ಜೋಡಿಸಿದೆ. ಡಿಗ್ಲಾಮ್ ಲುಕ್, ಕೆದರಿದ ಕೂದಲಲ್ಲಿ ಕಾಣಿಸಿಕೊಂಡಿರುವ ಅನಿತಾಭಟ್ ಇಲ್ಲಿಯವರೆವಿಗೂ ಮಾಡಿರದ ಪಾತ್ರದಲ್ಲಿ ನಟಿಸಿದ್ದಾರೆ. ಇವರಿಗೆ ಜೋಡಿಯಾಗಿ ಪ್ರಮೋದ್‌ಭೂಪಣ್ಣ ಅಭಿನಯವಿದೆ.
ಮತ್ತೋಂದು ಮುಖ್ಯ ಪಾತ್ರಗಳಲ್ಲಿ ಮಯೂರ್‌ಪಟೇಲ್, ಅಭಿಷೇಕ್‌ಮಲ್ನಾಡ್ ಹಾಗೂ ಎದುರಾಳಿಯಾಗಿ ಉಮೇಶ್‌ಬಣಕಾರ್ ಮುಂತಾದವರು ಇದ್ದಾರೆ. ಹಾಡುಗಳಿಗೆ ಲೋಹಿತ್ ರಾಗ ಸಂಯೋಜಿಸಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್‌ದಲ್ಲಿ ಬ್ಯುಸಿ ಇದ್ದು, ಮೇ ತಿಂಗಳಲ್ಲಿ ತೆರೆಕಾಣುವ ಸಾದ್ಯತೆ ಇದೆ. ಮೊನ್ನೆಯಷ್ಟೇ ಟೀಸರ್ ಬಿಡುಗಡೆಗೊಂಡು ವೈರಲ್ ಆಗಿರುವುದು ತಂಡಕ್ಕೆ ಖುಷಿ ತಂದಿದೆ.